ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡ, ಯಾದಗಿರಿ ಮೂಲದ ವ್ಯಕ್ತಿಯನ್ನು ಪ್ರಿಯಕರನೊಂದಿಗೆ ಬೆಂಗಳೂರಲ್ಲಿ ಕೊಂದ ಪತ್ನಿ!

Published : Nov 28, 2025, 07:07 PM IST
bengaluru crime news

ಸಾರಾಂಶ

ಬೆಂಗಳೂರಿನ ಗಂಗೊಂಡಗಳ್ಳಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಬಸವರಾಜುನನ್ನು, ಪತ್ನಿ ಶರಣಮ್ಮ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ದೇಹವನ್ನು ಸುಟ್ಟುಹಾಕಿದ್ದಳು. 

ಬೆಂಗಳೂರು: ಗಂಗೊಂಡಗಳ್ಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಮೃತದೇಹ ಪ್ರಕರಣವನ್ನು ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಅಕ್ರಮ ಸಂಬಂಧದ ಹಿನ್ನೆಲೆ ಅಡ್ಡಿಯಾಗಿದ್ದಕ್ಕೆ ಗಂಡನನ್ನೇ ಪತ್ನಿ ಕೊಲೆ ಮಾಡಿಸಿದ್ದಾಳೆ. ಈ ಸಂಬಂಧ ಕೊಲೆ ಮಾಡಿದ ಹೆಂಡತಿ ಮತ್ತು ಇಬ್ಬರು ಯುವಕರು ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಗಂಗೊಂಡಗಳ್ಳಿಯ ಕಾಡು ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಅಜ್ಞಾತ ವ್ಯಕ್ತಿಯ ಮೃತದೇಹ ಪತ್ತೆಯಾಯಿತು. ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಗುರುತು ತಪ್ಪುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಸ್ಥಳ ಪರಿಶೀಲನೆ, ತಾಂತ್ರಿಕ ಸಪೋರ್ಟ್ ಮತ್ತು ಮಾನವ ಬಲದ ಸಹಾಯದಿಂದ ಪೊಲೀಸರು ಪ್ರಕರಣವನ್ನು ವೇಗವಾಗಿ ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಿದರು.

ಯಾದಗಿರಿ ಮೂಲದ ಮೃತ ವ್ಯಕ್ತಿ

ಪೊಲೀಸರು ಪತ್ತೆ ಹಚ್ಚಿದಂತೆ, ಕೊಲೆಯಾದ ವ್ಯಕ್ತಿ ಯಾದಗಿರಿ ಜಿಲ್ಲೆಯ ಮೂಲದ ಬಸವರಾಜು (28). ಅವನು ತನ್ನ ಪತ್ನಿ ಶರಣಮ್ಮ ಜೊತೆ ತುಗಳರಪಾಳ್ಯದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಶರಣಮ್ಮ ಮತ್ತು ಬಸವರಾಜು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಬಸವರಾಜು, ವೀರಭದ್ರನ ತಂದೆ ಬಳಿ ಗಾರೆ ಕೆಲಸ ಮಾಡುತ್ತಿದ್ದನು. ಈ ಸಂದರ್ಭದಲ್ಲಿ, ವೀರಭದ್ರ ಕಟ್ಟಡ ಕಾರ್ಯಸ್ಥಳದಲ್ಲಿ ಕೆಲಸಗಾರರನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಹೊಂದಿದ್ದ. ಈ ಭೇಟಿಗಳ ಮಧ್ಯೆ ಶರಣಮ್ಮ ಮತ್ತು ವೀರಭದ್ರನ ನಡುವೆ ಅಕ್ರಮ ಸಂಬಂಧ ಬೆಳೆಯಿತು. ನಂತರ ಈ ಸಂಬಂಧ ಆಳವಾಗಿ ಬೇರೂರಿ, ಒಬ್ಬರನ್ನೊಬ್ಬರು ಬಿಟ್ಟಿರಲಾರದ ಮಟ್ಟಿಗೆ ತಲುಪಿದರೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳಾದ ಪತ್ನಿ ರಣಮ್ಮ (25), ಶರಣಮ್ಮನ ಪ್ರಿಯಕರ ವೀರಭದ್ರ (19) ಮತ್ತು ಮೃತದೇಹ ಸ್ಥಳಾಂತರಕ್ಕೆ ಸಹಕಾರ ನೀಡಿದ ಅನಿಲ್ ಎಂಬಾತನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಭೀಕರ ಕೊಲೆ ಮಾಡಿದ್ದೇಗೆ?

