
ಬೀದರ್(ಆ.30): ಸೆಪ್ಟೆಂಬರ್ 2 ಮತ್ತು 3 ರಂದು ಬೀದರ್ ಕೋಟೆಯ ಮೇಲೆ ಭಾರತೀಯ ವಾಯು ಪಡೆಯಿಂದ ಏರ್ ಶೋ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ಬೀದರ್ ಕೋಟೆಯ ಮೇಲೆ ಏರ್ ಶೋ ನಡೆಸುವ ಕುರಿತು ಪೂರ್ವ ಭಾವಿಯಾಗಿ ಕರೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆಪ್ಟೆಂಬರ್ 2 ರಂದು ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಈ ಏರ್ ಶೋ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.
ಅಂದು ಸಂಜೆ 4.30 ಗಂಟೆಯ ಒಳಗೆ ಎಲ್ಲಾ ವಿದ್ಯಾರ್ಥಿಗಳು ಬೀದರ್ ಕೋಟೆಯ ಒಳಗಡೆ ಇರುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಏರ್ ಶೋ ವೀಕ್ಷಿಸಬೇಕೆಂದು ಹೇಳಿದರು.
ಬೀದರ್‌ನಲ್ಲಿ ಏರ್‌ಶೋ: ಲೋಹದ ಹಕ್ಕಿಗಳ ಚಿತ್ತಾರ ಕಣ್ತುಂಬಿಕೊಂಡ ಜನತೆ..!
ಎಲ್ಲಾ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಕರೆತಂದು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಆಯಾ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಪ್ರಾಂಶುಪಾಲರು ಮುಂಜಾಗ್ರತೆ ವಹಿಸಬೇಕು ಇಂಥಹ ಪ್ರದರ್ಶನಗಳನ್ನು ನೋಡುವುದರಿಂದ ಮಕ್ಕಳಲ್ಲಿ ಹಲವಾರು ವೈಜ್ಞಾನಿಕ ಭಾವನೆಗಳು ಅವರಲ್ಲಿ ಹುಟ್ಟುವುದರ ಜೊತೆಗೆ ಅವರಲ್ಲಿ ಕ್ರೀಯಾಶೀಲ ಹೆಚ್ಚಾಗುತ್ತದೆ ಎಂದು ಹೇಳಿದರು.
ಸೆಪ್ಟೆಂಬರ್ 3 ರಂದು ಸಾರ್ವಜನಿಕರು ಈ ಏರ್ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು ಬೀದರ ನಗರದ ಜನತೆ ಅಂದು ಸಂಜೆ 4.30 ಗಂಟೆಯ ಒಳಗೆ ಬೀದರ್ ಕೋಟೆಯ ಒಳಗಡೆ ಉಪಸ್ಥಿತರಿದ್ದು ಏರ್ ಶೋ ವನ್ನು ವೀಕ್ಷಿಸಿ ತಮ್ಮ ಕಣ್ಣತುಂಬಿಕೊಳ್ಳಬಹುದಾಗಿದೆ ಎಂದರು.
ಇದರ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಬೀದರ್ ಕೋಟೆಯ ಒಳಗಡೆ ಅಚ್ಚು ಕಟ್ಟು ವ್ಯವಸ್ಥೆ ಮಾಡುವುದರ ಜೊತೆಗೆ ಈ ಏರ್ ಶೋ ಕಾರ್ಯಕ್ರಮ ಯಶಸ್ವಿಯಾವುದರ ಜೊತೆಗೆ ಹೆಚ್ಚಿನ ಸಂಖ್ಯೆಯ ಜನರು ಇದರಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕೆಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ. ಸಹಾಯಕ ಆಯುಕ್ತ ಮೊಹ್ಮದ್ ನಯೀಮ್ ಮೋಮಿನ್. ಶಿಕ್ಷಣ ಇಲಾಖೆಯ ಅಧಿಕಾರಿಗಳು. ಸಿಆರ್‌ಸಿ. ಬಿಆರ್‌ಸಿ. ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.