ಬಸ್ಟ್ಯಾಂಡ್‌ನಲ್ಲಿ ನಿಂತಿದ್ದ ಬಸ್‌ ಚಲಾಯಿಸಿಕೊಂಡು ಹೋದ ಕುಡುಕ: ಆಕ್ಸಿಡೆಂಟ್‌ ಮಾಡಿ ನಿಲ್ಲಿಸಿದ

By Sathish Kumar KH  |  First Published Jun 6, 2023, 4:28 PM IST

ಬೀದರ್‌ನ ಔರಾದ್‌ ಪಟ್ಟಣದ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಅನ್ನು ಕುಡಿತ ಮತ್ತಿನಲ್ಲಿ ಚಲಾಯಿಸಿಕೊಂಡ ಹೋದ ಪ್ರಯಾಣಿಕ, ಆಕ್ಸಿಡೆಂಟ್‌ ಮಾಡಿದ.


ವರದಿ-ಲಿಂಗೇಶ್ ಮರಕಲೆ ಏಷ್ಯಾನೆಟ್​ ಸುವರ್ಣ ನ್ಯೂಸ್​ 

ಬೀದರ್​ (ಜೂ.06): ಜಿಲ್ಲೆಯ ಔರಾದ್ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಂತಿರುವ ಸಾರಿಗೆ ಬಸ್ಸನ್ನು ಪಾನಮತ್ತ ಪ್ರಯಾಣಿಕನೊಬ್ಬ ತಾನೇ ಚಾಲಾಯಿಸಿಕೊಂಡು ಹೋಗಿದ್ದಾನೆ. ಇನ್ನು ಪಟ್ಟಣದ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಓಡಿಸಿ ರಸ್ತೆ ವಿಭಜಕದ ಮೇಲೆ ಬಸ್‌ ಹತ್ತಿಸಿದ್ದಾನೆ. ಆಗ ಬಸ್‌ ತಂತಾನೆ ಆಫ್‌ ಆಗಿದ್ದು, ಮುಂದಾಗುತ್ತಿದ್ದ ಬಹುದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.

Latest Videos

undefined

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಅನ್ನು ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಕರಂಜಿ (ಕೆ) ಗ್ರಾಮದ ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿ ಪಾನಮತ್ತನಾಗಿ ಬಂದು, ಬಸ್‌ ಡ್ರೈವರ್‌ ಸೀಟಿನಲ್ಲಿ ಕುಳಿತು ಚಲಾಯಿಸಿಕೊಂಡು ಹೋಗಿದ್ದಾನೆ. ಈ ಘಟನೆ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ. ಔರಾದ್‌ ನಿಲ್ದಾಣದಲ್ಲಿ ತಮ್ಮ ಊರಿಗೆ ಹೋಗಲು ಬಸ್​ಗಾಗಿ ಕಾಯುತ್ತಾ ನಿಂತಿದ್ದನು. ಆಗ, ತುಂಬಾ ಹಿತ್ತು ಕಾಯುತ್ತಾ ಕುಳಿತಿದ್ದರೂ ತಮ್ಮ ಊರಿಗೆ ಹೋಗಬೇಕಾದ ಬಸ್‌ ಇನ್ನೂ ಬರಲಿಲ್ಲವೆಂದು ಕುಪಿತಗೊಂಡಿದ್ದನು.

ಶಾಸಕರಿಗೆ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್‌ ಸಿಬ್ಬಂದಿ ಅವಾಜ್: ನಿಮ್ಮನ್ನ ಹೈವೆಯಲ್ಲಿ ಬಿಟ್ಟಿಯಾಗಿ ಬಿಡ್ತೀವಿ

ರಸ್ತೆ ಡಿವೈಡರ್‌ಗೆ ಡಿಕ್ಕಿ, ತಪ್ಪಿದ ಪ್ರಾಣಹಾನಿ: ನಂತರ ಎಷ್ಟು ಹೊತ್ತು ಕಾಯುತ್ತಾ ಕುಳಿತೂ ಬಸ್‌ ಬರುವುದಿಲ್ಲವೆಂದು ಸಿಟ್ಟು ಮಾಡಿಕೊಂಡು ನಿಲ್ದಾಣದಲ್ಲಿ ನಿಂತಿರುವ ಬೇರೊಂದು ಮಾರ್ಗದ ಸಾರಿಗೆ ಬಸ್‌ನ್ನು ಹತ್ತಿ, ಸೀದಾ ಡ್ರೈವರ್‌ ಸೀಟಿನಲ್ಲಿ ಕುಳಿತು ಕೀ ಆನ್‌ ಮಾಡಿಕೊಂಡು ಗಾಡಿ ಸ್ಟಾರ್ಟ್‌ ಆಗುತ್ತಲೇ ಬಸ್‌ನ್ನು ತಾನೇ ಚಲಾಯಿಸಿಕೊಂಡು ಹೋಗಿದ್ದಾನೆ. ಬಸ್‌ ನಿಲ್ದಾಣದಿಂದ ಹೊರಗೆ ಬಸ್‌ ಅನ್ನು ಯೆಗೆದುಕೊಂಡು ಹೋಗಿ ಎದುರು ನಿಲ್ದಾಣದ ಎದುರಿನ ರಸ್ತೆಯಲ್ಲಿದ್ದ ರಸ್ತೆ ವಿಭಜಕಕ್ಕೆ ಬಸ್‌ ಅನ್ನು ಡಿಕ್ಕಿ ಹೊಡೆಸಿದ್ದಾನೆ. ಆತಂಕಗೊಂಡ ಒಳಗೆ ಕುಳಿತ ಪ್ರಯಾಣಿಕರು ಚೀರಾಡುವುದನ್ನು ಕೇಳಿಸಿಕೊಂಡ ಅಲ್ಲಿದ್ದವರು ಪಾನಮತ್ತ ವ್ಯಕ್ತಿಯನ್ನು ಹಿಡಿದು ಕೆಳಗಿಳಿಸಿದ್ದಾರೆ.

ಬೀದರ್‌ಗೆ ಹೋಗುವ ಬಸ್‌ ಚಲಾಯಿಸಿಕೊಂಡು ಹೋದ: ಈ ವೇಳೆ ರಸ್ತೆ ಬದಿ ನಿಂತಿದ್ದ ಜೀಪಿಗೂ ಧಕ್ಕೆಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಎಎಸ್ಐ ಸುನೀಲ ಕೋರೆ ಪಾನಮತ್ತ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬೀದರ್‌ಗೆ ಹೋಗಲು ನಿಂತಿದ್ದ ಬಸ್ ಏಕಾ ಏಕಿ ಹತ್ತಿದ ವ್ಯಕ್ತಿ ಈ ರೀತಿ ಅವಾಂತರ ಮಾಡಿದ್ದಾನೆ. ದೇವರು ನಮ್ಮ ಕಡೆ ಇದ್ದಾನೆ. ಹೀಗಾಗಿ ಯಾವುದೇ ಅನಾಹುತ ಆಗಿಲ್ಲ. ಆದರೂ ಆ ವ್ಯಕ್ತಿ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಇಲ್ಲಿಯ ಘಟಕ ವ್ಯವಸ್ಥಾಪಕ ಎಸ್.ಪಿ. ರಾಠೋಡ್ ತಿಳಿಸಿದ್ದಾರೆ.

ಮಹಿಳೆಯರೇ... ಜೂ.11ರಿಂದ ಐಡಿ ತೋರಿಸಿ, ಬಸ್ಸಲ್ಲಿ ಫ್ರೀ ಓಡಾಡಿ

ಒಡಿಶಾ ದುರ್ಘಟನೆ: ನಮಗೆ ಸನ್ಮಾನ ಬೇಡವೆಂದ ಖಂಡ್ರೆ, ರಹೀಂ ಖಾನ್: 
ಬೀದರ್‌ (ಜೂ.4) : ರೈಲು ದುರಂತದಿಂದ ದೇಶ ಶೋಕ ಸಾಗರದಲ್ಲಿ ಇದ್ದಾಗ ನಮಗೆ ಸನ್ಮಾನ, ಸಂತಸ, ಮೆರವಣಿಗೆ ಬೇಡ, ನಾವೂ ಸಂತ್ರಸ್ತರ ದುಃಖದಲ್ಲಿ ಒಂದಾಗುತ್ತೇವೆಂದು ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್‌ ಹೇಳಿದರು. ಜಿಲ್ಲೆಯ ಇಬ್ಬರು ನೂತನ ಸಚಿವರು ಪ್ರಥಮ ಬಾರಿಗೆ ಸಚಿವರಾಗಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭವ್ಯ ಸ್ವಾಗತ ಕೋರಲು ಶನಿವಾರ ಆಯೋಜಿಸಿದ್ದ ಅದ್ಧೂರಿ ಸ್ವಾಗತಕ್ಕೆ ಅನೇಕ ದೊಡ್ಡ ಹಾಗೂ ಸಾವಿರಾರು ಕಟೌಟ್‌ಗಳು ನಗರಾದ್ಯಂತ ರಾರಾಜಿಸುತ್ತಿದ್ದವು. ಬೆಂಗಳೂರಿನಿಂದ ಹೈದ್ರಾಬಾದ್‌ಗೆ ಆಗಮಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಸನ್ಮಾನ ಒಲ್ಲೆ ಎಂದು ಬೀದರ್‌ ಸಮೀಪಕ್ಕೆ ಬಂದು ಮರಳಿ ಮಾನವೀಯತೆ ಮೆರೆದಿದ್ದಾರೆ.

click me!