*ಬಾಡಿಗೆದಾರಳಿಗೆ ‘ಒಳ ಉಡುಪು’ಉಡುಗೊರೆ ಕೊಟ್ಟಮನೆ ಮಾಲಿಕ
*ಪೊಲೀಸ್ ಠಾಣೆಗೆ ಮಹಿಳೆ ದೂರು: ಎಫ್‌ಐಆರ್ ದಾಖಲು
*ಮನೆ ಖಾಲಿ ಮಾಡುವಂತೆ ಆತ ಕಿರುಕುಳ
ಬೆಂಗಳೂರು (ಜ. 18): ತನ್ನ ಹುಟ್ಟು ಹಬ್ಬದ ಉಡುಗೊರೆಯಾಗಿ ಒಳ ಉಡುಪು (Undergarment) ಕೊಟ್ಟು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ (Hanumantha Nagar Police) ಮನೆ ಮಾಲಿಕನ ವಿರುದ್ಧ ಬಾಡಿಗೆದಾರ ಮಹಿಳೆಯೊಬ್ಬಳು ದೂರು ದಾಖಲಿಸಿದ್ದಾರೆ. ಶ್ರೀನಗರದ ಸಮೀಪ ಕಲ್ಲಪ್ಪ ಬ್ಲಾಕ್‌ನ ನಿವಾಸಿ ಸಂತ್ರಸ್ತೆಯಾಗಿದ್ದು, ದೂರಿನ ಮೇರೆಗೆ ಮನೆ ಮಾಲಿಕನ ವಿರುದ್ಧ ಹನುಮಂತ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಪೊಲೀಸರು ನೋಟಿಸ್ (Notice) ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಡಿಗೆ ವಿವಾದ: ‘ನನ್ನ ಹುಟ್ಟುಹಬ್ಬಕ್ಕೆ ಒಳ ಉಡುಪುನ್ನು ನೀಡಿದ ಮನೆ ಮಾಲಿಕ, ಬಳಿಕ ಆ ಉಡುಪು ಧರಿಸಿಕೊಂಡು ಮನೆಯಿಂದ ಹೊರಗೆ ಸುತ್ತಾಡಲು ಬರುವಂತೆ ಒತ್ತಾಯಿಸುತ್ತಿದ್ದ. ಅಲ್ಲದೆ ಮೊಬೈಲ್‌ಗೆ ಕರೆ ಮಾಡಿ ಅನುಚಿತವಾಗಿ ಮಾತನಾಡಿದ. ಇದಕ್ಕೆ ಆಕ್ಷೇಪಿಸಿದ್ದರಿಂದ ನನಗೆ ಮನೆ ಖಾಲಿ ಮಾಡುವಂತೆ ಆತ ಕಿರುಕುಳ ಕೊಡುತ್ತಿದ್ದಾನೆ. ಕೆಲ ದಿನಗಳ ಹಿಂದೆ ರಾತ್ರಿ ಕಾಂಪೌಂಡ್ ಜಿಗಿದು ಬಂದು ಮನೆಗೆ ಬೀಗ ಹಾಕಿಕೊಂಡು ಮಾಲಿಕ ತೆರಳಿದ್ದ. ನನಗೆ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾನೆ’ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ.
undefined
ಇದನ್ನೂ ಓದಿ: 27 ವರ್ಷ ಕಿರಿಯ ಹೆಂಡತಿ ಜೊತೆ ಅಸ್ವಾಭಾವಿಕ ಸೆಕ್ಸ್, ವಿರೋಧಿಸಿದ್ದಕ್ಕೆ ಬೆದರಿಕೆ ಹಾಕಿದ ಉದ್ಯಮಿ!
