ಹೊಸ ಯೋಜನೆ, ಮೆಟ್ರೋ, BMTC ಸ್ಮಾರ್ಟ್ ಕಾರ್ಡ್ ತಾಪತ್ರಯಕ್ಕೆ ಫುಲ್ ಸ್ಟಾಪ್

Published : Jul 17, 2019, 11:54 PM ISTUpdated : Jul 18, 2019, 12:00 AM IST
ಹೊಸ ಯೋಜನೆ,  ಮೆಟ್ರೋ, BMTC ಸ್ಮಾರ್ಟ್ ಕಾರ್ಡ್ ತಾಪತ್ರಯಕ್ಕೆ ಫುಲ್ ಸ್ಟಾಪ್

ಸಾರಾಂಶ

ಬೆಂಗಳೂರು ನಾಗರಿಕರಿಗೆ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಜಂಟಿಯಾಗಿ ಶುಭ ಸುದ್ದಿಯೊಂದನ್ನು ನೀಡಲು ಮುಂದಾಗಿವೆ.  ಸರಳ ಮತ್ತು ಸುಲಭ ಪ್ರಯಾಣ ಇನ್ನುಮುಂದೆ ಸುಲಭ ಸಾಧ್ಯ. ಅದು ಏನಪ್ಪಾ ಅಂತೀರಾ?

ಬೆಂಗಳೂರು[ಜು. 17] ಒಂದು ಕಡೆ ಮೆಟ್ರೋ ಪ್ರಯಾಣ ಮಾಡಬೇಕು..  ಮೆಟ್ರೋ ಏರಲು ಬಿಎಂಟಿಸಿ ಬಸ್ ಹತ್ತಬೇಕು.. ಮೆಟ್ರೋಕ್ಕೆ ಒಂದು ಕಾರ್ಡ್.. ಬಿಎಂಟಿಸಿಗೆ ಇನ್ನೊಂದು ಕಾರ್ಡ್.. ಅಯ್ಯಯ್ಯೋ ತಾಪತ್ರಯ..ಎಂದು ಒಳಗಿನಿಂದಲೇ ಅಂದುಕೊಳ್ಳುತ್ತಿದ್ದವರಿಗೆಲ್ಲ ಬಿಡುಗಡೆ ಸಿಗುವ ಕಾಲ ಹತ್ತಿರವಾಗಿದೆ.

ನಮ್ಮ ಮೆಟ್ರೋ ಮತ್ತು ಬೃಹತ್ ಬೆಂಗಳೂರು ರಸ್ತೆ ಸಾರಿಗೆ ಸಂಸ್ಥೆ[ಬಿಎಂಟಿಸಿ] ಜಂಟಿಯಾಗಿ ಪ್ರಯಾಣಿಕರಿಗೆ ಒಂದೇ ಮೊಬಿಲಿಟಿ ಕಾರ್ಡ್ ನೀಡಲು ಮುಂದಾಗಿವೆ. ಈ  ಜಂಟಿ ಸ್ಮಾರ್ಟ್ ಕಾರ್ಡ್ ಗಳು ಆಗಸ್ಟ್ ಅಂತ್ಯ ಅಥವಾ ಸಪ್ಟೆಂಬರ್ ಆರಂಭದಿಂದ ಕೈಸೇರಲಿವೆ.

ಮೆಟ್ರೋಗಾಗಿ ಜಯದೇವ ಫ್ಲೈಓವರ್‌ ಲೂಪ್‌ ತೆರವು

ಬಿಎಂಟಿಸಿ ಹೇಳುವಂತೆ ಈ ಸ್ಮಾರ್ಟ್ ಕಾರ್ಡ್ ಗಳನ್ನು ಬಿಎಂಆರ್ ಸಿಎಲ್ ಕೊಡಮಾಡಲಿದೆ ಆದರೆ ಈ ಕಾರ್ಡ್ ಗಳನ್ನು ಬಿಎಂಟಿಸಿ ಬಸ್ ನಲ್ಲಿಯೂ ಬಳಕೆ ಮಾಡಬಹುದು. ಬಿಎಂಟಿಸಿ ಸಹ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ ಅಳವಡಿಕೆ ಮಾಡಿಕೊಳ್ಳಲು ಮುಂದಾಗಿದ್ದು ಯಾವುದೆ ತಾಪತ್ರಯ ಆಗಲು ಸಾಧ್ಯವಿಲ್ಲ.

ಆಂಡ್ರಾಯ್ಡ್ ತಂತ್ರಜ್ಞಾನ ಬಳಕೆ ಮಾಡಿ ಕಾರ್ಡ್ ಗಳನ್ನು ಕೊಡಮಾಡಲಾಗುವುದರಿಂದ ಆನ್ ಲೈನ್ ಪೇಮೆಂಟ್ ಬಹಳ ಸುಲಭ. ವಿವಿಧ ಕಂಪನಿಗಳೊಂದಿಗೆ ಸಾಫ್ಟ್ ವೇರ್ ಡೆವಲಪ್ ಮೆಂಟ್ ಸಂಬಂಧ ಮಾತುಕತೆಯೂ ನಡೆದಿದೆ.

ಈ ಬಗೆಯ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡುತ್ತೇನೆ ಎಂದು ಮೆಟ್ರೋ ಹೇಳಿದ್ದು ಈಗಿರುವ ಕೆಲ ತಾಂತ್ರಿಕ ಸಮಸ್ಯೆ ನಿವಾರಿಸಿ ಪ್ರಯಾಣಿಕರಿಗೆ ಸರಳ ಮಾರ್ಗ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC