ಸ್ಮಶಾನವನ್ನೂ ಬಿಡದೆ ಒತ್ತುವರಿ ಮಾಡಿಕೊಂಡ ಬೆಂಗಳೂರು ಜನರಿಗೆ ಜೆಸಿಬಿ ಪವರ್ ತೋರಿಸಿದ ಜಿಲ್ಲಾಧಿಕಾರಿ!

ಬೆಂಗಳೂರು ನಗರ ಜಿಲ್ಲಾಡಳಿತವು 18.85 ಕೋಟಿ ರೂ. ಮೌಲ್ಯದ 8 ಎಕರೆ 0.27 ಗುಂಟೆ ಒತ್ತುವರಿ ಜಮೀನನ್ನು ವಶಪಡಿಸಿಕೊಂಡಿದೆ. ವಿವಿಧ ತಾಲ್ಲೂಕುಗಳಲ್ಲಿ ಗೋಮಾಳ, ಸ್ಮಶಾನ, ಕುಂಟೆ ಸೇರಿದಂತೆ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಲಾಗಿದೆ.

Bengaluru Rs 18 crore worth illegal encroachment Clearance by District Collector Jagadish sat

ಬೆಂಗಳೂರು (ಮಾ.30):  ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ.18.85 ಕೋಟಿ ಅಂದಾಜು ಮೌಲ್ಯದ ಒಟ್ಟು 8 ಎಕರೆ 0.27 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು. 

ಬೆಂಗಳೂರು ನಗರ ಜಿಲ್ಲೆಯಾದ್ಯಂತ ಶನಿವಾರ ವಿವಿಧ ತಾಲ್ಲೂಕುಗಳ  ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ  ಒತ್ತುವರಿಯಾಗಿದ್ದ ಗೋಮಾಳ, ಗುಂಡುತೋಪು, ಸ್ಮಶಾನ, ಕುಂಟೆ, ಸರ್ಕಾರಿ ಮುಫತ್ ಕಾವಲ್,  ಸರ್ಕಾರಿ ಕಟ್ಟೆ ಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.

Latest Videos

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಅಗರ  ಗ್ರಾಮದ ಸ.ನಂ 28ರ ಸರ್ಕಾರಿ ಮುಫತ್ ಕಾವಲ್ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ  1 ಎಕರೆ 0.05  ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ  2.00 ಕೋಟಿಗಳಾಗಿರುತ್ತದೆ. ಕೆಂಗೇರಿ ಹೋಬಳಿಯ ಕಣಮಿಣಕೆ ಗ್ರಾಮದ ಸ.ನಂ 84 ರ ಸರ್ಕಾರಿ ಕಟ್ಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ  0.12  ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ  2.20 ಕೋಟಿಗಳಾಗಿರುತ್ತದೆ.

ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ತಿಗಳಚೌಡೇನಹಳ್ಳಿ  ಗ್ರಾಮದ ಸ.ನಂ 81ರ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.75 ಕೋಟಿಗಳಾಗಿರುತ್ತದೆ. 

ಇದನ್ನೂ ಓದಿ: ಬೆಂಗಳೂರಿನಲ್ಲಿ 80 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ವಶ! ಭೂಗಳ್ಳರಿಗೆ ವಿಷಕಂಠನಾದ ಡಿಸಿ ಜಗದೀಶ್!

ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಅರಕೆರೆ ಗ್ರಾಮದ ಸ.ನಂ 127 ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.20 ಕೋಟಿಗಳಾಗಿರುತ್ತದೆ.
ಹೆಸರಘಟ್ಟ ಹೋಬಳಿಯ ಮತ್ಕೂರು  ಗ್ರಾಮದ ಸ.ನಂ. 64ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.07 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.85 ಕೋಟಿಗಳಾಗಿರುತ್ತದೆ.
ಜಾಲ ಹೋಬಳಿಯ ಹುತ್ತನಹಳ್ಳಿ ಗ್ರಾಮದ ಸ.ನಂ 73ರ ಸರ್ಕಾರಿ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 2 ಎಕರೆಗಳಾಗಿದ್ದು ಅಂದಾಜು ಮೌಲ್ಯ ರೂ 2.00  ಕೋಟಿಗಳಾಗಿರುತ್ತದೆ.

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕಡಬಗೆರೆ ಗ್ರಾಮದ ಸ.ನಂ : 63ರ  ಸರ್ಕಾರಿ ಗುಂಡುತೋಪು  ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.16 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 1.00 ಕೋಟಿಗಳಾಗಿರುತ್ತದೆ. 
ದಾಸನಪುರ ಹೋಬಳಿಯ ಕಡಬಗೆರೆ ಗ್ರಾಮದ ಸ.ನಂ : 95ರ  ಸರ್ಕಾರಿ ಗುಂಡುತೋಪು  ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 0.40 ಕೋಟಿಗಳಾಗಿರುತ್ತದೆ.
ದಾಸನಪುರ ಹೋಬಳಿಯ ಹುಲ್ಲೇಗೌಡೇನಹಳ್ಳಿ ಗ್ರಾಮದ ಸ.ನಂ : 58ರ  ಸರ್ಕಾರಿ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 3 ಎಕರೆಗಳಾಗಿದ್ದು, ಅಂದಾಜು ಮೌಲ್ಯ ರೂ 6.00 ಕೋಟಿಗಳಾಗಿರುತ್ತದೆ.

ಇದನ್ನೂ ಓದಿ: ನಟನಾಗುವ ಮೊದಲೇ ಜೈಲೂಟ ಮಾಡಿಬಂದ ದರ್ಶನ್ ಅಭಿಮಾನಿ ರಜತ್ ಕಿಶನ್! ರೌಡಿಶೀಟರ್ ತೆರೆಯಲು ಪೊಲೀಸರ ಚಿಂತನೆ!

ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಸೂಲಿಕುಂಟೆ ಗ್ರಾಮದ ಸ.ನಂ 48ರ ಗುಂಡು ತೋಪು  ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.02 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.15 ಕೋಟಿಗಳಾಗಿರುತ್ತದೆ. 
ಬಿದರಹಳ್ಳಿ ಹೋಬಳಿಯ ಆದೂರು  ಗ್ರಾಮದ ಸ.ನಂ:  74ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆಯಾಗಿದ್ದು,  ಅಂದಾಜು ಮೌಲ್ಯ ರೂ 2.00 ಕೋಟಿಗಳಾಗಿರುತ್ತದೆ. 
ಬಿದರಹಳ್ಳಿ ಹೋಬಳಿಯ ದೊಡ್ಡಬನಹಳ್ಳಿ  ಗ್ರಾಮದ ಸ.ನಂ:  3ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.01 ಗುಂಟೆಗಳಾಗಿದ್ದು,  ಅಂದಾಜು ಮೌಲ್ಯ ರೂ.0.10 ಕೋಟಿಗಳಾಗಿರುತ್ತದೆ. ವರ್ತೂರು ಹೋಬಳಿಯ ಗುಂಜೂರು ಗ್ರಾಮದ ಸ.ನಂ:  244ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.04 ಗುಂಟೆಗಳಾಗಿದ್ದು,  ಅಂದಾಜು ಮೌಲ್ಯ ರೂ 1.20 ಕೋಟಿಗಳಾಗಿರುತ್ತದೆ.

vuukle one pixel image
click me!