ಬೆಂಗಳೂರು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ: ದಿನಕ್ಕೆ 3 ಪಾಳಿ ಕೆಲಸ ಮಾಡಿಸುತ್ತಿದ್ದರಾ ಮೇಲಧಿಕಾರಿಗಳು?

By Sathish Kumar KH  |  First Published Jul 16, 2024, 5:11 PM IST

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಶಾಂತಿನಗರ ಕೇಂದ್ರ ಕಚೇರಿಯಲ್ಲಿ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೌಕರ ಮಹೇಶ್ ರೆಕಾರ್ಡ್ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. 


ಬೆಂಗಳೂರು (ಜು.16):  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಶಾಂತಿನಗರ ಕೇಂದ್ರ ಕಚೇರಿಯಲ್ಲಿ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೌಕರ ಮಹೇಶ್ ರೆಕಾರ್ಡ್ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. 

ಬೆಂಗಳೂರಿನಲ್ಲಿ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಎಂಟಿಸಿ ಕೇಂದ್ರ ಕಚೇರಿ ಶಾಂತಿನಗರದ 3ನೇ ಮಹಡಿಯ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ನಡೆದ ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ಭೀಡಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಮಹೇಶ್ ಹುಕ್ಕಲಿ (40) ಮೃತ ನೌಕರ ಎಂದು ತಿಳಿದುಬಂದಿದೆ. 

Tap to resize

Latest Videos

undefined

ತುಮಕೂರು-ಚಿತ್ರದುರ್ಗ ನಡುವೆ ಏರ್ಪೋರ್ಟ್ ಇಲ್ಲ; ತಮಿಳುನಾಡಿಗೆ ಕೌಂಟರ್ ಕೊಡಲು ಬೆಂಗಳೂರಲ್ಲೇ 2ನೇ ಏರ್ಪೋರ್ಟ್ ನಿರ್ಮಾಣ

ಶಾಂತಿನಗರದ ಡಿಪೊ 12 ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್, ಉದ್ಯೋಗದಲ್ಲಿ ಮುಂಬಡ್ತಿ ಬಂದು ನೇಮಕಾತಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತ ಮಹೇಶ್ ಅಥಣಿ ಮೂಲದ ಮೂಲದವರಾಗಿದ್ದಾರೆ. ಮದ್ಯವ್ಯಸನಿಯಾಗಿದ್ದ ಮಹೇಶ್‌ನನ್ನು ಕುಟುಂಬಸ್ಥರು ಬೈದು ಕುಡಿತ ಚಟವನ್ನು ಬಿಡಿಸಿದ್ದರು. ನಿನ್ನೆ ಸೆಕ್ಯೂರಿಟಿ ಗಾರ್ಡ್ ಬಳಿ ರೆಕಾರ್ಡ್ ಸೆಕ್ಷನ್ ರೂಮಿನ ಕೀ ಪಡೆದುಕೊಂಡಿದ್ದ ಮಹೇಶ್, ಬೆಳಗ್ಗೆಯಿಂದ ರೆಕಾರ್ಡ್ ರೂಮ್ ಬಳಿಯೇ ಓಡಾಡುತ್ತಿದ್ದನು. ಆದರೆ, ನಿನ್ನೆ ರಾತ್ರಿ ಕೆಲಸ ಮುಗಿದ ಮೇಲೆ ಮನೆಗೆ ಹೋಗದೆ ಕೇಂದ್ರ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಫ್ಯಾನಿಗೆ ವೈರ್ ನೇತುಹಾಕಿ ನೇಣಿನ ಕುಣಿಕೆಯನ್ನಾಗಿ ಮಾಡಿ ಅದಕ್ಕೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

Breaking : ಅಂಕೋಲಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ; 9 ಜನರು ಸಾವು

ಒಂದು ದಿನಕ್ಕೆ 3 ಶಿಫ್ಟ್‌ ಕೆಲಸವನ್ನೂ ಮಾಡಿಸುತ್ತಿದ್ದರು: ಮೃತ ಮಹೇಶ್ ಹುಕ್ಕಲಿ ಅವರ ಸ್ನೀಹಿತರೂ ಆಗಿದ್ದ ಬಿಎಂಟಿಸಿ ಮಾಜಿ ಸಿಬ್ಬಂದಿ ರಮೇಶ್ ಮಾತನಾಡಿ, ಮೇಲಾಧಿಕಾರಿಗಳ ಕಿರುಕುಳಕ್ಕೆ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ಒಂದು ದಿನದಲ್ಲಿ ಮೂರು ಮೂರು ಶಿಫ್ಟ್ ಕೆಲಸವನ್ನು ಒಬ್ಬರೇ ಸಿಬ್ಬಂದಿಗೆ ಕೊಟ್ಟು ಮಾಡಿಸುತ್ತಾರೆ. ಅದರಲ್ಲಿ ರಜೆ ಕೊಡಿ ಎಂದು ಕೇಳಿದರೂ ಒಂದು ದಿನವೂ ರಜೆ ಕೊಡುತ್ತಿರಲಿಲ್ಲ. ಇದರಿಂದ ಬೇಸತ್ತು ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಎಂಟಿಸಿ , ಕೆಎಸ್‌ಆರ್‌ಟಿಸಿಯಲ್ಲಿ ಮೇಲಾಧಿಕಾರಿಗಳ ಕಿರುಕುಳ ದೌರ್ಜನ್ಯ ಜಾಸ್ತಿಯಾಗಿದೆ ಎಂದು ಆರೋಪ ಮಾಡಿದ್ದಾರೆ.

click me!