ಮನೆ ಬಾಗಿಲಿಗೆ ಬಂದು ಪಾರ್ಸೆಲ್‌ ಒಯ್ಯುವ ವಾಹನ ಸೇವೆ ವಿಸ್ತರಣೆ

Published : Jun 16, 2023, 06:29 AM IST
ಮನೆ ಬಾಗಿಲಿಗೆ ಬಂದು ಪಾರ್ಸೆಲ್‌ ಒಯ್ಯುವ ವಾಹನ ಸೇವೆ ವಿಸ್ತರಣೆ

ಸಾರಾಂಶ

ಕಳೆದ ಜೂ.6ರಂದು ಪೀಣ್ಯ ಹಾಗೂ ಅಬ್ಬಿಗೆರೆ ಇಂಡಸ್ಟ್ರಿಯಲ್‌ ಪ್ರದೇಶದಲ್ಲಿ ಆರಂಭಿಸಿದ ಬಾಗಿಲಿಗೆ ಬಂದು ಸರಕು ಒಯ್ಯುವ ವಾಹನಗಳ ಸೇವೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಅದರಲ್ಲೂ ಕೈಗಾರಿಕೆಗಳು ತಮ್ಮ ಸರಕುಗಳನ್ನು ಸಾಗಿಸಲು ಹೆಚ್ಚಾಗಿ ಅಂಚೆ ಇಲಾಖೆಯ ವಾಹನವನ್ನು ಬಳಕೆ ಮಾಡಿವೆ. ರಾಜ್ಯದ ನಾನಾ ಕಡೆ ಸೇರಿ ಹೊರ ರಾಜ್ಯಗಳಿಗೂ ಸರಕು ಸಾಗಣೆಯಾಗಿದೆ.

ಬೆಂಗಳೂರು(ಜೂ.16):  ನಗರದ ಪಶ್ಚಿಮ ಅಂಚೆ ಇಲಾಖೆ ವಿಭಾಗ ಪ್ರಾಯೋಗಿಕವಾಗಿ ಆರಂಭಿಸಿದ ‘ಪಾರ್ಸೆಲ್‌ ಆನ್‌ ವ್ಹೀಲ್ಸ್‌’ ಯೋಜನೆಗೆ ಭರ್ಜರಿ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ ನಗರದಲ್ಲಿ ಉಳಿದ ಮೂರು ವಿಭಾಗಗಳಲ್ಲಿ ಇದನ್ನು ವಿಸ್ತರಣೆ ಮಾಡಲು ಮುಂದಾಗಿದೆ.

ಕಳೆದ ಜೂ.6ರಂದು ಪೀಣ್ಯ ಹಾಗೂ ಅಬ್ಬಿಗೆರೆ ಇಂಡಸ್ಟ್ರಿಯಲ್‌ ಪ್ರದೇಶದಲ್ಲಿ ಆರಂಭಿಸಿದ ಬಾಗಿಲಿಗೆ ಬಂದು ಸರಕು ಒಯ್ಯುವ ವಾಹನಗಳ ಸೇವೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಅದರಲ್ಲೂ ಕೈಗಾರಿಕೆಗಳು ತಮ್ಮ ಸರಕುಗಳನ್ನು ಸಾಗಿಸಲು ಹೆಚ್ಚಾಗಿ ಅಂಚೆ ಇಲಾಖೆಯ ವಾಹನವನ್ನು ಬಳಕೆ ಮಾಡಿವೆ. ರಾಜ್ಯದ ನಾನಾ ಕಡೆ ಸೇರಿ ಹೊರ ರಾಜ್ಯಗಳಿಗೂ ಸರಕು ಸಾಗಣೆಯಾಗಿದೆ.

ಬೆಂಗ್ಳೂರಲ್ಲಿ ದೇಶದ ಮೊದಲ ‘3ಡಿ’ ಪ್ರಿಂಟಿಂಗ್‌ ಅಂಚೆ ಕಚೇರಿ ನಿರ್ಮಾಣ..!

ವೀಕೆಂಡ್‌ ಹೊರತುಪಡಿಸಿ ಉಳಿದ ದಿನಗಳಲ್ಲಿ ಹೆಚ್ಚಿನ ಪಾರ್ಸೆಲ್‌ಗಳು ಅಂಚೆ ವಾಹನದಲ್ಲಿ ಹೋಗಿವೆ. ಬುಧವಾರ ಒಂದೇ ದಿನ ಕೈಗಾರಿಕೆಯೊಂದರ 675ಕ್ಕೂ ಹೆಚ್ಚಿನ ಸರಕುಗಳನ್ನು ಅಂಚೆ ವಾಹನ ಸಾಗಿಸಿದೆ. ಪ್ರಾಯೋಗಿಕ ಸೇವೆಯಲ್ಲೇ 989 ಸರಕು ಸಾಗಿಸಿದ್ದು, .85 ಸಾವಿರಕ್ಕೂ ಹೆಚ್ಚಿನ ಆದಾಯ ಗಳಿಸಿದೆ. ಹೀಗಾಗಿ ಯೋಜನೆಯನ್ನು ಇತರೆ ವಿಭಾಗಗಳಲ್ಲೂ ವಿಸ್ತರಿಸಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಅಂಚೆ ಇಲಾಖೆ ಮುಂದಾಗಿದೆ.

ಎಂ.ಜಿ.ರಸ್ತೆ ಮಣಿಪಾಲ್‌ ಸೆಂಟರ್‌ ಬಳಿ ಆರಂಭ

ಇದೀಗ ನಗರದ ಪಶ್ಚಿಮ ಭಾಗದಲ್ಲಿ ಅಂಚೆ ವಾಹನಗಳು ಮನೆ ಬಾಗಿಲಿಗೆ ಬಂದು ಪಾರ್ಸೆಲ್‌ ಒಯ್ಯುತ್ತಿವೆ. ಯೋಜನೆ ವಿಸ್ತರಣೆ ಭಾಗವಾಗಿ ಮುಂದಿನ ವಾರ ನಗರದ ಮಧ್ಯ ಭಾಗವಾದ ಎಂ.ಜಿ.ರಸ್ತೆಯ ಮಣಿಪಾಲ್‌ ಸೆಂಟರ್‌ ಬಳಿಯಲ್ಲಿ ಇನ್ನೊಂದು ವಾಹನವನ್ನು ರಸ್ತೆಗಿಳಿಸಲು ಅಂಚೆ ಇಲಾಖೆ ನಿರ್ಧರಿಸಿದೆ. ಬಳಿಕ ಹಂತ ಹಂತವಾಗಿ ಮುಂದಿನ ತಿಂಗಳಲ್ಲಿ ಪೂರ್ವ ಭಾಗ ಮಹಾದೇವಪುರ ಕೈಗಾರಿಕಾ ಏರಿಯಾ, ಹಾಗೂ ದಕ್ಷಿಣ ಬೆಂಗಳೂರಿನ ಬಿಕಾಸಿಪುರ ಕೈಗಾರಿಕಾ ಪ್ರದೇಶ ನಗರದಲ್ಲಿ ಪಾರ್ಸೆಲ್‌ ಆನ್‌ ವ್ಹೀಲ್ಸ್‌ ಜಾರಿಗೆ ಬರಲಿದೆ ಅಂಚೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಹಣವಿಲ್ಲ

ಕೈಗಾರಿಕೆ, ಮನೆ ಬಾಗಿಲಿಗೆ ಬಂದು ಪಾರ್ಸೆಲ್‌ಗಳನ್ನು ಸಂಗ್ರಹಿಸಿದರೂ ಇದಕ್ಕೆ ಹೆಚ್ಚಿನ ಮೊತ್ತವನ್ನು ಅಂಚೆ ಇಲಾಖೆ ವಿಧಿಸುತ್ತಿಲ್ಲ. ಅಂಚೆ ಕಚೇರಿಗೆ ತೆರಳಿ ಪಾರ್ಸೆಲ್‌ ಸಾಗಿಸಲು ನೀಡಿದಲ್ಲಿ ಎಷ್ಟುಮೊತ್ತ ಪಾವತಿಸಬೇಕೋ ಅಷ್ಟೇ ದರವನ್ನು ನಿಗದಿಸಲಾಗಿದೆ. ಸದ್ಯ ಒಂದೇ ವಾಹನ ಸರಕನ್ನು ಸಂಗ್ರಹಿಸುತ್ತಿದ್ದು, ಚಾಲಕ ಸೇರಿ ಮೂವರು ಸಿಬ್ಬಂದಿ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಸರಕು ಬಂದಲ್ಲಿ ಬೇರೆ ವಾಹನಗಳನ್ನು ಬಳಸಿಕೊಳ್ಳುತ್ತೇವೆ ಎಂದು ಅಂಚೆ ಇಲಾಖೆ ತಿಳಿಸಿದೆ.

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