ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

By Sathish Kumar KH  |  First Published May 23, 2023, 1:48 PM IST

ನಗರದಲ್ಲಿ  66/11 ಕೆ.ವಿ ಹೆಚ್.ಬಿ.ಆರ್ ಸ್ಟೇಟಷ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ನಾಳೆ (ಮೇ 24ರ ಬುಧವಾರ) ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.


ಬೆಂಗಳೂರು (ಮೇ 23):  ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವತಿಯಿಂದ ನಗರದಲ್ಲಿ  66/11 ಕೆ.ವಿ ಹೆಚ್.ಬಿ.ಆರ್ ಸ್ಟೇಟಷ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಯತ್ತಿರುವ ಹಿನ್ನೆಲೆಯಲ್ಲಿ ನಾಳೆ (ಮೇ 24ರ ಬುಧವಾರ) ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹೀಗಾಗಿ ನಗರದ ವಿವಿಧ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ನಗರದಲ್ಲಿ ಎಲ್ಲೆಲ್ಲಿ ವಿದ್ಯುತ್‌ ಇರೊಲ್ಲ ಇಲ್ಲಿ ನೋಡಿ:  ಹೆಚ್.ಬಿ.ಆರ್ 1ನೇ ಬ್ಲಾಕ್, 2ನೇ ಬ್ಲಾಕ್, ಯಾಸಿನ್ ನಗರ, ಸುಭಾಶ್ ಲೇಔಟ್, ರಾಮದೇವಸ್ಥಾನದ ರಸ್ತೆ, ರಾಮ ದೇರ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಟೀಚರ್ಸ್ ಕಾಲೋನಿ, ಹೆಚ್.ಬಿ.ಆರ್ 3ನೇ ಬ್ಲಾಕ್, ಶಿವರಾಮಯ್ಯ ಲೇಔಟ್, ರಿಂಗ್ ರಸ್ತೆ, ಸರ್ವೀಸ್ ರಸ್ತೆ, ಕೆ.ಕೆ.ಹಳ್ಳಿ ಗ್ರಾಮ, ಸಿ.ಎಂ.ಆರ್ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಲೇಔಟ್, ಲಿಂಗರಾಜಪುರ, ಜಾನಕೀರಾಮ್ ಲೇಔಟ್, ಕನಕದಾಸ ಲೇಔಟ್, ಗೋವಿಂದಪುರ ಮುಖ್ಯರಸ್ತೆ, ರಶದ್ ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜ್, ಕೆ.ಜಿ.ಹಳ್ಳಿ, ಗೋವಿಂದಪುರ ಗ್ರಾಮ, ಕೆ.ಜಿ.ಹಳ್ಳಿ, ವಿನೋಬನಗರ, ಬಿ.ಎಂ.ಲೇಔಟ್, ಆರೋಗ್ಯಮ್ಮ ಲೇಔಟ್, ಕಾವೇರಿ ಗಾರ್ಡನ್ ಸೇರಿದಂತೆ ಸುತ್ತಲಿನ ಪ್ರದೇಶಗಳ್ಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Tap to resize

Latest Videos

undefined

BELAGAVI: ಮನೆ ಮುಂದಿನ ಹೈಟೆನ್ಷನ್‌ ವೈರ್‌ ತಾಗಿ 13 ವರ್ಷದ ಬಾಲಕಿ ದುರಂತ ಸಾವು!

ಹೆಚ್.ಬಿ.ಆರ್ 4ನೇ ಬ್ಲಾಕ್, ಯಾಸಿನ್ ನಗರ, 5ನೇ ಬ್ಲಾಕ್, ಹೆಚ್.ಬಿ.ಆರ್, ನಾಗವಾರ ಮುಖ್ಯರಸ್ತೆ, ನಾಗವಾರ, ಎನ್.ಜೆ.ಕೆ.ಗಾರ್ಮೆಂಟ್ಸ್, ಬೈರನಕುಂಟೆ, ಕುಪ್ಪುಸ್ವಾಮಿ ಲೇಔಟ್, ಹೆಚ್.ಕೆ.ಬಿ.ಕೆ ಕಾಲೇಜ್, 4ನೇ ಮತ್ತು 5ನೇ ಹೆಚ್.ಬಿ.ಆರ್ ಲೇಔಟ್, ವಿದ್ಯಾ ಸಾಗರ, ಥಣಿಸಂದ್ರ, ಆರ್.ಕೆ. ಹೆಗಡೆನಗರ, ಕೆ.ನಾರಾಯಣಪುರ, ಎನ್.ಎನ್.ಹಳ್ಳಿ, ಬಾಲಾಜಿ ಲೇಔಟ್, ಫೇಸ್ 1 ರಿಂದ 3, ರೈಲ್ವೆ ಮೆನ್ಸ್ ಲೇಔಟ್, ಬಿ.ಡಿ.ಎಸ್ ಲೇಔಟ್, ಸೆಂಟ್ರಲ್ ಎಕ್ಸೈಸ್, ಕೆ.ಕೆ.ಹಳ್ಳಿ, ಹೆಣ್ಣೂರು ಮುಖ್ಯರಸ್ತೆಯಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. 

