ಸಿರ್ಸಿ ಮೇಲ್ಸೇತುವೆ ಕಾಮಗಾರಿ ಶುರು : ಮಾರ್ಗ ಬದಲು

By Kannadaprabha NewsFirst Published Jan 9, 2020, 7:58 AM IST
Highlights

ಬೆಂಗಳೂರಿನ ಸಿರ್ಸಿ ಸರ್ಕಲ್ ಫ್ಲೈ ಓವರ್ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ. ಇದರಿಂದ ಇಲ್ಲಿನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. 

ಬೆಂಗಳೂರು [ಜ.09]: ಮೈಸೂರು ರಸ್ತೆಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ (ಸಿರ್ಸಿ ಫ್ಲೈಓವರ್‌) ಮೈಸೂರು ರಸ್ತೆಯಿಂದ ಪುರಭವನ ಕಡೆಗೆ ಹೋಗುವ ಮಾರ್ಗದ ಎರಡನೇ ಹಂತದ ಕಾಮಗಾರಿಯನ್ನು ಬುಧವಾರ ರಾತ್ರಿ 11ರಿಂದ ಆರಂಭಿಸಲಾಗಿದೆ.

15 ದಿನದಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಪುರಭವನದ ಕಡೆಯಿಂದ ಮೈಸೂರು ರಸ್ತೆ ಕಡೆ ಸಾಗುವ ವಾಹನಗಳು ಮೇಲ್ಸೇತುವೆ ಕೆಳಭಾಗದಲ್ಲಿಯೇ ಸಂಚರಿಸಬೇಕು. ಮೈಸೂರು ರಸ್ತೆಯಿಂದ ನಗರದ ಒಳಭಾಗಕ್ಕೆ ಬರುವ ವಾಹನಗಳು ಮೇಲ್ಸೇತುವೆ ಬಳಸಿ ಪುರಭವನದ ಕಡೆ ತೆರಳಬೇಕು. 

ಜ.9ರಿಂದ ಸಿರ್ಸಿ ಫ್ಲೈಓವರ್‌ 2ನೇ ಹಂತದ ಕಾಮಗಾರಿ ಶುರು...

ಸಂಜೆ 4ರಿಂದ 11 ವರೆಗೆ ಪುರಭವನ ಕಡೆಯಿಂದ ಹೋಗುವ ವಾಹನಗಳು ಮೇಲ್ಸೇತುವೆ ಮೂಲಕ ಮೈಸೂರು ರಸ್ತೆ ಕಡೆ ಸಂಚಾರ ಮಾಡಬೇಕು. ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಮೇಲ್ಸೇತುವೆಯ ಈಗಾಗಲೇ ಮೊದಲ ಹಂತದ ಕಾಮಗಾರಿ ಮುಗಿದಿರುವ ಮಾರ್ಗದಲ್ಲಿ ಸಂಚರಿಸಿ ಡಾ.ಟಿಸಿಎಂ ರಾಯಲ್‌ ರಸ್ತೆ ಹಾಗೂ ಗೂಡ್‌ಶೆಡ್‌ ರಸ್ತೆಗೆ ಎಡ ತಿರುವು ಪಡೆದು ಮುಂದೆ ಮೆಜೆಸ್ಟಿಕ್‌, ಸಿಟಿ ಮಾರುಕಟ್ಟೆಕಡೆ ಸಾಗಬೇಕಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!