Bengaluru: ಜಿಮ್‌ನಲ್ಲಿ ಮಹಿಳೆ ದಿಢೀರ್‌ ಸಾವಿಗೆ ಮಿದುಳಿನಲ್ಲಿ ರಕ್ತಸ್ರಾವ ಕಾರಣ!

By Govindaraj SFirst Published Apr 5, 2022, 3:10 AM IST
Highlights

ಇತ್ತೀಚೆಗೆ ಜಿಮ್‌ನಲ್ಲಿ ದೈಹಿಕ ಕಸರತ್ತು ಮಾಡುವಾಗ ಮಹಿಳೆಯೊಬ್ಬರು ದಿಢೀರ್‌ ಕುಸಿದು ಮೃತಪಡಲು, ಮಿದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದ್ದೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು (ಏ.05): ಇತ್ತೀಚೆಗೆ ಜಿಮ್‌ನಲ್ಲಿ (Gym) ದೈಹಿಕ ಕಸರತ್ತು (Physical Exercise) ಮಾಡುವಾಗ ಮಹಿಳೆಯೊಬ್ಬರು (Woman) ದಿಢೀರ್‌ ಕುಸಿದು ಮೃತಪಡಲು, ಮಿದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದ್ದೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ (Post Mortem Report) ಬೆಳಕಿಗೆ ಬಂದಿದೆ. ಮಾ.26ರಂದು ಮಲ್ಲೇಶ್‌ಪಾಳ್ಯದ ಚಾಲೆಂಜಿಂಗ್‌ ಹೆಲ್ತ್‌ ಕ್ಲಬ್‌ನಲ್ಲಿ ದೈಹಿಕ ಕಸರತ್ತು ಮಾಡುವಾಗ ಮಂಗಳೂರು ಮೂಲದ ವಿನಯಾ ಕುಮಾರಿ ವಿಠ್ಠಲ್‌(34) ದಿಢೀರ್‌ ಕುಸಿದು ಮೃತಪಟ್ಟಿದ್ದರು. ಆರಂಭದಲ್ಲಿ ದಿಢೀರ್‌ ಹೃದಯಾಘಾತ ಸಂಭವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. 

ಇದೀಗ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ವಿನಯಾ ಅವರ ಮಿದುಳಿನ ರಕ್ತನಾಳ ಛಿದ್ರವಾಗಿ ತೀವ್ರ ಸ್ರಾವವಾಗಿದ್ದೇ ಸಾವಿಗೆ ನಿಖರ ಕಾರಣ ಎಂಬುದು ಬೆಳಕಿಗೆ ಬಂದಿದೆ. ಭಾರದ ವಸ್ತುಗಳನ್ನು ಎತ್ತುವಾಗ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ವಿನಯಾ ಅವರು ದೈಹಿಕ ಕಸರತ್ತು ಮಾಡುವಾಗ ಮಿದುಳಿನ ರಕ್ತನಾಳಗಳು ಛಿದ್ರವಾಗಿ ತೀವ್ರ ರಕ್ತಸ್ರಾವವಾಗಿದೆ. ಇದರಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾಗಿ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್‌ ತಿಳಿಸಿದ್ದಾರೆ.

Over Exercising Effect: ಜಿಮ್ ವರ್ಕೌಟ್ ಅತಿ ಬೇಡ, ಪುರುಷತ್ವವೇ ಹೋಗ್ಬೋದು!

