ರೈತಸಂಘ ಹೋರಾಟದ ಫಲ; 2 ದಶಕದಿಂದ ಕರೆಂಟ್​ ಬಿಲ್​ ಕಟ್ಟದ ಗ್ರಾಮ!

By Ravi Janekal  |  First Published Jun 6, 2023, 12:00 PM IST

ರಾಜ್ಯ ಸರ್ಕಾರ ಇಂದು ಮನೆ ಮನೆಗೆ 200 ಯುನಿಟ್​ ಉಚಿತ ವಿದ್ಯುತ್ ಕೊಡಲು ಮುಂದಾಗಿದ್ದರೆ ಇತ್ತ ಈ ಒಂದು ಗ್ರಾಮದಲ್ಲಿ ಮಾತ್ರ ರೈತ ಸಂಘದ ನಿರಂತರ ಕಟ್ಟುನಿಟ್ಟಿನ ಹೋರಾಟದ ಫಲವಾಗಿ ಕಳೆದ 2 ದಶಕಗಳಿಂದಲೇ ಇಲ್ಲಿನ ಗ್ರಾಮಸ್ಥರು ಕರೆಂಟ್​ ಬಿಲ್​ ಕಟ್ಟುತ್ತಿಲ್ಲ. ಹೀಗಾಗಿ ಈ ಗ್ರಾಮದಲ್ಲಿ ಕರೆಂಟ್​ ಬಿಲ್​ ಕೊಡೋ ಹಾಗಿಲ್ಲ, ಬಿಲ್ ಕಟ್ಟೋ ಹಾಗಿಲ್ಲ. ಇದು ರೈತಸಂಘದ ಹೋರಾಟದ ಎಫೆಕ್ಟ್. ಈ ಕುರಿತ ವರದಿ ಇಲ್ಲಿದೆ..


ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ..

ಬಾಗಲಕೋಟೆ (ಜೂ.6): ರಾಜ್ಯ ಸರ್ಕಾರ ಇಂದು ಮನೆ ಮನೆಗೆ 200 ಯುನಿಟ್​ ಉಚಿತ ವಿದ್ಯುತ್ ಕೊಡಲು ಮುಂದಾಗಿದ್ದರೆ ಇತ್ತ ಈ ಒಂದು ಗ್ರಾಮದಲ್ಲಿ ಮಾತ್ರ ರೈತ ಸಂಘದ ನಿರಂತರ ಕಟ್ಟುನಿಟ್ಟಿನ ಹೋರಾಟದ ಫಲವಾಗಿ ಕಳೆದ 2 ದಶಕಗಳಿಂದಲೇ ಇಲ್ಲಿನ ಗ್ರಾಮಸ್ಥರು ಕರೆಂಟ್​ ಬಿಲ್​ ಕಟ್ಟುತ್ತಿಲ್ಲ. ಹೀಗಾಗಿ ಈ ಗ್ರಾಮದಲ್ಲಿ ಕರೆಂಟ್​ ಬಿಲ್​ ಕೊಡೋ ಹಾಗಿಲ್ಲ, ಬಿಲ್ ಕಟ್ಟೋ ಹಾಗಿಲ್ಲ. ಇದು ರೈತಸಂಘದ ಹೋರಾಟದ ಎಫೆಕ್ಟ್. ಈ ಕುರಿತ ವರದಿ ಇಲ್ಲಿದೆ..

Tap to resize

Latest Videos

undefined

ಇದು ಸದಾ ಹೋರಾಟದ ಹಾದಿಯಲ್ಲಿರೋ ರೈತಸಂಘದ ಗ್ರಾಮ, ರೈತಸಂಘ(Raita sangha)ದ ಹೋರಾಟದ ಫಲವಾಗಿ ಕಳೆದ 2 ದಶಕದಿಂದ ಇಲ್ಲಿನ ಗ್ರಾಮಸ್ಥರು ಕರೆಂಟ್​ ಬಿಲ್​ ಕಟ್ಟುತ್ತಿಲ್ಲ, ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಇದ್ದರೂ ಬಿಲ್​ ಮಾತ್ರ ಇಲ್ಲಿ ಕಟ್ಟೋದಿಲ್ಲ. ಯಾಕಂದ್ರೆ ಇದು ರೈತಸಂಘದ ಹೋರಾಟದ ಗ್ರಾಮ. ಹೌದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮ. ಈ ಗ್ರಾಮದಲ್ಲಿ ಬರೋಬ್ಬರಿ 3ಸಾವಿರಕ್ಕೂ ಅಧಿಕ ಮನೆಗಳಿವೆ. ರೈತಸಂಘದ ಹೋರಾಟಗಾರರು ಇರೋ ಮನೆಯಲ್ಲಿ ಇಂದಿಗೂ ಕರೆಂಟ್​ ಬಿಲ್​ ಕಟ್ಟೋದಿಲ್ಲ.

