ಬಾಗಲಕೋಟೆ: ಇಂಚಗೇರಿಯಿಂದಲೇ ಗೋವಾ ವಿಮೋಚನೆ, ಸಿಎಂ ಪ್ರಮೋದ ಸಾವಂತ್‌

By Kannadaprabha News  |  First Published Nov 15, 2022, 9:27 PM IST

ಮಹಾರಾಜರ ಸಪ್ತಾಹ ಅಂಗವಾಗಿ ನಡೆದ ‘ಜನ ಏಕತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್‌ 


ರಬಕವಿ-ಬನಹಟ್ಟಿ(ನ.15):  ದೇವರ ಸ್ಮರಣೆಯೊಂದಿಗೆ ಧರ್ಮದಿಂದ ನಡೆದಾಗ ಮಾತ್ರ ದೇಶ ಪ್ರಗತಿಯಾಗಲು ಸಾಧ್ಯ. ಗೋವಾ ವಿಮೋಚನೆಗೊಳ್ಳಲು ಇಂಚಗೇರಿ ಸಂಪ್ರದಾಯದ ಮಹಾದೇವಪ್ಪ ಮುರಗೋಡ(ಮಾಧವಾನಂದ ಪ್ರಭೂಜಿ)ಯವರ ನೇತೃತ್ವದ ಹೋರಾಟವೇ ಮುಖ್ಯ ಕಾರಣವಾಗಿದ್ದು, ಪೋರ್ಚುಗೀಸರು ದೇಶ ಬಿಟ್ಟು ತೊಲಗಿದ್ದು 1961 ರಲ್ಲಿ ಭಾರತ ಸ್ವಾತಂತ್ರತ್ರ್ಯದ 14 ವರ್ಷಗಳ ನಂತರ ಗೋವಾ ವಿಮೋಚನೆಗೆ ಕಾರಣವಾಯಿತೆಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್‌ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿತಾಲೂಕಿನ ಹಿಪ್ಪರಗಿಯ ಸಂಗಮೇಶ್ವರ ಮಹಾರಾಜರ ಸಪ್ತಾಹ ಅಂಗವಾಗಿ ನಡೆದ ‘ಜನ ಏಕತಾ ಸಮಾವೇಶ*ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರ್ನಾಟಕ, ಗೋವಾ ಹಾಗು ಮಹಾರಾಷ್ಟ್ರ ರಾಜ್ಯಗಳ ಅವಿನಾಭಾವ ಸಂಬಂಧಗಳು ಮಠ-ಮಂದಿರಗಳಿಂದ ನಡೆಯುತ್ತಿವೆ. ಅಖಂಡ ದೇಶ ಕಾರ್ಯ ನಡೆಸುವಲ್ಲಿ ಸ್ವಾತಂತ್ರಾತ್ರ್ಯನಂತರದ 70 ವರ್ಷಗಳ ಕಾಲದ ನಂತರ ಪ್ರಧಾನಿ ನರೇಂದ್ರ ಮೋದಿಯವರಿಂದ ನಡೆಯುತ್ತಿರುವದು ಸಂತಸವೆನಿಸುತ್ತಿದೆ. ಅಯೋಧ್ಯೆ ಶ್ರೀರಾಮಚಂದ್ರ ಮಂದಿರ, ಉಜ್ಜಯನಿ, ಕಾಶಿ ಕಾರಿಡಾರ ಯೋಜನೆಗಳಂತಹ ಅವಿಸ್ಮರಣಿಯ ಕಾರ್ಯಗಳು ದೇಶ ಒಂದಾಗಿಸುವಲ್ಲಿ ಗಟ್ಟಿನೆಲೆಯಾಗಿದೆ. ಸ್ವಾತಂತ್ರತ್ರ್ಯದ ಅಮೃತ ಮಹೋತ್ಸವ ಕಾಲಘಟ್ಟದಲ್ಲಿ ಅಮೂಲಾಗ್ರ ಬದಲಾವಣೆಯೊಂದಿಗೆ ಬಲಿಷ್ಠ ರಾಷ್ಟ್ರವಾಗಿ ನಿರ್ಮಾಣದೊಂದಿಗೆ ನವಭಾರತದ ಕನಸು ನನಸಾಗಿಸುವಲ್ಲಿ ಪ್ರಧಾನಿ ಪಣ ಶೀಘ್ರವೇ ಈಡೇರಲಿದೆ ಎಂದು ಸಾವಂತ್‌ ತಿಳಿಸಿದರು.

