Bengaluru: ಎಚ್ಚರ... ಬೆಂಗಳೂರಿನ AI ಕ್ಯಾಮೆರಾಗಳು ಸೀಟ್‌ಬೆಲ್ಟ್‌ ಹಾಕಿದ್ರೂ, ತಪ್ಪಾಗಿ ಫೈನ್‌ ಹಾಕ್ತಿವೆ!

By Santosh Naik  |  First Published Aug 19, 2024, 12:29 PM IST


AI Camera in Wrong automatically detect violation ಬೆಂಗಳೂರಿನಲ್ಲಿರುವ ಎಐ ಕ್ಯಾಮೆರಾಗಳು ಶರ್ಟ್ ಮತ್ತು ಸೀಟ್‌ಬೆಲ್ಟ್ ಬಣ್ಣಗಳ ನಡುವೆ ಗೊಂದಲಕ್ಕೆ ಒಳಗಾಗುತ್ತಿದೆ. ಇದರಿಂದಾಗಿ ತಪ್ಪಾಗಿ ದಂಡವನ್ನು ವಿಧಿಸುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ.


ಬೆಂಗಳೂರು (ಆ.19): ನಗರದ ಬಹುತೇಕ ಭಾಗಗಳಲ್ಲಿ ಈಗ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘನೆ ಮತ್ತಿತರ ಘಟನೆಗಳನ್ನು ಪರಿಶೀಲನೆ ಮಾಡಲು ಪೊಲೀಸರ ಕಣ್ಣುಗಳ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇನ್ನು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಅಲ್ಲಿ ಎಐ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದೆ. ಸೀಟ್‌ಬೆಲ್ಟ್‌ ನಿಯಮ ಉಲ್ಲಂಘನೆ, ವೇಗ ಮಿತಿ ಉಲ್ಲಂಘನೆಗಳನ್ನು ಇವುಗಳು ಸ್ವಯಂಚಾಲಿತವಾಗಿ ಪತ್ತೆ ಮಾಡಿ, ಅದರ ಚಿತ್ರಗಳನ್ನು ತೆಗೆಯುತ್ತದೆ. ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವ್ಯಕ್ತಿಗಳಿಗೆ ನೇರವಾಗಿ ದಂಡದ ಚಲನ್‌ಅನ್ನು ಕಳುಹಿಸಿಕೊಡುತ್ತದೆ. ಆದರೆ, ಇದರಲ್ಲೀಗ ಸಮಸ್ಯೆಗಳಿರುವುದು ಸ್ಪಷ್ಟವಾಗಿದೆ. ಎಐ ಕ್ಯಾಮೆರಾಗಳು ಸ್ವಯಂಚಾಲಿತವಾಗಿದ್ದು ಮಾನವನ ಹಸ್ತಕ್ಷೇಪವೇ ಅದಕ್ಕೆ ಅಗತ್ಯವಿಲ್ಲ. ಆದರೆ, ಸೀಟ್‌ಬೆಲ್ಟ್‌ ಉಲ್ಲಂಘನೆ ಕೇಸ್‌ಗಳಲ್ಲಿ ಎಐ ಕ್ಯಾಮೆರಾಗಳು ತಪ್ಪು ಮಾಡುತ್ತಿವೆ ಎನ್ನುವುದು ಸ್ಪಷ್ಟವಾಗಿದೆ. ಸೀಟ್‌ಬೆಲ್ಟ್‌ನ ಬಣ್ಣದ ಶರ್ಟ್‌ ಧರಿಸಿ ನೀವು ಕಾರ್‌ ಡ್ರೈವ್‌ ಮಾಡುತ್ತಿದ್ದರೆ, ಎಐ ಕ್ಯಾಮೆರಾಗಳು ನೀವು ಸೀಟ್‌ಬೆಲ್ಟ್‌ ಧರಿಸಿಯೇ ಇಲ್ಲ ಎಂದು ದಂಡವನ್ನು ಹಾಕುತ್ತಿವೆ. ಶರ್ಟ್‌ನ ಅದೇ ಛಾಯೆಯ ಸೀಟ್‌ಬೆಲ್ಟ್ ಧರಿಸಿದ್ದ ಚಾಲಕನಿಗೆ AI ಕ್ಯಾಮೆರಾ ತಪ್ಪಾಗಿ ದಂಡ ವಿಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೋಶಿಯಲ್‌ ಮೀಡಿಯಾ ವೇದಿಕೆ ರೆಡಿಟ್‌ನಲ್ಲಿ ವ್ಯಕ್ತಿ ತನ್ನ ಅನುಭವವನ್ನು ಶೇರ್‌ ಮಾಡಿಕೊಂಡಿದ್ದಾನೆ. ಬೆಂಗಳೂರು ನಗರದ ಜನನಿಬಿಡ ರಸ್ತೆಯಲ್ಲಿ ಕಾರು ಚಲಿಸುತ್ತಿರುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಆದರೆ, ಇದು ಯಾವ ಸ್ಥಳ ಎನ್ನುವುದು ಖಚಿತವಾಗಿಲ್ಲ. ಒಂದೇ ಕಾರು ಚಾಲಕನಿಗೆ ಎರಡು ಬಾರಿ ತಪ್ಪಾಗಿ ದಂಡ ವಿಧಿಸಲಾಗಿದೆ ಎನ್ನುವುದನ್ನು ಇದು ತೋರಿಸಿದೆ. ಮೊದಲೆಯ ಟಿಕೆಟ್‌ನ ಸಣ್ಣ ಚಿತ್ರದಲ್ಲಿ, ಸಂಚಾರ ನಿಯಮ ಉಲ್ಲಂಘನೆ ಕಂಡ ಕಾರಣಕ್ಕಾಗಿ ಕ್ಯಾಮೆರಾ ಚಿತ್ರ ತೆಗೆದುಕೊಂಡಿದೆ. 2ನೇ ಟಿಕೆಟ್‌ನಲ್ಲಿಯೂ ಮತ್ತೊಮ್ಮೆ ಅದೇ ರೀತಿಯ ಉಲ್ಲಂಘನೆಯ ಟಿಕೆಟ್‌ನ ಚಿತ್ರ ತೆಗೆದಿದೆ.

