Bhatkal: ಮುರ್ಡೇಶ್ವರದಲ್ಲಿ ಹರಕೆ ಹೊತ್ತ ತಕ್ಷಣ ನಡೆದ ವಿಸ್ಮಯ! ಓಡೋಡಿ ಬಂದ ಭೈರವ ನಂದಿ

Published : Nov 22, 2026, 08:37 AM IST
Bhairava

ಸಾರಾಂಶ

ಮುರ್ಡೇಶ್ವರದ ಗೋಶಾಲೆಯಿಂದ ಓಂಗೋಲ್ ತಳಿಯ ಭೈರವ ಎಂಬ ನಂದಿ ಕಾಣೆಯಾಗಿತ್ತು. ಮಾಲೀಕರು ಮುರುಡೇಶ್ವರ ದೇವರಿಗೆ ಹರಕೆ ಹೊತ್ತ ಸ್ವಲ್ಪ ಸಮಯದಲ್ಲೇ ಸಿಸಿ ಕ್ಯಾಮೆರಾ ಸಹಾಯದಿಂದ ನಂದಿ ಪತ್ತೆಯಾಗಿದೆ. ನಂತರ ಹರಕೆಯಂತೆ ನಂದಿಯೊಂದಿಗೆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಲಾಯಿತು.

ಭಟ್ಕಳ: ಮುರ್ಡೇಶ್ವರದ ಗೋಶಾಲೆಯಿಂದ ಕಾಣೆಯಾಗಿದ್ದ ಭೈರವನೆಂಬ ಓಂಗೋಲ್ ತಳಿಯ ನಂದಿಯು ಮಾಲೀಕರು ದೇವರಿಗೆ ಪ್ರಾರ್ಥಿಸಿದ ಹೊತ್ತ ಸ್ವಲ್ಪ ಸಮಯದಲ್ಲೇ ಮರಳಿ ಬಂದು ಅಚ್ಚರಿ ಮೂಡಿಸಿದೆ.

ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ ಭೈರವ

ನ. 19ರಂದು ಮುರುಡೇಶ್ವರದ ಧೇನು ಆತಿಥ್ಯದ ವಸತಿಗೃಹದ ಗೋಶಾಲೆಯಿಂದ ಭೈರವನೆಂಬ ಓಂಗೋಲ್ ತಳಿಯ ನಂದಿ ತಪ್ಪಿಸಿಕೊಂಡಿತ್ತು. ಮಾಲೀಕ ಯೋಗೇಶ ಭಟ್ಟ ಅವರು ಎಲ್ಲ ಕಡೆ ಹುಡುಕಿಸಿದರೂ ಭೈರವ ಸಿಕ್ಕಿರಲಿಲ್ಲ.

ಭಟ್ಟರು ಮುರುಡೇಶ್ಬರ ದೇವರಿಗೆ ಕಾಯಿ ಇಟ್ಟು ಪ್ರಾರ್ಥಿಸಿ ಭೈರವ ಸಿಕ್ಕರೆ ಆತನೊಂದಿಗೆ ದೇವಸ್ಥಾನಕ್ಕೆ ಬಂದು 11 ಸುತ್ತು ಪ್ರದಕ್ಷಿಣೆ ಹಾಕುವ ಹರಕೆ ಹೊತ್ತುಕೊಂಡರು. ಇದಾದ ಸ್ವಲ್ಪ ಸಮಯದಲ್ಲೇ ಪೊಲೀಸರ ಸಹಕಾರದಿಂದ ಸಿಸಿ ಕ್ಯಾಮೆರಾ ನೋಡಿ ಜಾಡು ಹಿಡಿದು ಕಾಣೆಯಾಗಿದ್ದ ಭೈರವನನ್ನು ಹುಡುಕಿ ತರಲಾಯಿತು.

ಭೈರವನೊಂದಿಗೆ 11 ಪ್ರದಕ್ಷಿಣೆ ಹಾಕಿ ಹರಕೆ

ನಂತರ ತಮ್ಮ ಹರಕೆಯಂತೆ ಭಟ್ಟರು ಮುರುಡೇಶ್ವರ ದೇವಸ್ಥಾನಕ್ಕೆ ಭೈರವನೊಂದಿಗೆ ಹೋಗಿ 11 ಪ್ರದಕ್ಷಿಣೆ ಹಾಕಿ ಹರಕೆ ತೀರಿಸಿದರು. ಅರ್ಚಕರು ಭೈರವನಿಗೆ ಹೂಮಾಲೆ ಹಾಕಿದರು.

ಇದನ್ನೂ ಓದಿ: ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದ ಸಂಸದ ಕಾಗೇರಿ

PREV
Read more Articles on
click me!

Recommended Stories

50 ಸಾವಿರಕ್ಕೆ ಡಿಮ್ಯಾಂಡ್; 43 ಸಾವಿರಕ್ಕೆ ಓಕೆ; ಲಂಚ ಪಡೆಯುವಾಗಲೇ ಅಧಿಕಾರಿ ಲಾಕ್
ಕಾಡುಗೊಲ್ಲ, ಹಟ್ಟಿಗೊಲ್ಲ ಎಸ್ಟಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ!