ಬಿಜೆಪಿ ಸೇರಲು ಸಜ್ಜಾದರಾ ರಾಜ್ಯದ ಕಾಂಗ್ರೆಸ್ ಶಾಸಕ?

By Kannadaprabha News  |  First Published Sep 10, 2019, 12:13 PM IST

16ಕ್ಕೂ ಹೆಚ್ಚು ಶಾಸಕರು ಅತೃಪ್ತರಾಗಿ ಕಾಂಗ್ರೆಸ್ ಬಿಟ್ಟು ಹೊರ ನಡೆದಿದ್ದು, ಇದೀಗ ಮತ್ತೋರ್ವ ಶಾಸಕ ಕಾಂಗ್ರೆಸ್ ಬಿಡುವ ವದಂತಿ ಹರಡಿದೆ. 


ಬೀದರ್‌ [ಸೆ.10]:  ಕಾಂಗ್ರೆಸ್‌ ಶಾಸಕರು ಬಿಜೆಪಿಯತ್ತ ಮುಖಮಾಡುತ್ತಿರುವ ಈ ದಿನಗಳಲ್ಲಿ ಹುಮನಾಬಾದ್‌ನಲ್ಲಿ ಇಂಥದ್ದೊಂದು ಆತಂಕ ಕಾಂಗ್ರೆಸ್‌ ಕಾರ್ಯಕರ್ತರಿಗಿಂತ ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಚಿಂತೆಗೀಡು ಮಾಡಿದ್ದು, ಕೈ ಶಾಸಕರನ್ನು ಸೆಳೆಯದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಅವರಲ್ಲಿ ಅಂಗಲಾಚಿದ್ದಾರೆ.

ಹುಮನಾಬಾದ್‌ ವಿದಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕರನ್ನ ಬಿಜೆಪಿ ಪಕ್ಷದ ಸೇರ್ಪಡೆಗೆ ಅನುವು ಮಾಡಿಕೊಡಬಾರದು, ನಾಲ್ಕು ದಶಕಗಳಿಂದ ಕಟ್ಟಿಬೆಳೆಸಿದ ಕಾರ್ಯಕರ್ತರು ಹತಾಶರಾಗುತ್ತಾರೆ ಎಂದು ಪಕ್ಷದ ಮುಖಂಡರು. ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಸೋಮವಾರ ಕಲಬುರಗಿಯಿಂದ ಬೀದರ್‌ಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯ ಪಟ್ಟಣದಲ್ಲಿ ಭೇಟಿಯಾಗಿ ಮನವಿಸಿದ್ದಾರೆ.

Latest Videos

undefined

ಮಾಜಿ ಶಾಸಕ ಸುಭಾಷ ಕಲ್ಲೂರ್‌, ಪಕ್ಷದ ತಾಲೂಕಾಧ್ಯಕ್ಷ ವಿಶ್ವನಾಥ ಪಾಟೀಲ್‌ ಮಾಡಗೂಳ, ಪದ್ಮಾಕರ್‌ ಪಾಟೀಲ್‌, ಸೋಮನಾಥ ಪಾಟೀಲ್‌ ಮತ್ತಿತರರ ನೇತೃತ್ವದಲ್ಲಿ ಮನವಿ ಸಲ್ಲಿಸಿ ಕಾರ್ಯಕರ್ತರ ಭಾವನೆಗಳಿಗೆ ನೋವಾಗದಂತೆ ಸ್ಥಳೀಯ ಕಾಂಗ್ರೆಸ್‌ ಶಾಸಕರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ 2012ರಲ್ಲಿ ಶಾಸಕ ರಾಜಶೇಖರ ಪಾಟೀಲ್‌ ಅವರ ತಂದೆ ಬಸವರಾಜ ಪಾಟೀಲ್‌ ಹುಮನಾಬಾದ್‌ ಬಿಜೆಪಿ ಸೇರ್ಪಡೆಯಾದಾಗ ಪಕ್ಷದ ಕಾರ್ಯಕರ್ತರೆಲ್ಲ ಸೇರಿಕೊಂಡು ಶ್ರಮಿಸಿ ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಗಿತ್ತು.ಅದಕ್ಕೂ ಮುನ್ನ 1999ರಲ್ಲಿ ಸುಭಾಷ ಕಲ್ಲೂರ ಅವರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. 2018ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಮೊಕದ್ದಮೆ ಹೂಡಲಾಗಿದೆ. ಸ್ಥಳೀಯ ಶಾಸಕರನ್ನು ಪಕ್ಷದಲ್ಲಿ ಸೇರ್ಪಡೆಗೆ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ವಿರೋಧವಿದೆ. ಹೀಗಾಗಿ ಬರುವ ದಿನಗಳಲ್ಲಿ ಶಾಸಕರು ಬಿಜೆಪಿ ಸೇರುವ ವದಂತಿಗಳಿವೆ. ಪಕ್ಷ ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಳ್ಳಲಾಗಿದೆ.

ಜಿಲ್ಲಾ ಉಪಾದ್ಯಕ್ಷ ಶಿವಾನಂದ ಮಂಠಾಳಕರ್‌, ಸೂರ್ಯಕಾಂತ ಮಠಪತಿ, ನಾಯಕ ಮಂಡಾ, ಬ್ಯಾಂಕ್‌ ರೆಡ್ಡಿ, ಗುಂಡು ರೆಡ್ಡಿ, ಸೈಯದ್‌ ಇಲಿಯಾಸ್‌, ಗಜೇಂದ್ರ ಕನಕಟಕರ್‌, ಪ್ರಭಾಕರ ನಾಗರಾಳೆ, ಭೀಮಣ್ಣ ಕೊಳ್ಳೆ, ಪ್ರಕಾಶ ತಾಳಮಡಗಿ, ನಾಗೇಶ ಕಲ್ಲೂರ, ವಿಜಯಕುಮಾರ ದುರ್ಗದ, ಶ್ರೀಮಂತ ಪಾಟೀಲ್‌, ರಮೇಶ ಕಲ್ಲೂರ, ನರಸಿಂಗ್‌ ಸಗರ, ಸುಶೀಲ ಮರಪಳ್ಳಿ, ಕ್ರಿಸ್ತಾನಂದ ಚಿಟಗುಪ್ಪ, ಅಭಿಮನ್ಯು ನಿರಗಡೆ, ಅರುಣ ಬಾವಗಿ, ಮಧುಕರ ಲಾಲಪೂರ, ಅವಿನಾಶ ಪೂಲದಾಸ, ಸಂಭಾಜಿ ಪಾಟೀಲ್‌ ಹಾಗೂ ಗೌರಮ್ಮ ಬಿರಾದಾರ ಸೇರಿದಂತೆ ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

click me!