100 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಘೋಷಿಸಿದ ಬೀದರ್‌ ಶಿಕ್ಷಣ ಸಂಸ್ಥೆ

Published : Apr 26, 2026, 10:01 AM IST
college students

ಸಾರಾಂಶ

ಬೀದರ್ ಶಿಕ್ಷಣ ಸಂಸ್ಥೆಯು ಎಸ್‌ಎಸ್‌ಎಲ್‌ಸಿಯಲ್ಲಿ 95%ಕ್ಕೂ ಹೆಚ್ಚು ಅಂಕ ಗಳಿಸಿದ 100 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಮೀಣ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಫೌಂಡೇಷನ್‌ ಕೋರ್ಸ್‌ಗಳನ್ನು ಸಹ ನಡೆಸಲಾಗುತ್ತಿದೆ.

ಬೀದರ್‌: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 95ಕ್ಕೂ ಅಧಿಕ ಅಂಕ ಗಳಿಸಿದ ರಾಜ್ಯದ 100 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎರಡು ವರ್ಷದ ಪಿಯು ಶಿಕ್ಷಣವನ್ನು ಉಚಿತವಾಗಿ ನೀಡುವುದಾಗಿ ಇಲ್ಲಿಯ ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹ ಪ್ರಕಟಿಸಿದೆ.

100 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬೀದರ್‌ ಸೇರಿದಂತೆ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು. ಉಚಿತ ಸ್ಥಾನಗಳಲ್ಲಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದಿದ, ತಂದೆಯನ್ನು ಕಳೆದುಕೊಂಡ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಆದ್ಯತೆ ಕೊಡಲಾಗುವುದು ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್‌ ಖದೀರ್‌ ತಿಳಿಸಿದ್ದಾರೆ.

ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಉಚಿತ ಶಿಕ್ಷಣ ಯೋಜನೆಯ ಉದ್ದೇಶವಾಗಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಎರಡು ವರ್ಷದ ಬೋಧನಾ ಶುಲ್ಕದ ಸಂಪೂರ್ಣ ರಿಯಾಯಿತಿ ಇರಲಿದೆ. ಅರ್ಹ ವಿದ್ಯಾರ್ಥಿಗಳು ಸಮೂಹದ ಪದವಿ ಪೂರ್ವ ಕಾಲೇಜುಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಎಐಸಿಯುಗೆ ಶೇ.100 ಫಲಿತಾಂಶ

ಶಾಲೆ ಬಿಟ್ಟ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮರಳಿ ಮುಖ್ಯವಾಹಿನಿಗೆ ತರಲು ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹ ಆರಂಭಿಸಿದ ಶೈಕ್ಷಣಿಕ ತುರ್ತು ನಿಗಾ ಘಟಕ (ಎಐಸಿಯು) ಪರಿಣಾಮಕಾರಿ ಫಲಿತಾಂಶ ನೀಡುತ್ತಾ ಮುನ್ನಡೆದಿದೆ. ಶಾಲೆ ಬಿಟ್ಟ 90 ವಿದ್ಯಾರ್ಥಿಗಳು ಇಲ್ಲಿಯ ಶಾಹೀನ್‌ ಪ್ರೌಢಶಾಲೆಯಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 81 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಶಾಹೀನ್‌ ತುರ್ತು ಶೈಕ್ಷಣಿಕ ನಿಗಾ ಘಟಕದಲ್ಲಿ ಓದಿದವರಾಗಿರುವುದು ವಿಶೇಷ ಎಂದು ಅವರು ತಿಳಿಸಿದ್ದಾರೆ.

ವಿಶೇಷ ನಿಗಾ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ತರುವ ಹಾಗೂ ಅವರ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಶಾಹೀನ್‌ ಶೈಕ್ಷಣಿಕ ತುರ್ತು ನಿಗಾ ಘಟಕದ ಮಾದರಿಯನ್ನು ಪ್ರಶಂಸಿಸಿರುವ ಜಾಗತಿಕ ಮಟ್ಟದ ನಿಯತಕಾಲಿಕೆಯ ಭಾರತೀಯ ಆವೃತ್ತಿಯಾದ ಫೋರ್ಬ್ಸ್‌ ಇಂಡಿಯಾ, ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್‌ ಖದೀರ್‌ ಅವರನ್ನು ''''‘ಲೀಡರ್‌ ಆಫ್‌ ಟುಮಾರೋ’ ಎಂದು ಗುರುತಿಸಿದೆ.

ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಕನ್ನಡದಲ್ಲಿ ಫೇಲಾಗಿದ್ದು ಮಕ್ಕಳಷ್ಟೇ ಅಲ್ಲ; ಅಮುಲಾಗ್ರ ಬದಲಾವಣೆಗೆ ತಜ್ಞರ ಒತ್ತಡ

ಪ್ರಿ ಪ್ಲಸ್‌ ಟು ಫೌಂಡೇಷನ್‌ ಕೋರ್ಸ್ 

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣ, ಅನುತ್ತೀರ್ಣರಾದವರಿಗೆ ವಿಷಯಗಳ ಮೇಲೆ ಹಿಡಿತವಿಲ್ಲದ, ವಿಷಯಗಳನ್ನು ಅರಿತುಕೊಳ್ಳಲಾಗದ ವಿದ್ಯಾರ್ಥಿಗಳ ನೀಟ್‌ / ಜೆಇಇ ಕನಸು ಸಾಕಾರಗೊಳಿಸಲು ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹ ಮೂರು ವರ್ಷದ ಪ್ರಿ ಪ್ಲಸ್‌ ಟು ಫೌಂಡೇಷನ್‌ ಕೋರ್ಸ್ ಸಹ ಆರಂಭಿಸಿದೆ ಎಂದು ಅಬ್ದುಲ್‌ ಖದೀರ್‌ ತಿಳಿಸಿದ್ದಾರೆ.

ಶಾಹೀನ್‌ ವೆಬ್ಸೈಟ್ https://shaheengroup.org ಹಾಗೂ ಟೋಲ್‌ ಫ್ರೀ ಸಂಖ್ಯೆ 1800 121 6235 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: ಕೊನೆಗೂ ಅಂಧ ವಿದ್ಯಾರ್ಥಿನಿಗೆ ಅಂಕದ ಬೆಳಕು ನೀಡಿದ SSLC ಬೋರ್ಡ್! ಫೇಲಾದ ಹುಡಗಿಗೆ ಈಗ 603 ಅಂಕ!

PREV
Read more Articles on
click me!

Recommended Stories

ಸರ್ಕಾರಿ ನೌಕರರಿಗೆ ರಕ್ಷಣೆ ಇಲ್ವೇ? ಕೈ ಮುಖಂಡ ರಾಜೀವ್ ಗೌಡ ಬಳಿಕ ಅಧಿಕಾರಿ ಮೇಲೆ ಬಿಜೆಪಿ ಮುಖಂಡ ಸತೀಶ್ ಗೌಡ ಹಲ್ಲೆ!
Mudigere: ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಗದರಿದ್ದಕ್ಕೆ ಪ್ರಾಣ ಕಳೆದುಕೊಂಡ 22ರ ಮಗಳು