ಎಐ ಕ್ಯಾಮೆರಾ ಹೇಳುವ ಪ್ರಕಾರ, ಕಾರ್‌ನ ಡ್ರೈವರ್‌ ಸೀಟ್‌ಬೆಲ್ಟ್‌ ಧರಿಸಿಲ್ಲ ಎಂದು ತಿಳಿಸಿದೆ. ಆದರೆ, ನೀವು ಅದೇ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಡ್ರೈವರ್‌ ಸೀಟ್‌ ಬೆಲ್ಟ್‌ ಧರಿಸಿದ್ದು ಕಾಣುತ್ತದೆ. ಹಾಗಿದ್ದರೆ ಆಗಿದ್ದೇನು ಅನ್ನೋದನ್ನು ನೋಡೋದರೆ, AI ಕ್ಯಾಮೆರಾವು ಕಾರಿನ ಸೀಟ್‌ಬೆಲ್ಟ್ ಅನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಏಕೆಂದರೆ ಅದು ಚಾಲಕನ ಶರ್ಟ್‌ ಕಲರ್‌ ನಲ್ಲಿಯೇ ಇದೆ. ಸಾಮಾನ್ಯವಾಗಿ, ಭಾರತದಲ್ಲಿನ ಕಾರುಗಳು ಕಪ್ಪು ಬಣ್ಣದ ಸೀಟ್‌ಬೆಲ್ಟ್‌ಗಳೊಂದಿಗೆ ಬರುತ್ತವೆ.

Tap to resize

Latest Videos

ನೀವು ಪ್ರೀಮಿಯಂ ಕಾರುಗಳನ್ನು ಆರಿಸಿಕೊಂಡರೆ, ಸೀಟ್‌ಬೆಲ್ಟ್‌ಗಳನ್ನು ಸಾಮಾನ್ಯವಾಗಿ ಬೀಜ್ ಅಥವಾ ಲೈಟ್‌ ಕಲರ್‌ನಲ್ಲಿಯೂ ಇರುತ್ತದೆ.. ಆಂತರಿಕ ಥೀಮ್‌ಗೆ ಹೊಂದಿಸಲು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತದೆ. ಆದಾಗ್ಯೂ, ಇದನ್ನು ಪತ್ತೆಹಚ್ಚಲು AI ಕ್ಯಾಮೆರಾವನ್ನು ಪ್ರೋಗ್ರಾಮ್ ಮಾಡಲಾಗಿಲ್ಲ ಮತ್ತು ಅದಕ್ಕಾಗಿಯೇ ಕ್ಯಾಮೆರಾಗಳು ತಪ್ಪಾದ ಟಿಕೆಟ್ ನೀಡಿವೆ. ನಾವು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ.

ಕೇರಳದಲ್ಲಿ, ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು 700 ಕ್ಕೂ ಹೆಚ್ಚು AI ಕ್ಯಾಮೆರಾಗಳನ್ನು ಸ್ಥಾಪಿಸಿದೆ, ಅಲ್ಲಿಯೂ ಕೂಡ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. AI ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ನೋಂದಣಿ ಸಂಖ್ಯೆಗಳನ್ನು ಸರಿಯಾಗಿ ರೀಡ್‌ ಮಾಡುತ್ತಿರಲಿಲ್ಲ. ಅನೇಕ ಸಂದರ್ಭಗಳಲ್ಲಿ, ಕ್ಯಾಮೆರಾ ನಂಬರ್ ಪ್ಲೇಟ್‌ನಲ್ಲಿರುವ ರಿವೆಟ್ ಅಥವಾ ಸ್ಕ್ರೂ ಅನ್ನು ಸೊನ್ನೆ ನಂಬರ್‌ ಎಂದು ಓದುವ ಮೂಲಕ, ತಪ್ಪಾಗಿ ದಂಡವನ್ನು ದಾಖಲು ಮಾಡುತ್ತಿತ್ತು.

