ಶಿವಮೊಗ್ಗ ಜನಶತಾಬ್ದಿಗೆ ಮತ್ತೊಂದು ನಿಲ್ದಾಣ : ಒಂದೇ ನಿಮಿಷ ಸ್ಟಾಪ್

By Suvarna News  |  First Published Jan 15, 2020, 1:42 PM IST

ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಸಂಚರಿಸುವ ಜನಶತಾಬ್ದಿ ರೈಲು ಮತ್ತೊಂದು ಕಡೆ ನಿಲ್ಲಲಿದೆ. ಇಂದಿನಿಂದಲೇ ತರಿಕೆರೆಯಲ್ಲಿ 1 ನಿಮಿಷ ನಿಂತು ತೆರಳಲಿದೆ. 


ತರೀಕೆರೆ (ಜ.15): ಸಂಕ್ರಾಂತಿಯ ಕೊಡುಗೆಯಾಗಿ ಶಿವಮೊಗ್ಗ ದಿಂದ ಬೆಂಗಳೂರಿಗೆ ಪ್ರತಿನಿತ್ಯ ತೆರಳುವ ಪ್ರಯಾಣಿಕರ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಇಂದಿನಿಂದ [ ಜ.15 ರಿಂದ]  ತರೀಕೆರೆ  ರೈಲು ನಿಲ್ದಾಣದಲ್ಲಿ ನಿಂತು ಹೊರಡಲಿದೆ .

ತರೀಕೆರೆ ರೈಲು ನಿಲ್ದಾಣದಲ್ಲಿ ಜನಶತಾಬ್ದಿ ರೈಲು ನಿಲುಗಡೆ ಆಗಬೇಕೆಂದು ಇಲ್ಲಿನ ರೈಲು ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿತ್ತು. ಅದರಂತೆ ಇಲ್ಲಿ ಇನ್ಮುಂದೆ ರೈಲು ನಿಲ್ಲಲಿದೆ. ಆದರೆ ಒಂದು ನಿಮಿಷ ಮಾತ್ರ ಇಲ್ಲಿ ರೈಲು ನಿಂತು ತೆರಳಲಿದೆ.

Tap to resize

Latest Videos

ಶಿವಮೊಗ್ಗ - ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲು...

ಶಾಸಕ ಕೃತಜ್ಞತೆ: ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಪ್ರಯಾಣಿಕರ ಜನ್ಮಶತಾಬ್ದಿ ರೈಲು ನಿಲುಗಡೆಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ರೈಲ್ವೆ ಸಚಿವರಿಗೆ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಶಾಸಕ ಡಿ.ಎಸ್.ಸುರೇಶ್ ಅವರು ಕೃತಜ್ಞತೆ ಅರ್ಪಿಸಿ, ರೈಲು ನಿಲುಗಡೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 

ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್..

ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರ ಜನಶತಾಬ್ದಿ ರೈಲು ನಿಲ್ದಾಣಕ್ಕೆ ಬೆಳಗ್ಗೆ 6 ಗಂಟೆ ವೇಳೆಗೆ ಬರುತ್ತದೆ.

ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು 9.50ಕ್ಕೆ ಯಶವಂತಪುರ ತಲುಪುತ್ತದೆ.

click me!