ಆರೋಪಿಗಳಲ್ಲಿ ಓರ್ವನಾದ ವೀರಭದ್ರನ ತಂದೆ ಬಳಿ ಈ ದಂಪತಿ ಗಾರೆ ಕೆಲಸ ಮಾಡಿಕೊಂಡಿದ್ದು, ವೀರಭದ್ರ ಕೆಲಸಗಾರರನ್ನು ನೋಡಿಕೊಳ್ಳುತ್ತಿದ್ದ. ಈ ವೇಳೆ ವೀರಭದ್ರ ಮತ್ತು ಶರಣಮ್ಮ ನಡುವೆ ಸಲುಗೆ ಬೆಳೆದು ಅದು ಅಕ್ರಮ ಸಂಬಂಧಕ್ಕೆ ತಿರುಗಿದೆ. ಇದು ಗಂಡನಿಗೆ ತಿಳಿದು ಗಲಾಟೆಯಾಗಿದೆ. ಹೀಗಾಗಿ ಸುಮಾರು ಒಂದು ತಿಂಗಳ ಹಿಂದೆ ಶರಣಮ್ಮ ಮತ್ತು ವೀರಭದ್ರ ಬಸವರಾಜುವನ್ನು ಕೊಲೆ ಮಾಡುವ ಯೋಜನೆ ರೂಪಿಸಿದ್ದರು. ಕಳೆದ ನ.19ರಂದು ರಾತ್ರಿ ಕೊಲೆ ಯೋಚನೆ ಜಾರಿಯಾದದ್ದು. ಅಂದು ಮಧ್ಯಪಾನ ಮಾಡಿದ ಬಸವರಾಜು ಮನೆಯಲ್ಲಿ ಮಲಗಿದ್ದ. ಈ ವೇಳೆ ಶರಣಮ್ಮ, ವೀರಭದ್ರನಿಗೆ ಕರೆ ಮಾಡಿ ಮನೆಗೆ ಬರಲು ಹೇಳಿದ್ದಳು. ವೀರಭದ್ರ ಮನೆಯೊಳಗೆ ಪ್ರವೇಶಿಸಿದ ನಂತರ, ಭಾರವಾದ ಕಲ್ಲಿನ ತುಂಡಿನಿಂದ ಬಸವರಾಜುವಿನ ತಲೆಯ ಮೇಲೆ ಹೊಡೆದಿದ್ದಾನೆ. ಈ ವೇಳೆ ಆತ ಕುಸಿದುಬಿದ್ದ. ಇಷ್ಟರಲ್ಲೆ ಅವನು ಅರೆ ಜೀವದಲ್ಲಿದ್ದ. ಬಳಿಕ ಗಂಟಲಿಗೆ ನೇಣು ಬಿಗಿದು ಆರೋಪಿಗಳು ಕೊಲೆ ಮಾಡಿದರು. ಬಳಿಕ ಮೃತದೇಹವನ್ನು ಶಿಫ್ಟ್ ಮಾಡಲು ವೀರಭದ್ರ ತನ್ನ ಸ್ನೇಹಿತ ಅನಿಲ್‌ನ ಸಹಾಯ ಪಡೆದನು.

ಮೃತದೇಹವನ್ನು ಸುಟ್ಟು ಸಾಕ್ಷ್ಯ ನಾಶ

ರಾತ್ರಿ 12:30ಕ್ಕೆ, ಮೂವರು ಮನೆಯಲ್ಲಿ ಉಳಿದವರು ಇಡೀ ಲೋಕ ನಿದ್ರಿಸುತ್ತಿರುವುದನ್ನು ಖಚಿತಪಡಿಸಿಕೊಂಡು. ಮನೆಯಲ್ಲಿದ್ದ ಹಳೆಯ ಬಟ್ಟೆಗಳಲ್ಲಿ ಮೃತದೇಹವನ್ನು ಸುತ್ತಿ ದೊಡ್ಡ ಚೀಲದಲ್ಲಿ ಹಾಕಿ ಮನೆ ಹೊರಗೆ ತಂದರು. ಒಂದು ಲೀಟರ್ ಪೆಟ್ರೋಲ್‌ನ್ನು ಕೊಂಡುಕೊಂಡು. ಗಂಗೊಂಡಗಳ್ಳಿಯ ನಿರ್ಜನ ಪ್ರದೇಶಕ್ಕೆ ಮೃತದೇಹವನ್ನು ಸಾಗಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದರು. ಈ ಮೂಲಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಆರೋಪಿಗಳು ಈ ಕ್ರೂರ ಕೃತ್ಯಕ್ಕೆ ಮುಂದಾದರು. ಇಷ್ಟೆಲ್ಲ ನಡೆದ ಬಳಿಕ ಶರಣಮ್ಮ, ನನ್ನ ಗಂಡ ಕಾಣೆಯಾಗಿದ್ದಾನೆ ಹುಡುಕಿಕೊಡಿ ಎಂದು ಬ್ಯಾಡರಹಳ್ಳಿ ಠಾಣೆ ಮೆಟ್ಟಿಲೇರಿದ್ದಳು. ಆದರೆ ಅಷ್ಟರಲ್ಲಾಗಲೇ ಪೊಲೀಸರಿಗೆ ಕೊಲೆ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಬಸವರಾಜು ಕೊಲೆ ಬಳಿಕ ಬಿಳಿ ಬಣ್ಣದ ಕಾರಿನಲ್ಲಿ ಆರೋಪಿಗಳು ಮೃತದೇಹ ಸಾಗಿಸಿರುವ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸರು, ತಾಂತ್ರಿಕ ಸುಳಿವುಗಳು, ಮೊಬೈಲ್ ಲೊಕೇಶನ್ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಮೂವರನ್ನೂ ವಶಕ್ಕೆ ಪಡೆದು ಪ್ರಕರಣವನ್ನು ಭೇದಿಸಿದ್ದಾರೆ.ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!