ಈ ಪ್ರಕರಣದಲ್ಲೂ ಅಂತಹದ್ದೇನಾದರೂ ನಡೆದಿರಬಹುದು. ಕಾರ್‌ನ ಮಾಲೀಕ ಈ ವಿಚಾರವನ್ನು ಸಂಚಾರ ಪೊಲೀಸರ ಗಮನಕ್ಕೆ ತರುವ ಅವಕಾಶವಿದೆ. ಹಾಗೇನಾದರೂ ಆದಲ್ಲಿ ಚಲನ್‌ಅನ್ನು ರದ್ದುಪಡಿಸುವ ಅವಕಾಶವೂ ಇದೆ. 

VAC Traffic Signal: ಬೆಂಗ್ಳೂರಲ್ಲಿ ಕೆಲಸ ಮಾಡೋಕೆ ಶುರು ಮಾಡಿದ AI ಟ್ರಾಫಿಕ್‌ ಸಿಗ್ನಲ್‌, ಇದರ ಚಿಹ್ನೆಗಳ ಅರ್ಥ ತಿಳಿದುಕೊಳ್ಳಿ!

ಈ ಹಿಂದೆ ಕೇರಳದಲ್ಲಿ AI ಕ್ಯಾಮೆರಾವು ಬೈಕ್‌ನ ವೇಗವನ್ನು ಗಂಟೆಗೆ 1240 ಕಿಮೀ ಎಂದು ಪತ್ತೆ ಮಾಡಿತ್ತು. ಆರಂಭದಲ್ಲಿ, ಹೆಲ್ಮೆಟ್ ಧರಿಸದಿದ್ದಕ್ಕಾಗಿ ದಂಡ ವಿಧಿಸಿರಬಹುದು ಮತ್ತು ಕ್ಯಾಮೆರಾದಲ್ಲಿ ದಾಖಲಾಗಿರುವ ವೇಗ ಸರಿಯಿಲ್ಲ ಎಂದು ಅಧಿಕಾರಿಗಳು ಮಾಲೀಕರಿಗೆ ತಿಳಿಸಿದರು. ಆದರೆ, ಬೈಕ್ ಸವಾರ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಮತ್ತು ತಪ್ಪಾಗಿ ದಂಡ ವಿಧಿಸಲಾಗಿದೆ ಎಂದು ನಂತರ ತಿಳಿದುಬಂದಿದೆ. ನಂತರ ಅಧಿಕಾರಿಗಳು ದಂಡವನ್ನು ರದ್ದುಗೊಳಿಸಿದ್ದರು.

ಸುರಕ್ಷಿತ ಬೆಂಗಳೂರಿಗೆ ಕಮಾಂಡ್ ಸೆಂಟರ್; 7500 ಎಐ ಕ್ಯಾಮೆರಾಗಳಿಂದ ನಗರದಲ್ಲಿ ಕಣ್ಗಾವಲು!

ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು AI ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಉಲ್ಲಂಘನೆಗಳನ್ನು ಪತ್ತೆ ಮಾಡುತ್ತದೆ ಮತ್ತು ನಿಯಂತ್ರಣ ಕೊಠಡಿಗೆ ಚಿತ್ರಗಳನ್ನು ಕಳುಹಿಸುತ್ತದೆ, ಅಲ್ಲಿ ಅಧಿಕಾರಿಗಳು ಚಿತ್ರಗಳನ್ನು ಪರಿಶೀಲಿಸಿದ ನಂತರ ಚಲನ್‌ಗಳನ್ನು ನೀಡುತ್ತಾರೆ. ಆದಾಗ್ಯೂ, ವ್ಯವಸ್ಥೆಯು ಆರಂಭದಲ್ಲಿ ಹಲವಾರು ಸಮಸ್ಯೆಗಳನ್ನು ಹೊಂದಿದ್ದು ನಂತರ ಅದನ್ನು ಸರಿಪಡಿಸಲಾಯಿತು. ಈಗ, ಜಾರಿ ವಿಭಾಗದ ಅಧಿಕಾರಿಯೊಬ್ಬರು ಚಲನ್ ನೀಡುವ ಮೊದಲು ಚಿತ್ರಗಳನ್ನು ಪರಿಶೀಲನೆ ಮಾಡುತ್ತಾರೆ.

Bengaluru traffic Ai cameras raising false ticket for seatbelt with similar color belt and shirt.
byu/gowda99 inCarsIndia

 

 

click me!