ಜಿ.ಎಂ.ಪಾಳ್ಯ ನಿವಾಸಿ ವಿನಯಾ ಅವರು ಐಡಿಸಿ ಕಂಪನಿಯಲ್ಲಿ ಬ್ಯಾಕ್‌ಗ್ರೌಂಡ್‌ ಆಫೀಸರ್‌ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಜಿ.ಎಂ.ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು. ಮಾ.26ರಂದು ಬೆಳಗ್ಗೆ ಎಂದಿನಂತೆ ಜಿಮ್‌ನಲ್ಲಿ ದೈಹಿಕ ಕಸರತ್ತು ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದರು. ವಿನಯಾ ಕುಸಿದು ಬೀಳುವ ದೃಶ್ಯಾವಳಿಗಳು ಜಿಮ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಮ್‌ನಲ್ಲಿ ದಿಢೀರ್‌ ಕುಸಿದು ಮಹಿಳೆ ಸಾವು: ಜಿಮ್‌ನಲ್ಲಿ ದೈಹಿಕ ಕಸರತ್ತು ಮಾಡುವಾಗ ದಿಢೀರ್‌ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಿ.ಎಂ.ಪಾಳ್ಯ ನಿವಾಸಿ ವಿನಯಾ ವಿಠ್ಠಲ್‌(35) ಮೃತ ಮಹಿಳೆ. ಎಂದಿನಂತೆ ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶಪಾಳ್ಯದ ಚಾಲೆಂಜಿಂಗ್‌ ಹೆಲ್ತ್‌ ಕ್ಲಬ್‌ ಬಂದಿರುವ ವಿನಯಾ ದೈಹಿಕ ಕಸರತ್ತು ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಜಿಮ್‌ ಸಿಬ್ಬಂದಿ ಹಾಗೂ ದೈಹಿಕ ಕಸರತ್ತು ಮಾಡುತ್ತಿದ್ದ ಕೆಲವರು ಕೂಡಲೇ ವಿನಯಾ ನೆರವಿಗೆ ಧಾವಿಸಿ ಆರೈಕೆ ಮಾಡಿದ್ದಾರೆ. ಬಳಿಕ ಅವರನ್ನು ಸಮೀಪದ ಸಿ.ವಿ.ರಾಮನ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ವಿನಯಾ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದರು ಎಂದು ಪೊಲೀಸರು (Police) ತಿಳಿಸಿದ್ದಾರೆ.

ಮಂಗಳೂರು (Mangaluru) ಮೂಲದ ವಿನಯಾ ಐಡಿಸಿ ಕಂಪನಿಯಲ್ಲಿ ಬ್ಯಾಕ್‌ಗ್ರೌಂಡ್‌ ಆಫೀಸರ್‌ ಆಗಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಜಿ.ಎಂ.ಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಒಬ್ಬರೇ ನೆಲೆಸಿದ್ದರು. ಶುಕ್ರವಾರ ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಶನಿವಾರ ಬೆಳಗ್ಗೆ ಎಂದಿನಂತೆ ಜಿಮ್‌ನಲ್ಲಿ ದೈಹಿಕ ಕಸರತ್ತು ಮಾಡುವಾಗ ಈ ದುರ್ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಹೃದಯಾಘಾತದಿಂದ (Heart Attack) ವಿನಯಾ ಮೃತಪಟ್ಟಿರುವ ಸಾಧ್ಯತೆಯಿದೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Health Tips: ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ?

ವಿನಯಾ ದೈಹಿಕ ಕಸರತ್ತು ನಡೆಸುವಾಗ ಕುಸಿದು ಬೀಳುವ ದೃಶ್ಯ ಜಿಮ್‌ನ ಸಿಸಿಟಿವಿ(CCTV) ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನಯಾ ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಬಾಡಿಗೆ ಇದ್ದರು. ಪ್ರತಿದಿನ ಬೆಳಗ್ಗೆ ಜಿಮ್‌ ಹೋಗುತ್ತಿದ್ದರು. ಮನೆಯಲ್ಲಿ ವಿನಯಾ ಒಬ್ಬರೇ ಇರುತ್ತಿದ್ದರು. ಎಲ್ಲರನ್ನೂ ಮಾತನಾಡಿಸುತ್ತಿದ್ದರು. ಜಿಮ್‌ ಹೋದಾಗ ವಿನಯಾ ಮೃತಪಟ್ಟಿರುವುದು ವಿಷಯ ಗೊತ್ತಾಯಿತು ಅಂತ ಬಾಡಿಗೆ ಮನೆ ಮಾಲೀಕರು ಜಯಮ್ಮ ತಿಳಿಸಿದ್ದಾರೆ. 

click me!