ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಮುನ್ನಾದಿನದಂದು ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ರಂಪಾಟ ನಡೆಸಿದ ಘಟನೆ ನಡೆದಿದೆ. ಇಂದಿರಾನಗರದಲ್ಲಿ ಕಾರು ಚಾಲಕನೊಬ್ಬ ಕುಡಿದ ಅಮಲಿನಲ್ಲಿ ಡಿವೈಡರ್ ಮೇಲೆ ಕಾರು ಹತ್ತಿಸಿ ಸಾರ್ವಜನಿಕರ ಮೇಲೆ ರಂಪಾಟ ನಡೆಸಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಡಿ.31): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷ 2025ರ ಸ್ವಾಗತಕ್ಕೆ ರಾತ್ರಿ ವೇಳೆ ಭರ್ಜರಿ ಪಾರ್ಟಿ ಮಾಡುವುದಕ್ಕೆ ಯುವಜನರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ಭೂಪ ಸಂಜೆ 6.40ರ ವೇಳೆಗಾಗಲೇ ಕಂಠಪೂರ್ತಿ ಕುಡಿದು ರಸ್ತೆಯ ಡಿವೈಡರ್ ಮೇಲೆ ಕಾರು ಹತ್ತಿಸಿ ರಂಪಾಟ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲಬ್ರೇಷನ್ ಮೂಡ್ ಆನ್ ಆಗುದೆ. ಇಲ್ಲೊಬ್ಬ ಭೂಪ ಕುಡಿದ ಅಮಲಿನಲ್ಲಿ ಡಿವೈಡರ್ ಮೇಲೆ ಕಾರು ಹತ್ತಿಸಿದ್ದಾರೆ. ಈ ಘಟನೆ ಇಂದಿರಾನಗರದ 100 ಫೀಟ್ ರಸ್ತೆಯ 12ನೇ ಮೇನ್ ಜಂಕ್ಷನ್‌ನಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಡಿವೈಡರ್ ಹತ್ತಿಸಿ ಸಂಚಾರಕ್ಕೆ ಅಡ್ಡಿ ಮಾಡಿದ್ದಲ್ಲದೇ ಅಪಘಾತ ನಡೆದ ಸ್ಥಳದ ಸುತ್ತಲೂ ಸುತ್ತುವರಿದ ಸಾರ್ವಜನಿಕರ ಮೇಲೂ ರಂಪಾಟ ಮಾಡಿದ್ದಾನೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಹೋಗುತ್ತಿದ್ದ ಕಾರು ಏಕಾಏಕಿಯಾಗಿ ಡಿವೈಡರ್ ಮೇಲೆ ಹತ್ತಿದೆ. ಒಳಗೆ ಇದ್ದ ವ್ಯಕ್ತಿಗೆ ಇತರೆ ವಾಹನ ಸವಾರರು ಬುದ್ಧಿ ಹೇಳಿದರೆ ಅವರ ಮೇಲೆಯೇ ದರ್ಪ ತೋರಿಸಿದ್ದಾನೆ.
ನಂತರ ಟ್ರಾಫಿಕ್ ಆಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಕಾರು ಡಿವೈಡರ್ ಹತ್ತಿ ನಿಂತಿರುವುದು ಕಂಡು ಬೈದು ಕೆಳಗಿಳಿಸುವಂತೆ ಸೂಚನೆ ನೀಡಿದ್ದಾರೆ. ಆಗ ಕಾರಿನೊಳಗಿದ್ದ ವ್ಯಕ್ತಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಅವಘಡ ಮಾಡಿಕೊಂಡಿದ್ದಲ್ಲದೇ ಪೊಲೀಸ್ ಹಾಗೂ ಸಾರ್ವಜನಿಕರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದು, ಕೂಲಡೇ ಕಾರಿನಲ್ಲಿ ನುರಿತ ಚಾಲಕರನ್ನು ಕೂರಿಸಿ ಡಿವೈಡರ್‌ನಿಂದ ನಿಧಾನವಾಗಿ ಕೆಳಗಿಳಿಸಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ: 'ಮದುವಣಗಿತ್ತಿ' ಸಿಲಿಕಾನ್ ಸಿಟಿಗೆ ಭಾರೀ ಭದ್ರತೆ!
ಹೊಸ ವರ್ಷದ ಸ್ವಾಗತಕ್ಕೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವ ಇಂದಿರಾನಗರದ 100, 80 ಫೀಟ್ ರಸ್ತೆಯಲ್ಲಿ 600 ಎಲ್ ಇಡಿ ಫೋಕಸ್ ಲೈಟ್ ಅಳವಡಿಕೆ ಮಾಡಲಾಗಿದೆ. ಜೊತೆಗೆ, ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. 100 ಫೀಟ್ ರಸ್ತೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರದ ಜೊತೆಗೆ ಮಹಿಳಾ ಸುರಕ್ಷಿತ ಕೇಂದ್ರ ಸ್ಫಾಪಿಸಲಾಗಿದೆ. ಇಡೀ ಪ್ರದೇಶವನ್ನು ಪೊಲೀಸರು ಸಂಪೂರ್ಣ ಸಿಸಿ ಟಿವಿ ಕಣ್ಗಾವಲಿನಲ್ಲಿ ಇರಿಸಿದ್ದಾರೆ. ಎಲ್ಲರ ಮೇಲೂ ನಿಗಾವಹಿಸಿದ್ದಾರೆ.
ಕೋರಮಂಗಲದಲ್ಲಿ ಹೊಸ ವರ್ಷ ಬರಮಾಡಿಕೊಳ್ಳಲು ಪೊಲೀಸ್ ಇಲಾಖೆ ತಯಾರಿ ಮಾಡಿಕೊಂಡಿದೆ. ಮಿನಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಕ್ಯಾಮೆರಾ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ಇರುವ ಕ್ಯಾಮೆರಾಗಳನ್ನ ಬಿಟ್ಟು 180 ಹೆಚ್ಚುವರಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಸಿಸಿಟಿವಿ ಮಾನಿಟರಿಂಗ್ ಗೆ ಮಿನಿ ಕಂಟ್ರೋಲ್ ರೂಂ ಸ್ಥಾಪಿಸಿ, ಹೆಚ್ಚುವರಿಯಾಗಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ 15 ಸೇಫ್ಟಿ ಐಲ್ಯಾಂಡ್, 15 ವಾಚ್ ಟವರ್ ಸ್ಥಾಪಿಸಲಾಗಿದೆ. ಇನ್ನು 3 ಅಂಬ್ಯುಲೆನ್ಸ್ ಜೊತೆ 2 ಪ್ರೈಮರಿ ಹೆಲ್ತ್ ಸೆಂಟರ್ ವ್ಯವಸ್ಥೆ ಮಾಡಲಾಗಿದೆ. 2 ಫೈರ್ ಸೇಫ್ಟಿ ವಾಹನಗಳ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ವರ್ಷದ ಕೊನೆಯ ವೀಕೆಂಡ್‌ಗೆ ಟ್ರಿಪ್‌ಗೆ ಹೋಗ್ತಿಲ್ವಾ? 500 ರೂಪಾಯಿಗೆ ಬೆಂಗ್ಳೂರಲ್ಲೇ ಈ ಇವೆಂಟ್ಸ್‌ನ ಎಂಜಾಯ್ ಮಾಡಿ!