ಹನ್ನೆರೆಡು ವರ್ಷಗಳಿಂದ ಆರೋಪಿತ ಮನೆಯಲ್ಲಿ ಬಾಡಿಗೆಗೆ ಸಂತ್ರಸ್ತೆ ನೆಲೆಸಿದ್ದು, ಇತ್ತೀಚೆಗೆ ಬಾಡಿಗೆ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪವಾಗಿತ್ತು. ಇದರಿಂದ ಮಧ್ಯೆ ರಾತ್ರಿ 12ರ ಸುಮಾರಿಗೆ ದೂರುದಾರಗಳ ಮನೆಗೆ ಮಾಲಿಕ ಬೀಗ ಹಾಕಿದ್ದ. ಈ ಗಲಾಟೆ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಮದ್ಯದ ಅಮಲಿನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ: ಮದ್ಯದ(Alcohol) ಅಮಲಿನಲ್ಲಿ ರಸ್ತೆಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದನ್ನು ಪ್ರಶ್ನಿಸಿದ ಮಹಿಳೆಯೊಬ್ಬರ(Woman) ಜತೆ ಅಸಭ್ಯ ವರ್ತನೆ ತೋರಿದ ಆರೋಪದ ಮೇರೆಗೆ ಅಮೃತಹಳ್ಳಿ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್‌ವೊಬ್ಬರ(Head Constable) ತಲೆದಂಡವಾಗಿದೆ. ಅಮೃತಹಳ್ಳಿ ಠಾಣೆ ಹೆಡ್ ಕಾನ್‌ಸ್ಟೇಬಲ್ ಚಂದ್ರಶೇಖರ್ ಅಮಾನತುಗೊಂಡಿದ್ದು(Suspend), ಯಲಹಂಕ ಉಪ ನಗರ ಸಮೀಪ ಸೋಮವಾರ ರಾತ್ರಿ ಮಹಿಳೆ ಜತೆ ಹೆಡ್ ಕಾನ್‌ಸ್ಟೇಬಲ್ ಅಸಭ್ಯವಾಗಿ ನಡೆದುಕೊಂಡಿದ್ದರು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಯಲಹಂಕ ಉಪನಗರ ಠಾಣೆಯಲ್ಲಿ ಐಪಿಸಿ 354ಎ (ಮಹಿಳೆ ಗೌರವಕ್ಕೆ ಧಕ್ಕೆ ) ಹಾಗೂ ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್(FIR) ದಾಖಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ಹೆಡ್ ಕಾನ್‌ಸ್ಟೇಬಲ್ ಚಂದ್ರಶೇಖರ್ ಅವರನ್ನು ಮಂಗಳವಾರ ಅಮಾನತುಗೊಳಿಸಿ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಕ್ಕಸನಾದ ಪೊಲೀಸಪ್ಪ, ಕಂಪ್ಲೇಂಟ್ ಕೊಡಲು ಠಾಣೆಗೆ ಬಂದ ಬಾಲಕಿಯ ರೇಪ್!
ಹುಟ್ಟುಹಬ್ಬದ(Birthday) ಆಚರಣೆಯಲ್ಲಿ ಮದ್ಯ ಸೇವಿಸಿ ಸ್ಕೂಟರ್‌ನಲ್ಲಿ ಸೋಮವಾರ ರಾತ್ರಿ ಮನೆಗೆ ಮರಳುತ್ತಿದ್ದ ಚಂದ್ರಶೇಖರ್, ಯಲಹಂಕ ಉಪ ನಗರದ ಹೌಸಿಂಗ್ ಬೋರ್ಡ್ ಸಮೀಪ ರಸ್ತೆಬದಿ ಗಾಡಿ ನಿಲ್ಲಿಸಿ ಮೂತ್ರ ವಿಸರ್ಜನೆಗೆ ತೆರಳಿದ್ದರು. ಆ ವೇಳೆ ಬೀದಿ ನಾಯಿಗಳಿಗೆ(Street Dogs) ಆಹಾರ ವಿತರಿಸುತ್ತಿದ್ದ ಮಹಿಳೆಯೊಬ್ಬರು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಗೆ ಆಕ್ಷೇಪಿಸಿದ್ದಾರೆ. ಈ ಮಾತಿಗೆ ಕೆರಳಿದ ಹೆಡ್ ಕಾನ್‌ಸ್ಟೇಬಲ್, ಆ ಮಹಿಳೆ ಜತೆ ಅಸಹ್ಯವಾಗಿ ನಡೆದುಕೊಂಡಿದ್ದರು. ಈ ಬಗ್ಗೆ ವಿಡಿಯೋ ಸಮೇತ ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.