ಜೊತೆಗೆ ಹೆಚ್.ಆರ್.ಬಿ.ಆರ್ 3ನೇ ಬ್ಲಾಕ್, ಆಯಿಲ್ ಮಿಲ್ ರಸ್ತೆ, ಅರವಿಂದನಗರ, ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಬೆಥೆಲ್ ಸ್ಟ್ರೀಟ್, ಎ.ಕೆ.ಕಾಲೋನಿ, ಹೆಚ್.ಆರ್.ಬಿ.ಆರ್ 1ನೇ ಬ್ಲಾಕ್, 80 ಅಡಿ ರಸ್ತೆ, ಸಿ.ಎಂ.ಆರ್ ರಸ್ತೆ, ಕಾರ್ಲೆ, ಹೆಗಡೆನಗರ, ನಾಗೇನಹಳ್ಳಿ, ಪೊಲೀಸ್ ಕ್ವಾಟರ್ಸ್, ಕೆಂಪೇಗೌಡ ಲೇಔಟ್, ಶಬರೀನಗರ, ಕೆ.ಎಂ.ಟಿ ಲೇಔಟ್, ಭಾರತೀಯ ಸಿಟಿ, ನೂರ್ ನಗರ ಭಾರತ ಲೇಔಟ್, ಭಾರತ ಮಾತಲೇಔಟ್, ಹಿದಾಯತ್ ನಗರ, ಲಿಡ್ಕರ್ ಕಾಲೋನಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿಯನ್ನು ನೀಡಿದೆ. ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. 

ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳೊಂದಿಗೆ ಸಿಎಂ ಸಭೆ:  ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ದಾರಾಕಾರವಾಗಿ ಮಳೆ ಸುರಿಯಿತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ, ಜಲಮಂಡಳಿ ಹಾಗೂ ಬೆಸ್ಕಾಂ ಅಧಿಕಾರಿಗಳನ್ನು ಕರೆದು ತುರ್ತು ಸಭೆಯನ್ನು ನಡೆಸಿದ್ದಾರೆ. ನಗರದಲ್ಲಿ ಕುಡಿಯೋ ನೀರಿನ ಪೈಪ್ ನಲ್ಲಿ ನೀರು ಸೋರಿಕೆ ಹಿನ್ನೆಲೆಯಲ್ಲಿ ಕೂಡಲೇ ದುರಸ್ತಿ ಕ್ರಮಗಳನ್ನು ಕೈಗೊಂಡು ಶಿದ್ಧ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಮಂಡಳಿ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ. 

Bengaluru: ಡ್ರೈವರ್‌ ಮಾತನ್ನ ಉಡಾಫೆ ಮಾಡಿದ ಕುಟುಂಬ: ಮಗಳನ್ನು ನೀರಲ್ಲಿ ಮುಳುಗಿಸಿ ಕಣ್ಣೀರು

ನೀರಿನ ಪೈಪ್‌ ದುರಸ್ತಿ ಮಾಡುವಂತೆ ಮನವಿ: ಬೆಂಗಳೂರಿನ ಬಿಟಿಎಂ ಲೇಔಟ್ ಬಳಿ ಇರೋ ಮೈ ಕೋ ಲೇಔಟ್ ನಲ್ಲಿ ಬಾರಿ ಭೂ ಕುಸಿತ ಉಂಟಾಗಿದೆ. ಸುರಂಗ ಮಾರ್ಗದಲ್ಲಿ ಕುಸಿಯುತ್ತಿರೋ ರಸ್ತೆಯಿಂದಾಗಿ ಆತಂಕ ಶುರುವಾಗಿದೆ. ಲೋಡು ಗಟ್ಟಲೆ ಮಣ್ಣು ತುಂಬಿದರೂ ಭೂ ಕುಸಿತವನ್ನು ಮಾತ್ರ ಮುಚ್ಚಲು ಸಾಧ್ಯವಾಗುತ್ತಿಲ್ಲ. ಭೂ ಕುಸಿತದ ಸುರಂಗ ಕಂಡು ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಕ್ಕ ಪಕ್ಕದ ಮನೆಗಳ ಮಾಲೀಕರು ಕೂಡ ತಮ್ಮ ಮನೆಗಳು ಇರುವ ಭೂಮಿಯೂ ಕುಸಿದು ಹೋಗಲಿದೆ ಎಂಬ ಆತಂಕಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಜಲಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನೀರಿನ ಪೈಪ್‌ಗಳನ್ನು ದುರಸ್ತಿ ಮಾಡುವಂತೆ ಮನವಿ ಮಾಡಿದ್ದಾರೆ.

click me!