ವಾರದ ಹಿಂದೆಯಷ್ಟೇ ಜೈಲಿಂದ ಬಿಡುಗಡೆಯಾಗಿದ್ದ ರೌಡಿಶೀಟರ್ ಮೇಲೆ ಪೊಲೀಸರ ಫೈರಿಂಗ್

By Kannadaprabha News  |  First Published Jan 18, 2021, 11:43 AM IST

ವಾರದ ಹಿಂದೆಯಷ್ಟೇ ಜೈಲಿನಿಂದ  ಬಿಡುಗಡೆಯಾಗಿದ್ದ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. 


ಬೆಂಗಳೂರು (ಜ.18): ಕೊಲೆ, ಕೊಲೆ ಯತ್ನ, ರಾಬರಿ ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿಯ ಮೇಲೆ ಫೈರಿಂಗ್ ನಡೆಸಲಾಗಿದೆ. 

ಗಿರಿನಗರ ಸಬ್‌ ಇನ್ಸ್‌ಪೆಕ್ಟರ್‌ ವಿನಯ್ ತಂಡವು ವಿಜಿ ಅಲಿಯಾಸ್ ಗೊಣ್ಣೆ ವಿಜಿ ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು,  ಈ ವೇಳೆ   ಹರಿತವಾದ ಆಯುಧದಿಂದ  ಪೊಲೀಸ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು ಈ ವೇಳೆ ಫೈರಿಂಗ್ ಮಾಡಲಾಗಿದೆ. 
 
 ಕೊಲೆ ಕೊಲೆಯತ್ನ ಧಮ್ಕಿ ದರೋಡೆ ಸೇರಿದಂತೆ ಒಟ್ಟು 18 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗೊಣ್ಣೆವಿಜಿ. ಕಳೆದ ಒಂದು ವಾರದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.  

Latest Videos

undefined

ಜೈಲಿನಿಂದ ಹೊರಬಂದ ಕೂಡಲೇ 307 ಕೇಸ್ ಮಾಡಿದ್ದ. ಗಿರಿನಗರದಲ್ಲಿ ವ್ಯಕ್ತಿಯೊಬ್ಬರಿಗೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಿದ್ದು, ರಾತ್ರಿ ಆರೋಪಿ ವೀರಭದ್ರನಗರ ಬಳಿ ಬರೋ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿತ್ತು.  

ಯಾದಗಿರಿ; ಒಂದೂವರೆ ಕೆಜಿ ಚಿನ್ನ ದರೋಡೆ.. ಪಾಳು ಬಿದ್ದ ಮನೆ ರಹಸ್ಯ! ..

ಈ ವೇಳೆ ಶರಣಾಗುವಂತೆ ಆರೋಪಿ ವಿಜಿಗೆ ತಿಳಿಸಿದರು. ಸರೆಂಡರ್ ಆಗದೇ ಪೊಲೀಸ್ ಕಾನ್ಸ್ ಟೇಬಲ್ ಎಡಭುಜಕ್ಕೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಿದ್ದಾನೆ. 

ಈ ವೇಳೆ ಆಯುಧವನ್ನ ಬಿಸಾಡುವಂತೆ  ಸೂಚನೆ ನೀಡಿದ್ದಾರೆ. ಸೂಚನೆ ನೀಡಿದರೂ ಪೊಲೀಸರ ಮೇಲೆ  ಹಲ್ಲೆಗೆ ಮುಂದಾಗಿದ್ದು  ಈ ವೇಳೆ ಆತ್ಮ ರಕ್ಷಣೆಗಾಗಿ ಆರೋಪಿ ವಿಜಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಸಿಬ್ಬಂಧಿ ಹಾಗೂ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗಾಯಾಳು ಪೊಲೀಸ್ ಕಾನ್ಸ್ ಟೇಬಲ್ ಮಧು ಹಾಗೂ ಗುಂಡೇಟು ತಿಂದ ಆರೋಪಿಗೆ  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!