ಗದಗ: ಕಂಡಕ್ಟರ್-ಪ್ಯಾಸೆಂಜರ್ ಕಿರಿಕ್, ಪೊಲೀಸ್ ಠಾಣೆಗೆ ಬಸ್ ತಂದ ಚಾಲಕ

Published : Jul 17, 2019, 08:02 PM IST
ಗದಗ: ಕಂಡಕ್ಟರ್-ಪ್ಯಾಸೆಂಜರ್ ಕಿರಿಕ್, ಪೊಲೀಸ್ ಠಾಣೆಗೆ ಬಸ್ ತಂದ ಚಾಲಕ

ಸಾರಾಂಶ

ಚಿಲ್ಲರೆ ವಿಚಾರಕ್ಕಾಗಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ವಾಗ್ಯುದ್ಧ ನಡೆಯುವುದನ್ನು ಸದಾ ನೋಡುತ್ತಲೇ ಇರುತ್ತೇವೆ. ಇದು ಅಂತಹದೆ ಪ್ರಕರಣ. ಆದರೆ ಇಲ್ಲಿ ಪರಿತಪಿಸಿದ್ದು ಪ್ರಯಾಣಿಕರು.

ಗದಗ[ಜು. 17]  ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಕಿರಿಕ್ ಆಗಿದೆ.  ಪ್ರಯಾಣಿಕರ ಕಿರಿಕ್ ನಿಂದ ಪರಿಣಾಮ ಚಾಲಕ ಬಸ್ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಧಾರವಾಡ ಜಿಲ್ಲೆ  ನವಲಗುಂದ ತಾಲೂಕಿನ ಅಮರಗೊಳಕ್ಕೆ ಬಸ್  ನರಗುಂದ ಪಟ್ಟಣದಿಂದ ತೆರಳುತ್ತಿತ್ತು. ಈ ವೇಳೆ ಅಮರಗೊಳ ನಿವಾಸಿ ಸತೀಶ ಹಾಗೂ ಬಸ್ ಕಂಡಕ್ಟರ್ ನಡುವೆ ಗಲಾಟೆ ಆರಂಭವಾಗಿದೆ. ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವಿನ ಜಗಳ ಅತಿಯಾಗಿ ಉಳಿದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.

ಇದು ಪರಿಹಾರ ಕಾಣುವ ಲಕ್ಷಣ ಕಾಣದಿದ್ದಾಗ ಚಾಲಕ ಬಸ್ ಅನ್ನು ನರಗುಂದ ಪೊಲೀಸ್ ಠಾಣೆಗೆ ಚಲಾಯಿಸಿದ್ದಾರೆ. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಪೊಲೀಸ್ ಠಾಣೆ ಎದುರು ಪ್ರಯಾಣಿಕರನ್ನು ಹೊತ್ತು ಬಸ್ ನಿಂತಿದೆ. ಬಸ್ ನಲ್ಲಿ ಸುಮಾರು 40 ಕ್ಕೂ ಹೆಚ್ಚು ಜನರ ಪ್ರಯಾಣ ಮಾಡುತ್ತಿದ್ದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC