ಕೋವಿಡ್ ರೂಲ್ಸ್ ಮರೆತ ಬೆಂಗಳೂರು ಜನತೆ: ಸಿಲಿಕಾನ್ ಸಿಟಿ ಬಸ್‌ಗಳಲ್ಲಿ ಮಾಸ್ಕ್ ಮಾಯ

By Govindaraj S  |  First Published Dec 28, 2022, 12:29 PM IST

ಚೀನಾ, ಜಪಾನ್‌ ಸೇರಿ ಹೊರದೇಶಗಳಲ್ಲಿ ಬಿಎಫ್ 7 ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಹೊರಡಿಸಿದರೂ ಬೆಂಗಳೂರು ಜನತೆ ಮಾತ್ರ ಕೋವಿಡ್ ರೂಲ್ಸ್ ಮರೆತು ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದಾರೆ. 


ಬೆಂಗಳೂರು (ಡಿ.28): ಚೀನಾ, ಜಪಾನ್‌ ಸೇರಿ ಹೊರದೇಶಗಳಲ್ಲಿ ಬಿಎಫ್ 7 ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಹೊರಡಿಸಿದರೂ ಬೆಂಗಳೂರು ಜನತೆ ಮಾತ್ರ ಕೋವಿಡ್ ರೂಲ್ಸ್ ಮರೆತು ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿ ಮಾಸ್ಕ್ ಕಡ್ಡಾಯ ಮಾಡಿದ್ದರೂ ಕೋವಿಡ್ ಭಯವೇ ಇಲ್ಲದೆ ಪ್ರಯಾಣಿಕರು ಓಡಾಡುತ್ತಿದ್ದಾರೆ. ಸುವರ್ಣನ್ಯೂಸ್ ರಿಯಾಲಿಟಿ ಚೆಕ್ ವೇಳೆ ಪ್ರಯಾಣಿಕರು ಮಾಸ್ಕ್ ಹಾಕಿಕೊಂಡಿದ್ದು, ಕೆಲವರಿಗೆ ಮಾಸ್ಕ್ ಬಗ್ಗೆ ಅರಿವೇ ಇಲ್ಲದೆ ನಾಳೆಯಿಂದ ಹಾಕೊತೀವಿ ಎಂದು ಪ್ರಯಾಣಿಕರು ಹೇಳಿದ್ದಾರೆ.

ಫೀಲ್ಡ್‌ಗೆ ಇಳಿದು ತಪಾಸಣೆ ಆರಂಭಿಸಿದ ವೈದ್ಯಾಧಿಕಾರಿಗಳ ತಂಡ: ಹೋಟೆಲ್, ರೆಸ್ಟೋರೆಂಟ್ ಸಿಬ್ಬಂದಿಗಳಿಗೆ ಕಡ್ಡಾಯ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂಬ ಆದೇಶ ಹಿನ್ನಲೆಯಲ್ಲಿ ಬಿಟಿಎಮ್ ಲೇಔಟ್‌ನಲ್ಲಿ ಬಿಬಿಎಂಪಿ ದಕ್ಷಿಣ ವಲಯದ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಧಿಡೀರ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿಗಳ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಪರಿಶೀಲನೆ, ಇಂಡಿಯನ್ ಕಾಫಿ ಹೌಸ್ ರೆಸ್ಟೋರೆಂಟ್‌ನಲ್ಲಿಯೂ ತಪಾಸಣೆ ನಡೆಸಲಾಗಿದೆ. ಮುಖ್ಯ ಆರೋಗ್ಯಧಿಕಾರಿ‌ ಡಾ.ಸುರೇಶ್ ಆದೇಶದ ಮೇರೆಗೆ ಆರೋಗ್ಯ ವೈದ್ಯಾಧಿಕಾರಿ ಗೌತಮ್‌ರಿಂದ ಪರಿಶೀಲನೆ ಮಾಡಲಾಗಿದೆ. ಜೊತೆಗೆ ಬಿಟಿಎಮ್ ಲೇಔಟ್ ಐಎಸಿ ಹೋಟೆಲ್ ಹಾಗೂ ಹಲವು ದರ್ಶನಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

Tap to resize

Latest Videos

undefined

ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಭರದ ಸಿದ್ಧತೆ

ಸರ್ಕಾರದ ಜನಪ್ರತಿನಿಧಿಗಳು ಮಾಸ್ಕ್ ಧರಿಸಲಿ: ಮೊದಲು ರೂಲ್ಸ್ ತರುವ ಸರ್ಕಾರದ ಜನಪ್ರತಿನಿಧಿಗಳು ಮಾಸ್ಕ್ ಧರಿಸಲಿ, ಬಳಿಕ ಸಾಮಾನ್ಯ ಜನರಿಗೆ ಮಾಸ್ಕ್ ಕಡ್ಡಾಯಗೊಳಿಸಿ. ಮಾಧ್ಯಮದ ಮುಂದೆ ಮಾಸ್ಕ್ ಹಾಕದೆ ಮಾತನಾಡುವ ಸುಧಾಕರ್ ಹಾಗೂ ಸಿಎಂ ಬೊಮ್ಮಾಯಿ ಮಾಸ್ಕ್ ಹಾಕಲಿ. ದಂಡ ಹಾಕಿದ್ರು ಪರವಾಗಿಲ್ಲ ಮಾಸ್ಕ್ ಹಾಕಲ್ಲ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಆಲರ್ಟ್ ಆದ ಬಿಬಿಎಂಪಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಆತಂಕ ಹೆಚ್ಚಾಗಿದ್ದು, ಪಾಸಿಟಿವ್ ರೇಟ್ ಹೆಚ್ಚಾಗ್ತಿದ್ದಂತೆ ಬಿಬಿಎಂಪಿ ಆಲರ್ಟ್ ಆಗಿದೆ. ಬಿಬಿಎಂಪಿ ಕಚೇರಿಯ ಆವರಣದಲ್ಲಿ ಸ್ಯಾನಿಟೈಸೆಷನ್ ಕಾರ್ಯ ಶುರುವಾಗಿದ್ದು, ಈಗಾಗಲೇ ಶಾಲಾ- ಕಾಲೇಜುಗಳಲ್ಲಿ ಸ್ಯಾನಿಟೈಸಿಂಗ್ ಕಡ್ಡಾಯ ಎಂದು ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಕಚೇರಿಯ ಆವರಣದಲ್ಲಿ ಸಿಬ್ಬಂದಿ ಸ್ಯಾನಿಟೈಸಿಂಗ್ ಮಾಡುತ್ತಿದ್ದಾರೆ.

Bengaluru: ಬೂಸ್ಟರ್‌ ಡೋಸ್‌ಗೆ ಹೆಚ್ಚಿದ ಬೇಡಿಕೆ: ಕೋವಿಶೀಲ್ಡ್‌ಗಾಗಿ ಕೇಂದ್ರಕ್ಕೆ ಮನವಿ

ಹೊಸವರ್ಷ ಆಚರಣೆ ರಾತ್ರಿ 1 ಗಂಟೆವರೆಗೆ ಮಾತ್ರ: ಕೋವಿಡ್ ಲಾಕ್‌ಡೌನ್ ನಂತರ ಹೊಸವರ್ಷ ತುಂಬಾ ಗ್ರ್ಯಾಂಡ್ ಆಗಲಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದರು. ಸರ್ಕಾರದ ವತಿಯಿಂದ ರಾತ್ರಿ 1 ಗಂಟೆ ವರೆಗೆ ಮಾತ್ರ ಅನುಮತಿ ಆದೇಶ ಹೊರಡಿಸಲಾಗಿದೆ. ಬ್ರಿಗೇಡ್ ರೋಡ್‌ನಲ್ಲಿ ಪ್ರತಿವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಈ ಹಿಂದೆಯೂ ಕೂಡ ಹಲವು ಬಾರಿ ವಿಸಿಟ್ ಮಾಡಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಹೆಚ್ಚಿನ ಭದ್ರತೆಗೆ ಮೆಟಲ್ ಡಿಟೆಕ್ಟರ್, ಬಾಡಿ ಕ್ಯಾಮೆರಾ, ಡ್ರೋನ್ ಕ್ಯಾಮೆರಾ ಮೂಲಕ ನಿಗವಹಿಸಲಾಗುತ್ತೆ. ಈ ಬಾರಿ ಹೆಚ್ಚಿನದಾಗಿ ಹೆಣ್ಣು ಮಕ್ಕಳು, ಮಕ್ಕಳು, ಹಾಗೂ ವೃದ್ಧರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ಲಾನ್ ಮಾಡಲಾಗಿದೆ. ಹಿಂದಿನ ವರ್ಷದಂತೆ ವೆಹಿಕಲ್‌ಗಳಿಗೆ ನಿರ್ಬಂಧಿಸಲಾಗಿದೆ. ಯಾವ ರೀತಿ ಸಾರ್ವಜನಿಕರಿಗೆ ಎಂಟ್ರಿ ಇರತ್ತೆ ಅನ್ನೊದನ್ನ ಕೂಡಾ ಚಿಂತನೆ ನಡೆಸಲಾಗ್ತಿದೆ ಎಂದು ಆಯುಕ್ತರು ಹೇಳಿದ್ದಾರೆ.

click me!