Tap to resize

Latest Videos

undefined

BAGALKOT : ನೇಕಾರರ ಸಮಸ್ಯೆ ಇತ್ಯರ್ಥಗೊಳಿಸಿ ಇಲ್ಲವೇ ರಾಜಿನಾಮೆ ನೀಡಿ: ಟಿರಕಿ

ಸ್ವಾತಂತ್ರತ್ರ್ಯ ನಂತರ 14 ವರ್ಷಗಳ ಕಾಲ ವಿದೇಶಿ ವಶದಲ್ಲಿದ್ದ ಗೋವಾ ಮುಕ್ತಿಗೊಳಿಸುವ ಸಂಗ್ರಾಮದಲ್ಲಿ ಇಂಚಗೇರಿ ಮಠದ ಕಾರ್ಯಕ್ಕಾಗಿ ಹಿಪ್ಪರಗಿಯಲ್ಲಿನ ಮಠದ ಅಭಿವೃದ್ಧಿಗೆ ಸ್ಮಾರಕವಾಗಿ ಗೋವಾ ಸರ್ಕಾರದಿಂದ ಕೊಠಡಿ, ಭವನ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಮಹತ್ತರ ಯೋಜನೆ ನೀಡುವದಾಗಿ ಸಿಎಂ ಭರವಸೆ ನೀಡಿದರು.

ಪ್ರಭು ಬೆನ್ನಾಳೆ ಮಹಾರಾಜರು ಮಾತನಾಡಿ, ಸದ್ಗುರುವಿನ ನಾಮಸ್ಮರಣೆಯಿಂದ ಧ್ಯಾನಕ್ಕೆ ಮಠ-ಮಂದಿರ-ಮಸೀದಿಗಳ ಅವಶ್ಯವಿಲ್ಲ ಮನಸ್ಸು ಹತೋಟಿಯಲ್ಲಿದ್ದರೆ ಸಾಕು. ಆಧ್ಯಾತ್ಮದತ್ತ ಜೀವನ ಅಳವಡಿಸಿಕೊಂಡಲ್ಲಿ ನೆಮ್ಮದಿಯ ಬದುಕಾಗುವದೆಂದರು.

ಕೊಲ್ಲಾಪೂರ ಕಣೇರಿ ಮಠದ ಅದ್ರಶ್ಯ ಕಾಡಸಿದ್ಧೇಶ್ವರರು ಮಾತನಾಡಿ, ಧರ್ಮ ಎಂದಿಗೂ ಹಾಳಾಗಿಲ್ಲ. ಆಗೋದೂ ಇಲ್ಲ. ಕರ್ನಾಟಕ, ಗೋವಾ ಹಾಗು ಮಹಾರಾಷ್ಟ್ರ ರಾಜ್ಯಗಳ ಸಂಗಮವೇ ಈ ವೇದಿಕೆಯಲ್ಲಿ ತುಂಬು ತುಳುಕುತ್ತಿದೆ. ಹೆಸರು ಮತ್ತು ಧರ್ಮ ದೇಶ ಕಟ್ಟಲು ಹೊರತು ಒಡೆಯುವದಕ್ಕಲ್ಲ. ದೇಶ ಒಡೆಯುವದು ಧರ್ಮವಲ್ಲ. ಜನರ ಭಾವನೆಗಳನ್ನು ಕೂಡಿಸುವದೇ ಧರ್ಮ. ದೇಶ ಅಖಂಡತೆಗೊಳಿಸಲು ಜ್ಯೋತಿರ್ಲಿಂಗಗಳು ಹಾಗು ವೈಷ್ಣವಿ ಕ್ಷೇತ್ರಗಳೇ ಮೂಕ ಸಾಕ್ಷಿ ಎಂದರು.

ಜಾರಕಿಹೊಳಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ: ಮಾನವ ಬಂಧುತ್ವ ವೇದಿಕೆ

ಧರ್ಮದ ಎರಡು ಕಣ್ಣುಗಳಂತೆ ಕಣೇರಿ ಮಠ ಹಾಗು ಇಂಚಗೇರಿ ಮಠಗಳು ಕೃಷಿ ಮಾಡುತ್ತಿವೆ. ಜಾತಿ ವಿಷಯ ಬೀಜ ಕಿತ್ತು ಹಾಕಿ ಧರ್ಮ ಜಾಗೃತಿಗೆ ಹೋರಾಡಬೇಕಿದೆ. ದೇಶ-ಧರ್ಮ-ಸಂಸ್ಕ್ರತಿಗೆ ಬದುಕು ಮೀಸಲಿಡಬೇಕು. ದ್ವೇಷ, ಸಮಾಜ ವಿಭಜನೆ ಮಾಡುವವರು ದೇಶದ್ರೋಹಿಗಳೆಂದ ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.

ವೇದಿಕೆ ಮೇಲೆ ಮಹಾರಾಷ್ಟ್ರ ಮಾಜಿ ಸಚಿವ ಲಕ್ಷತ್ರ್ಮರಾವ್‌ ದೋಬ್ಳೆ, ಸುದರ್ಶನ ಮಹಾರಾಜರು, ಶಿವಾಜಿ ಮಹಾರಾಜರು, ಆನಂದ ಮಹಾರಾಜರು, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಡಾ. ಎ.ಆರ್‌. ಬೆಳಗಲಿ, ಅಂಬಾದಾಸ ಕಾಮೂರ್ತಿ ಸೇರಿದಂತೆ ಅನೇಕ ಸಂತರ ಸಂಗಮವೇ ನೆರೆದಿತ್ತು.
 

click me!