ಆರ್‌ಸಿಬಿ-ಕೆಕೆಆರ್ ಮ್ಯಾಚ್: ನಾಳೆ ಚಿನ್ನಸ್ವಾಮಿ ಸುತ್ತಮುತ್ತ ಪಾರ್ಕಿಂಗ್ ನಿಷೇಧ, ಮಾರ್ಗಸೂಚಿ ಹೀಗಿದೆ!

Published : May 16, 2025, 05:55 PM IST
ಆರ್‌ಸಿಬಿ-ಕೆಕೆಆರ್ ಮ್ಯಾಚ್: ನಾಳೆ ಚಿನ್ನಸ್ವಾಮಿ ಸುತ್ತಮುತ್ತ ಪಾರ್ಕಿಂಗ್ ನಿಷೇಧ, ಮಾರ್ಗಸೂಚಿ ಹೀಗಿದೆ!

ಸಾರಾಂಶ

ಐಪಿಎಲ್ ಮರು ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ರಿಸ್ಟಾರ್ಟ್​​ನ ಬಳಿಕ ಐಪಿಎಲ್​​ನ ಮಹಾಯುದ್ಧ ಇನ್ನಷ್ಟು ರೋಚಕವಾಗಲಿದ್ದು, ನಾಳೆ (ಮೇ.17) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್.ಸಿ.ಬಿ-ಕೆಕೆಆರ್ ಮುಖಾಮುಖಿಯಾಗಲಿದೆ.   

ಬೆಂಗಳೂರು (ಮೇ.16): ಐಪಿಎಲ್ ಮರು ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ರಿಸ್ಟಾರ್ಟ್​​ನ ಬಳಿಕ ಐಪಿಎಲ್​​ನ ಮಹಾಯುದ್ಧ ಇನ್ನಷ್ಟು ರೋಚಕವಾಗಲಿದ್ದು, ನಾಳೆ (ಮೇ.17) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್.ಸಿ.ಬಿ-ಕೆಕೆಆರ್ ಮುಖಾಮುಖಿಯಾಗಲಿದೆ. ಈ ಪಂದ್ಯಾವಳಿಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಬರಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ನಿರ್ವಹಣೆಗೆ ಸಂಚಾರಿ ಪೊಲೀಸರು ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಕ್ರೀಡಾಂಗಣದ ಸುತ್ತಮುತ್ತ ನೋ ಪಾರ್ಕಿಂಗ್ ನಿಯಮ ಜಾರಿಯಾಗಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಟ್ರಾಫಿಕ್ ಅಡಚಣೆ ತಪ್ಪಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಮ್ಯಾಚ್ ನೋಡಲು ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ, ಕ್ರೀಡಾಂಗಣದ ಸುತ್ತಮುತ್ತ ನಿಲುಗಡೆ ಸ್ಥಳದ ಕೊರತೆ ಇರುವ ಕಾರಣ, ಸಾರ್ವಜನಿಕರು ಬಿಎಂಟಿಸಿ ಬಸ್ ಮತ್ತು ಮೆಟ್ರೋ ಸೇವೆಗಳನ್ನು ಬಳಸಿಕೊಳ್ಳುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಓಲಾ, ಉಬರ್, ಆಟೋ ಮತ್ತು ಇತರೆ ಕ್ಯಾಬ್ ಸೇವೆಗಳಿಗೆ ಪಿಕ್-ಅಪ್ ಹಾಗೂ ಡ್ರಾಪ್‌ಗಾಗಿ ನಿರ್ದಿಷ್ಟ ಸ್ಥಳಗಳನ್ನು ನಿಗದಿಪಡಿಸಲಾಗಿದೆ, ಇದರಿಂದ ಸಂಚಾರವು ಸರಾಗವಾಗಿ ಸಾಗಲಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಕ್ಕಳಂತೆ ಈಜಾಡಿದ ಟಿಮ್ ಡೇವಿಡ್! ವಿಡಿಯೋ ವೈರಲ್

ವಾಹನ ನಿಲುಗಡೆ ನಿಷೇಧಿತ ಪ್ರದೇಶಗಳು
1. ಕ್ವೀನ್ಸ್ ರಸ್ತೆ- ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ
2. ಎಂ.ಜಿ ರಸ್ತೆ- ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಕಡೆ
3. ಲಿಂಕ್ ರಸ್ತೆ- ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ
4. ರಾಜಭವನ ರಸ್ತೆ- ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ
5. ಸೆಂಟ್ರಲ್ ಸ್ಟ್ರಿಟ್ ರಸ್ತೆಯ ಎರಡೂ ಕಡೆ
6. ಕಬ್ಬನ್ ರಸ್ತೆ- ಸಿ.ಟಿ.ಓ. ವೃತ್ತದಿಂದ ಡಿಕೆನ್ಸ್ನ್ ರಸ್ತೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ
7. ಸೆಂಟ್ ಮಾರ್ಕ್ಸ್ ರಸ್ತೆ- ಕ್ಯಾಶ್ ಫಾರ್ಮಸಿ ಜಂಕ್ಷನ್ ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ
8. ಮ್ಯೂಸಿಯಂ ರಸ್ತೆ- ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆ ವರೆಗೆ ಹಾಗೂ ಆಶಿರ್ವಾದಂ ವೃತ್ತದವರೆಗೆ 
9. ಕಸ್ತೂರ ಬಾ ರಸ್ತೆ- ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ
10.ಮಲ್ಯ ಆಸ್ಪತ್ರೆ ರಸ್ತೆ- ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ
11.ಕಬ್ಬನ್‌ ಪಾರ್ಕ್ ಒಳಭಾಗ- ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ 
12.ಲ್ಯಾವೆಲ್ಲಿ ರಸ್ತೆ- ಕ್ವೀನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ 
13.ವಿಠಲ್ ಮಲ್ಯ ರಸ್ತೆ- ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ ಮಾರ್ಕ್ಸ್ ರಸ್ತೆಯ ಬಿಷಪ್‌ಕಾಟನ್ ಬಾಲಕಿಯರ ಶಾಲೆಯವರೆಗೆ 

ಪಾರ್ಕಿಂಗ್ ವ್ಯವಸ್ಥೆ ಪ್ರದೇಶಗಳು
1. ಪಂದ್ಯ ವೀಕ್ಷಣೆ ಮಾಡಲು ಬರೋರಿಗಡ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್, ಜೊತೆಗೆ ಯು.ಬಿ.ಸಿಟಿ ನಿಲುಗಡೆ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ 
2. ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ಪಾರ್ಕಿಂಗ್
3. ಕೆ.ಎಸ್.ಸಿ.ಎ. ಸದಸ್ಯರ ವಾಹನಗಳನ್ನು ಸೆಂಟ್ ಜೋಸೆಫ್ ಬಾಲಕರ ಶಾಲೆ ಮೈದಾನ

PREV
Read more Articles on
click me!

Recommended Stories

ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಡಿ.20ಕ್ಕೆ ಚಿತ್ರಕಲಾ ಸ್ಪರ್ಧೆ: ಎಲ್ಲಿ?
ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣ ವಿಸ್ತರಣೆ ಕಾರ್ಯ ಆರಂಭ: ಪ್ರಯಾಣಿಕರು ಕಾಯುವ ದುಸ್ಥಿತಿ