ಅತ್ತಿಗುಪ್ಪೆ ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ಜಿಗಿದು ಯುವಕ ಸಾವು; ಮಾಗಡಿ ರಸ್ತೆ- ಚಲ್ಲಘಟ್ಟ ಮೆಟ್ರೋ ಸಂಚಾರ ಸ್ಥಗಿತ!

By Sathish Kumar KH  |  First Published Mar 21, 2024, 3:22 PM IST

ನಮ್ಮ ಬೆಂಗಳೂರು ಮೆಟ್ರೋ ನೇರಳೆ ಮಾರ್ಗದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಹಳಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 


ಬೆಂಗಳೂರು (ಮಾ.21): ಬೆಂಗಳೂರಿನಲ್ಲಿ ಟ್ರಾಫಿಕ್‌ ರಹಿತ ಸಂಚಾರಕ್ಕೆ ಅನುಕೂಲ ಆಗಿರುವ ಸಾರ್ವಜನಿಕ ಸಾರಿಗೆ ನಮ್ಮ ಮೆಟ್ರೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಕಿರಿಕಿರಿ ಹೆಚ್ಚಾಗಿದೆ. ನೇರಳೆ ಮಾರ್ಗದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ಯುವಕ ಮೆಟ್ರೋ ರೈಲು ಬರುತ್ತಿದ್ದಂತೆ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಮಾಗಡಿ ರಸ್ತೆಯಿಂದ ಚಲ್ಲಘಟ್ಟದವರೆಗಿನ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. 

ಬೆಂಗಳೂರು ನಮ್ಮ ಮೆಟ್ರೋ ರೈಲು ಲಕ್ಷಾಂತರ ಜನರಿಗೆ ಪ್ರತಿನಿತ್ಯ ಸೇವೆ ಸಲ್ಲಿಸುತ್ತದೆ. ಇನ್ನು ಮೆಟ್ರೋ ಸಂಚಾರ ವಿದ್ಯುತ್‌ ಸಂಪರ್ಕದಿಂದಲೇ ನಡೆಯುತ್ತದೆ. ಹೀಗಾಗಿ, ಮೆಟ್ರೋ ಹಳಿಗಳಲ್ಲಿ ಅಪಾಯಕಾರಿ ವಿದ್ಯುತ್ ತಂತಿಯ ಸಂಪರ್ಕ ಮಾಡಿದ್ದರಿಂದ ಯಾವುದೇ ಸಾರ್ವಜನಿಕರನ್ನು ಹಾಗೂ ಪ್ರಯಾಣಿಕರನ್ನು ಮೆಟ್ರೋ ಹಳಿಯ ಬಳಿ ಹೋಗಲು ಬಿಡುವುದಿಲ್ಲ. ಅಪಾಯಕಾರಿ ವಿದ್ಯುತ್ ಸ್ಪರ್ಶದಿಂದ ಸಾವು ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಇನ್ನು ಮೆಟ್ರೋ ಹಳಿಯ ಬಳಿಯೂ ಜನರು ಹೋಗದಂತೆ ತಡೆಯಲು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿರುತ್ತದೆ. ಆದರೆ, ಅದನ್ನೂ ಮೀರಿ ಯುವಕನೊಬ್ಬ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Tap to resize

Latest Videos

ಬೆಂಗಳೂರು: ಮಹಿಳೆಯ ಮುಂದೆ ಮೆಟ್ರೋ ನೌಕರ ಅಸಭ್ಯ ವರ್ತನೆ

ಈ ಬಗ್ಗೆ ಸಾಮಾಇಕ ಜಾಲತಾಣ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಎಂಆರ್‌ಸಿಎಲ್‌ 'ಅತ್ತಿಗುಪ್ಪೆ ನಿಲ್ದಾಣದಲ್ಲಿ ಮಧ್ಯಾಹ್ನ 2.10 ಕ್ಕೆ ರೈಲಿನ ಮುಂದೆ ಒಬ್ಬರು ಜಿಗಿದಿದ್ದಾರೆ ಎಂದು ತಿಳಿಸಲಾಗಿದೆ . ಪ್ರಸ್ತುತ ರೈಲುಗಳು ಮಾಗಡಿ ರಸ್ತೆಯಿಂದ ವೈಟ್‌ಫೀಲ್ಡ್ ಫೀಲ್ಡ್ ನಡುವೆ ಮಾತ್ರ ಓಡುತ್ತಿವೆ ಮತ್ತು ಮಾಗಡಿ ರಸ್ತೆಯಿಂದ ಚಲ್ಲಘಟ್ಟಕ್ಕೆ ಯಾವುದೇ ಸೇವೆಗಳಿಲ್ಲ' ಎಂದು ಮಾಹಿತಿ ನೀಡಿದೆ.

ಈ ಬಗ್ಗೆ ಸಾಮಾಇಕ ಜಾಲತಾಣ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಎಂಆರ್‌ಸಿಎಲ್‌ 'ಅತ್ತಿಗುಪ್ಪೆ ನಿಲ್ದಾಣದಲ್ಲಿ ಮಧ್ಯಾಹ್ನ 2.10 ಕ್ಕೆ ರೈಲಿನ ಮುಂದೆ ಒಬ್ಬರು ಜಿಗಿದಿದ್ದಾರೆ ಎಂದು ತಿಳಿಸಲಾಗಿದೆ . ಪ್ರಸ್ತುತ ರೈಲುಗಳು ಮಾಗಡಿ ರಸ್ತೆಯಿಂದ ವೈಟ್‌ಫೀಲ್ಡ್ ಫೀಲ್ಡ್ ನಡುವೆ ಮಾತ್ರ ಓಡುತ್ತಿವೆ ಮತ್ತು ಮಾಗಡಿ ರಸ್ತೆಯಿಂದ ಚಲ್ಲಘಟ್ಟಕ್ಕೆ ಯಾವುದೇ ಸೇವೆಗಳಿಲ್ಲ' ಎಂದು ಮಾಹಿತಿ ನೀಡಿದೆ.

ಬೆಂಗಳೂರು: ಮೆಟ್ರೋ ಅಧಿಕಾರಿಗಳಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಸಹಕರಿಸದಿದ್ದರೆ ಕೆಲಸದಿಂದ ವಜಾ ಬೆದರಿಕೆ!

ಮೆಟ್ರೋ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆ ಬೆನ್ನಲ್ಲೇ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗಿದೆ. ಇನ್ನು ಮೆಟ್ರೋ ನಿಲ್ದಾಣಕ್ಕೆ ಬಂದಿದ್ದವರನ್ನು ಹೊರಗೆ ಕಳುಹಿಸಿ ಶೆಟರ್ ಅನ್ನು ಹಾಕಿ ಕ್ಲೋಸ್ ಮಾಡಲಾಗಿದೆ. ಇನ್ನು ವ್ಯಕ್ತಿಯ ಶವ ಹಳಿಯ  ಮೇಲೆ ಇರುವ ಕಾರಣ ಮೆಟ್ರೋ ನಿಲ್ದಾಣದ ಒಳಭಾಗಕ್ಕೆ ಸಾರ್ವಜನಿಕರು ಆಗಮಿಸುವುದಕ್ಕೆ ನಿರ್ಬಂಧಿಸಲಾಗಿದೆ. ಇನ್ನು ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ನಂತರ ಯುವಕನ ಮೃತ ದೇಹವನ್ನು ಹೊರಗೆ ತೆಗೆಯಲಾಗಿದೆ. ಇನ್ನು ಮೆಟ್ರೋ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ.

click me!