ಸಿನಿಮೀಯ ರೀತಿ 1.4 ಕೋಟಿ ನಗದು ಜಪ್ತಿ: ಕಾಂಗ್ರೆಸ್‌ಗೆ ಹಣ ಕೊಟ್ಟವರಿಂದಲೇ ಕರೆ ಎಂದ ತೇಜಸ್ವಿ ಸೂರ್ಯ..!

By Kannadaprabha NewsFirst Published Apr 14, 2024, 9:22 AM IST
Highlights

ಜಯನಗರ 4ನೇ ಬ್ಲಾಕ್‌ನಲ್ಲಿ ಬೈಕ್‌ನಿಂದ ಕಾರಿಗೆ ಹಣ ತುಂಬಿಸಿ ಸಾಗಿಸುವಾಗ ಹೈಡ್ರಾಮಾ | ಹಣ ಸಿಗುತ್ತಿದ್ದಂತೆ ಸಾಗಣೆದಾರರು ಪರಾರಿ
 

ಬೆಂಗಳೂರು(ಏ.14):  ಮಾವಿನ ಹಣ್ಣಿನ ಚೀಲವೆಂದು ಯಾಮಾರಿಸಿ ಕಾರಿನಲ್ಲಿ ಹಣದ ಚೀಲದೊಂದಿಗೆ ಪರಾರಿ ಆದವರ ಬಗ್ಗೆ ಮಹಿಳಾ ಚುನಾವಣಾಧಿಕಾರಿ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪರಿಣಾಮ ಸಿನಿಮೀಯ ರೀತಿಯಲ್ಲಿ ಕಾರನ್ನು ಅಡ್ಡಗಟ್ಟಿ 1.40 ಕೋಟಿ ಜಪ್ತಿ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಜಯನಗರದ 4ನೇ ಬ್ಲಾಕ್‌ನ ಗಣಪತಿ ದೇವಾಲಯದ ಬಳಿ ನಗದನ್ನು ಸಾಗಿಸುತ್ತಿದ್ದ ಎರಡು ಕಾರುಗಳನ್ನು ಚುನಾವಣಾ ಸಿಬ್ಬಂದಿ ತಪಾಸಣೆ ನಡೆಸಿದಾಗ ₹1.4 ಕೋಟಿ ನಗದು ಸಿಕ್ಕಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟು ಜಾರಿಯಲ್ಲಿ ಅಧಿಕಾರಿಗಳು ತೊಡಗಿದ್ದು, ಚುನಾವಣಾಧಿಕಾರಿ ನಿಖಿತಾ ಎಂಬುವವರು ಒಬ್ಬರೇ ರೌಂಡ್‌ನಲ್ಲಿದ್ದರು. ಈ ವೇಳೆ ಅವರಿಗೆ ಹಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿದರು. ಈ ವೇಳೆ ದ್ವಿಚಕ್ರ ವಾಹನದಿಂದ ಐದರು ವ್ಯಕ್ತಿಗಳು ಕಾರಿಗೆ ಚೀಲದಲ್ಲಿದ್ದ ಹಣ ತುಂಬಿಸುತ್ತಿದ್ದರು. ಚೀಲ ತೋರಿಸುವಂತೆ ಹೇಳಿದರೂ ಕಿಡಿಗೇಡಿಗಳು ಮಾವಿನ ಹಣ್ಣಿನ ಚೀಲ ಎಂದು ಸುಳ್ಳು ಹೇಳಿ ಲಗುಬಗೆಯಿಂದ ಕಾರಿನಲ್ಲಿ ಹೊರಟು ಹೋದರು. ಒಬ್ಬರೇ ಇದ್ದ ಕಾರಣ ಮಹಿಳಾ ಅಧಿಕಾರಿ ಬಲವಂತವಾಗಿ ತಡೆಯಲು ಆಗಲಿಲ್ಲ, ಆದರೆ ಕಾರಿನ ಸಂಖ್ಯೆ ಗಮನಿಸಿದ ಅವರು ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಇಂದು ತರಾತುರಿಯಲ್ಲಿ ಶ್ರೀನಿವಾಸಪ್ರಸಾದ್ ಭೇಟಿಗೆ ಮುಂದಾದ ಯಡಿಯೂರಪ್ಪ!

ತಕ್ಷಣ ಕಾರು ಸಾಗಿದ ಮಾರ್ಗ ಆಧರಿಸಿ ಇತರೆ ಅಧಿಕಾರಿಗಳು ಧಾವಿಸಿ ಬಂದು ಕಾರು ಅಡ್ಡಿ ಹಾಕಿ ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ. ಕಾರಿನಲ್ಲಿದ್ದಹಣವನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು? ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಚುನಾವಣಾ ಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹಣದ ಪತ್ತೆ ಬಗ್ಗೆ ಆದಾಯ ತೆರಿಗೆ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿ ಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಸರಿ ಯಾದ ದಾಖಲೆ ಇಲ್ಲದ ಕಾರಣ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಯಾರಿಗೂ ಅನುಮಾನ ಬಾರದಿರಲಿ ಎಂದು ಹಣವನ್ನು ಚೀಲದಲ್ಲಿ ತುಂಬಲಾ ಗಿತ್ತು. ಅಧಿಕಾರಿಗಳು ತಪಾಸಣೆಗೆ ಮುಂದಾದಾಗ ಮಾವಿನ ಹಣ್ಣಿನ ಬ್ಯಾಗ್ ಎಂದು ಸಬೂಬು ಹೇಳಿ ಕಾರನ್ನು ಲಾಕ್ ಮಾಡಲಾಯಿತು. ಅನುಮಾನಗೊಂಡ ಚುನಾಣಾಧಿಕಾರಿಗಳು ಕಾರಿನ ಗ್ಲಾಸ್ ಒಡೆದು ಪರಿಶೀಲಿಸಿದಾಗ ನಗದು ಪತ್ತೆಯಾಗಿದೆ. ಹಣ ಸಿಗು ತ್ತಿದ್ದಂತೆ ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದಾರೆ.

ಚುನಾವಣಾಧಿಕಾರಿ ನಿಖಿತಾ ಮಾತನಾಡಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಬಂದ ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿದೆ. ಈ ವೇಳೆ ರೌಂಡ್‌ನಲ್ಲಿ ಒಬ್ಬಳೇ ಇದ್ದು, ಹಣದ ಚೀಲವನ್ನು ಕಾರಿನಲ್ಲಿ ತುಂಬಿ ಸಲಾಗುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಮಾವಿನ ಹಣ್ಣು ಇರುವುದಾಗಿ ಹೇಳಿ ಕಾರ್‌ನಲ್ಲಿ ತೆರಳಿದರು. ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಎಂದು ಹೇಳಿದರು.

Lok Sabha Election 2024: ಕರ್ನಾಟಕದಲ್ಲಿ ಇಂದು ಮೋದಿ ಅಬ್ಬರ..!

ಕಾಂಗ್ರೆಸ್‌ಗೆ ಹಣ ಕೊಟ್ಟವರಿಂದಲೇ ಕರೆ: ತೇಜಸ್ವಿ

ಹಣ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ನಮಗೆ ಕೆಲವರು ಕರೆ ಮಾಡಿ ಕಾಂಗ್ರೆಸ್ಸಿನವರು ಕೆಂಪು ಬಣ್ಣದ ವೋಕ್ಸ್‌ ವ್ಯಾಗನ್ ಕಾರು ಮತ್ತು ಬಿಳಿ ಬಣ್ಣದ ಇನ್ನೂ ನೋಂದಣಿ ಆಗದ ಬೆಸ್ಟ್ ಕಾರಿನಲ್ಲಿ ಕೋಟ್ಯಂತರ ರುಪಾಯಿ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿದರು. 

ಯಾರಿಂದ ಬಲವಂತವಾಗಿ ಕಾಂಗ್ರೆಸ್ಸಿನವರು ದುಡ್ಡು ತೆಗೆದುಕೊಂಡಿದ್ದಾರೋ ಅವರು ಕರೆ ಮಾಡಿ ಮಾಹಿತಿ ನೀಡಿದರು ಎಂದು ಹೇಳಿದರು. ನಾವು ಕೂಡಲೇ ಮನಾವಣಾಧಿಕಾರಿಗಳಿಗೆ, ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು 10 ನಿಮಿಷದೊಳಗಾಗಿ ಅಧಿಕಾರಿಗಳು ಆ ದೊಡ್ಡ ಮೊತ್ತವನ್ನು ಜಪ್ತಿ ಮಾಡಿದ್ದಾರೆ. ಸುಮಾರು ಒಂದೂವರೆ ಕೋಟಿ ರುಪಾಯಿ ಹಣ ಇತ್ತು ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

click me!