ಬಿಲ್‌ ಪಾವತಿಸದ ನೆಪವೊಡ್ಡಿ ಗ್ರಾಪಂಗಳ ವಿದ್ಯುತ್‌ ಕಡಿತ ಮಾಡಬೇಡಿ: ಶಾಸಕ ಮಂಥರ್‌ ಗೌಡ ಸೂಚನೆ 

ಈ ಹಿಂದೆ ಪ್ರೊ.ನಂಜುಂಡಸ್ವಾಮಿ(pro nanjundaswamy) ಮತ್ತು ಸ್ಥಳೀಯ ರೈತ ಮುಖಂಡ ರಮೇಶ ಗಡದನ್ನವರ(Ramesh gadadannavar) ಅವರ ನೇತೃತ್ವದಲ್ಲಿ ಬೃಹತ್​ ಹೋರಾಟವೊಂದು ಶುರುವಾಗಿತ್ತು. ರೈತಸಂಘದ ಬೇಡಿಕೆಯಂತೆ ರೈತರು ಬೆಳೆದ ಬೆಳೆಗೆ ಸರ್ಕಾರ ವೈಜ್ಷಾನಿಕ ಬೆಲೆ ನೀಡದೇ ಇದ್ದರಿಂದ ವೈಜ್ಷಾನಿಕ ಬೆಲೆ ಕೊಡೋವರೆಗೆ ವಿದ್ಯುತ್ ಬಿಲ್ ಕಟ್ಟದೇ ಇರಲು ರೈತರೆಲ್ಲಾ ನಿರ್ಧರಿಸಿದ್ರು. ಇದ್ರಿಂದ ಮುಂದೆ ಗ್ರಾಮದೊಳಕ್ಕೆ ಅಧಿಕಾರಿಗಳು ಸಹ ಬರಲಿಲ್ಲ, ಬಂದ್ರೂ ಅಂದು ಅವರನ್ನ ಕೂಡಿ ಹಾಕಿದ ಪ್ರಸಂಗಗಳೂ ಸಹ ನಡೆದವು. ಮುಂದುವರಿದಂತೆ ಸರ್ಕಾರಗಳು ಇವರ ಮನೆಗಳ ಕರೆಂಟ್​ ಬಿಲ್​ ಸಹ ಕೇಳಲಿಲ್ಲ, ಅಂದಿನಿಂದ ತಮ್ಮ ಹೋರಾಟ ಮುಂದುವರೆಸಿರೋ ರೈತಸಂಘದವರು ಇಂದಿಗೂ ಸಹ ಇಲ್ಲಿರೋ ಮನೆಗಳಲ್ಲಿ ಯಾರೂ ಸಹ ಕರೆಂಟ್ ಬಿಲ್​ ಕಟ್ಟೋದಿಲ್ಲ. ಇದು ಕಳೆದ 2 ದಶಕದಿಂದ ನಡೆದುಕೊಂಡು ಬಂದಿರೋ ರೈತಸಂಘದ ಹೋರಾಟದ ಎಫೆಕ್ಟ್​ ಅಂತಾರೆ ಗ್ರಾಮದ ರೈತಸಂಘದ ಮುಖಂಡರಾದ ವೆಂಕಣ್ಣ ಮಳಲಿ ಮತ್ತು ರಾಚಪ್ಪ.

