ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ. ಆದರೆ ಮತ್ತೆ ಚುನಾವಣೆ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆಯಾಗಿ ನಿರ್ಧಾರ ಮಾಡಿಲ್ಲ ಎಂದರು.
ಹಾಸನ (ಮಾ.17): ಮತ್ತೆ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಆಲೋಚನೆ ಮಾಡಿಲ್ಲ. ಈ ಬಗ್ಗೆ ಮನೆಯಲ್ಲಿಯು ಚರ್ಚೆ ಮಾಡಿಲ್ಲ. ಈ ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಭವಾನಿ ರೇವಣ್ಣ ಹೇಳಿದರು.
ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್. ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಸನ ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯೂ ಆಗಿದ್ದು, ಮುಂದಿನ ಚುನಾವಣಾ ಸ್ಪರ್ಧೆ ಬಗ್ಗೆ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ.
undefined
ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಒಂದಷ್ಟು ಒಳ್ಳೆ ಕೆಲಸ ಮಾಡಲು ಯತ್ನಿಸಿದ್ದೇನೆ. ಒಬ್ಬ ಎಂಎಲ್ ಎ ಕೆಲಸ ಮಾಡಿದಷ್ಟು ತೃಪ್ತಿ ಆಗಿದೆ. ನಾನು ಅಧಿಕಾರ ವಹಿಸಿಕೊಂಡಾಗ ಎಸ್.ಎಸ್.ಎಲ್.ಸಿಯಲ್ಲಿ ಹಾಸನ 28 ನೇ ಸ್ಥಾನದಲ್ಲಿತ್ತು. ನಾವು ಇದನ್ನ ಮೇಲೆತ್ತಬೇಕೆಂದು ಪೋಷಕರ ಸಭೆಮಾಡಿ ಪ್ರಯತ್ನ ಮಾಡಿದೆವು. ನಮ್ಮ ಪ್ರಯತ್ನಕ್ಕೆ 2018-19 ರಲ್ಲಿ ಹಾಸನ ನಂಬರ್ ಒನ್ ಆಗಲು ಸಹಕಾರಿ ಆಯ್ತು ಎಂದು ಭವಾನಿ ರೇವಣ್ಣ ಹೇಳಿದರು.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಭವಾನಿ ರೇವಣ್ಣ ಈ ಬಗ್ಗೆ ನಾನು ಏನೂ ಆಲೋಚನೆ ಮಾಡಿಲ್ಲ. ಭಗವಂತನ ಇಚ್ಚೆ ಏನಿದೆಯೋ ಗೊತ್ತಿಲ್ಲ. ಆದರೆ ಈಗ ಜಿ.ಪಂ ಸದಸ್ಯೆಯಾಗಿ ಮಾಡಿದ ಕೆಲಸ ತೃಪ್ತಿ ಇದೆ ಎಂದರು.
'2023ರಲ್ಲಿ ಮತ್ತೆ ಎಚ್‌ಡಿಕೆ ಸಿಎಂ : ಎಚ್‌ಡಿಕೆ ಬಳಿ ಇದ್ದ ಗ್ರಹಗಳು ಈಗ ಡಿಕೆಶಿ ಬಳಿ'
ಬೇಲೂರು ಅಥವಾ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆ ಬಗ್ಗೆ ಭವಾನಿ ರೇವಣ್ಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎಂಎಲ್ಎ ಚುನಾವಣೆಯಲ್ಲಿ ಸ್ಪರ್ಧೆ ಮಾಡೋ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ ಎಂದು ಭವಾನಿ ರೇವಣ್ಣ ಹೇಳಿದರು.
ಮಾರ್ಚ್ 19 ರಂದು ಮಹಿಳಾ ದಿನಾಚರಣೆ : ಮಾರ್ಚ್ 19 ರಂದು ಹಾಸನದಲ್ಲಿ ಮಹಿಳಾ ದಿನಾಚರಣೆ ಬಗ್ಗೆ ಮಾಹಿತಿ ನೀಡಿದ ಭವಾನಿ ರೇವಣ್ಣ ನಮ್ಮ ಸ್ನೇಹಿತರೆಲ್ಲಾ ಸೇರಿ ವಿಶ್ಚ ಮಹಿಳಾ ದಿನಾಚರಣೆ ಮಾಡಲು ತೀರ್ಮಾನ ಮಾಡಿದ್ದಾರೆ. ಅವರು ತೀರ್ಮಾನ ಮಾಡಿದ್ದಕ್ಕೆ ನಾನು ಅವರ ಜೊತೆ ಸೇರಿದ್ದೇನೆ.
ಈ ಕಾರ್ಯಕ್ರಮದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಮಹಿಳೆಯರು ಮುಂದೆಯೂ ಯಾವುದಾದರೂ ಕಾರ್ಯಕ್ರಮ ಮಾಡಿದರೆ ನಾನು ಅವರ ಜೊತೆ ಇರುತ್ತೇನೆ. ರಾಜಕೀಯ ರಹಿತವಾಗಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದ ಭವಾನಿ ರೇವಣ್ಣ ಹೇಳಿದರು.