ಹದ್ದು ತರಬೇತಿ ದಂಧೆ ಮೇಲೆ ‘ಪೊಲೀಸರ ಹದ್ದಿ’ನ ಕಣ್ಣು

By Kannadaprabha NewsFirst Published Feb 28, 2020, 7:44 AM IST
Highlights

ಅಕ್ರಮವಾಗಿ ಹದ್ದುಗಳನ್ನು ತರಬೇತಿ ನೀಡುವ ದಂಧೆ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅಕ್ರಮ ದಂಧೆಕೋರರ ಬೇಟೆ ಶುರು ಮಾಡಿದ್ದಾರೆ. 

ಬೆಂಗಳೂರು [ಫೆ.28]:  ನಗರದಲ್ಲಿ ಅಕ್ರಮವಾಗಿ ಹದ್ದು ತರಬೇತಿ ದಂಧೆ ವಿರುದ್ಧ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಬೇಟೆ ಶುರು ಮಾಡಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಕೇಳಿದ್ದಾರೆ.

ನಗರದಲ್ಲಿರುವರ ಹದ್ದುಗಳ ತರಬೇತಿದಾರರ ಕುರಿತು ಮಾಹಿತಿ ನೀಡುವಂತೆ ಗುರುವಾರ ಆಯುಕ್ತರು ಟ್ವೀಟ್‌ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟು ಹಾಕಿದೆ.

ಎಸ್ಕೇಪ್ ಆಗಿ ಬೆಂಗಳೂರಿಗೆ ನಾನೇ ನಂಬರ್ 1 ಎನ್ನುತ್ತಿದ್ದ ರೌಡಿ ಸ್ಲಂ ಭರತ್ ಫಿನಿಶ್..

ಈ ಟ್ವೀಟ್‌ಗೆ ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಹದ್ದುಗಳ ಮೂಲಕ ನಗರ ಗಸ್ತು ವ್ಯವಸ್ಥೆ ರೂಪಿಸುವ ಯೋಜನೆ ಎಂದೆಲ್ಲ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಎಫ್‌ಎಸ್‌ ಅಧಿಕಾರಿಯೊಬ್ಬರು, ಹದ್ದುಗಳ ತರಬೇತಿಗೆ ಉತ್ತೇಜಿಸುವುದು ಅರಣ್ಯ ಸಂರಕ್ಷಣಾ ಹಾಗೂ ಕಾಡು ಪ್ರಾಣಿಗಳ ರಕ್ಷಣಾ ಕಾಯ್ದೆ ಉಲ್ಲಂಘನೆ ಎಂದು ಹೇಳಿದ್ದಾರೆ.

ಈ ಟ್ವೀಟ್‌ಗೆ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಆಯುಕ್ತರು, ಹದ್ದುಗಳಿಗೆ ತರಬೇತಿ ನೀಡುವುದು ಕಾನೂನು ಬಾಹಿರಕೃತ್ಯವಾಗಿದೆ. ರಾಮನಗರ ಸೇರಿದಂತೆ ಕೆಲವೆಡೆ ಈ ದಂಧೆ ನಡೆದಿರುವ ಕುರಿತು ಮಾಹಿತಿ ಇದೆ. ಹೀಗಾಗಿ ನಗರದಲ್ಲೂ ಏನಾದರೂ ಹದ್ದುಗಳ ತರಬೇತಿ ನಡೆದಿಯೇ ಎಂಬ ಬಗ್ಗೆ ಪರಿಶೀಲನೆಗೆ ನಾಗರಿಕರ ನೆರವು ಕೋರಿದ್ದೇನೆ ಎಂದು ತಿಳಿಸಿದರು.

click me!