ಪ್ರೊ.ನಂಜುಂಡಸ್ವಾಮಿ & ರಮೇಶ ಗಡದನ್ನವರ ನೇತೃತ್ವದಲ್ಲಿ ನಡೆದಿದ್ದ ಹೋರಾಟ. ರೈತಸಂಘದ ಚಳುವಳಿಗೆ  ಇನ್ನು 2 ದಶಕದ ಹಿಂದೆ ನಡೆದಿದ್ದ ಹೋರಾಟದಲ್ಲಿ ಪ್ರತಿಯೊಬ್ಬರು ರೈತಸಂಘದಲ್ಲಿ ಧುಮಿಕಿ ಹೋರಾಟವನ್ನ ನಡೆಸಿದ್ದರು. ಅಂದು ಸುಟ್ಟ ಟಿಸಿ ದುರಸ್ಥಿಗಳನ್ನ ವಿದ್ಯುತ್ ಬಿಲ್ ಕಟ್ಟೋವರೆಗೆ ಮಾಡಿಕೊಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ರು, ಇದ್ರಿಂದ ರೊಚ್ಚಿಗೆದ್ದ ರೈತಸಂಘದ ಮುಖಂಡರು ತಾವೇ ಟಿಸಿ ದುರಸ್ಥಿ ಮಾಡಲು ಮುಂದಾದ್ರು, ಪ್ರೊ.ನಂಜುಂಡಸ್ವಾಮಿ ನೇತೃತ್ವದಲ್ಲಿ ಸ್ಥಳೀಯ ರೈತ ನಾಯಕ ರಮೇಶ ಗಡದನ್ನವರ ಅವರ ಸಾರಥ್ಯದಲ್ಲಿ ಟಿಸಿ ದುರಸ್ಥಿ ಚಳುವಳಿ ಸೇರಿದಂತೆ ಸರ್ಕಾರದ ವಿರುದ್ದ ಹೋರಾಟ ಆರಂಭಿಸಿದ್ರು. ಸಾಲದ್ದಕ್ಕೆ ಅತ್ತ ರೈತರ ಬೆಳೆಗೆ ವೈಜ್ಷಾನಿಕ ಬೆಲೆ ಕೊಡದ ಸರ್ಕಾರದ ವಿರುದ್ದ ಅಂದಿನಿಂದ ಹೋರಾಟಕ್ಕಿಳಿದು ಕರೆಂಟ್​ ಬಿಲ್​ ಕಟ್ಟೋದೆ ಇರಲು ನಿರ್ಧರಿಸಿದ್ರು. 

ಅಂದಿನಿಂದ ಇಂದಿನವರೆಗೂ ಸಹ ಇಲ್ಲಿನ ರೈತಸಂಘದವರ ಮನೆಯಲ್ಲಿ ಯಾರೂ ಸಹ ಕರೆಂಟ್​ ಬಿಲ್ ಕಟ್ಟೋದಿಲ್ಲ, ಇತ್ತೀಚಿಗೆ ಕೆಲವೊಬ್ಬರು ಬಿಲ್  ಕಟ್ಟುತ್ತಿರಬಹುದು ಆದ್ರೆ ಬಹುತೇಕರು ತಮ್ಮ ಊರಲ್ಲಿ ಯಾರೂ ಕರೆಂಟ್ ಬಿಲ್ ಕಟ್ಟೋದಿಲ್ಲ ಅಂತಾರೆ ರೈತಸಂಘದ ಮುಖಂಡರಾದ ಸುರೇಶ.

 

ಬಾಗಲಕೋಟೆ: ಎರಡೂವರೆ ವರ್ಷವಾದ್ರೂ ಮುಗಿಯದ ಕಾಮಗಾರಿ, ಜನರಿಗೆ ತಪ್ಪದ ಸಂಕಷ್ಟ..!

ಒಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ ಮನೆ ಮನೆಗೆ 200 ಯುನಿಟ್​ ವಿದ್ಯುತ್​ ಉಚಿತವಾಗಿ ನೀಡಲು ಮುಂದಾಗಿದ್ದರೆ ಕಳೆದ 2 ದಶಕದಿಂದಲೇ ಶಿರೋಳ ಗ್ರಾಮದ ರೈತರ ಮನೆಗೆ ಉಚಿತ ವಿದ್ಯುತ್ ತಲುಪುತ್ತಿರೋದು ಅಚ್ಚರಿಯೊಂದಿಗೆ ವಿಶೇಷವೇ ಸರಿ.

click me!