
ಬೆಂಗಳೂರು (ಆ.17): ಬೆಂಗಳೂರು ಮೆಟ್ರೋದಲ್ಲಿ ಲಗೇಜ್‌ಗೆ ತೂಕ ಜಾಸ್ತಿ ಅಂತ ಹೆಚ್ಚುವರಿ ಶುಲ್ಕ ವಿಧಿಸಿದ್ದಾರೆ ಅಂತ ಪ್ರಯಾಣಿಕನೊಬ್ಬ ದೂರಿದ್ದಾನೆ. ತನ್ನ ಸೂಟ್‌ಕೇಸ್‌ಗೆ 30 ರೂ. ಹೆಚ್ಚುವರಿ ಕೊಡಬೇಕಾಯ್ತು ಅಂತ ಯುವಕನ ಆರೋಪ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅವಿನಾಶ್ ಚಂಚಲ್ ಎಂಬ ಪ್ರಯಾಣಿಕ, ತಾನು ಊರಿನಿಂದ ತೆಗೆದುಕೊಂಡು ಬಂದಿದ್ದ ಸೂಟ್‌ಕೆಸ್‌ಗೆ ಬೆಂಗಳೂರು ಮೆಟ್ರೋದಲ್ಲಿ 30 ರೂ. ಕೊಡಬೇಕಾಯ್ತು ಅಂದರೆ ನಂಗೆ ಆಶ್ಚರ್ಯ ಆಗ್ತಿದೆ. ಈಗಾಗಲೇ ದೇಶದಲ್ಲೇ ಬೆಂಗಳೂರು ಮೆಟ್ರೋ ತುಂಬಾ ದುಬಾರಿ. ಇದರ ಜೊತೆಗೆ ಈ ಹೆಚ್ಚುವರಿ ಶುಲ್ಕನೂ ಬೇರೆ. ಜನ ಮೆಟ್ರೋ ಬಳಸೋದನ್ನೇ ಬಿಟ್ಟುಬಿಡ್ತಾರೆ ಇಂಥದ್ದೆಲ್ಲಾ ನೋಡಿದರೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಹಲವರು ಈ ಪೋಸ್ಟ್‌ಗೆ ಬೆಂಬಲ ಸೂಚಿಸಿದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ದೊಡ್ಡ ಚೀಲಗಳು ಮೆಟ್ರೋದಲ್ಲಿ ಜಾಗ ಆಕ್ರಮಿಸುತ್ತವೆ. ಹಾಗಾಗಿ ಹೆಚ್ಚುವರಿ ಶುಲ್ಕ ವಿಧಿಸೋದು ಸರಿ ಅಂತ ಕೆಲವರು ಹೇಳಿದ್ದಾರೆ. ಸ್ಕ್ಯಾನರ್‌ನಲ್ಲಿ ಹೊಂದಿಕೊಳ್ಳದ ಚೀಲಗಳಿಗೆ ಶುಲ್ಕ ವಿಧಿಸಬೇಕು ಅಂತ ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮೆಟ್ರೋದಲ್ಲಿ ಸುಗಮ ಪ್ರಯಾಣಕ್ಕೆ ಇಂಥ ನಿಯಮಗಳು ಅಗತ್ಯ ಅಂತಲೂ ಕೆಲವರು ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಪ್ರಕಾರ, ಸ್ಟ್ಯಾಂಡರ್ಡ್ ಸ್ಕ್ಯಾನರ್‌ಗಳಲ್ಲಿ ಹೊಂದಿಕೊಳ್ಳದ ಅಥವಾ ನಿಗದಿತ ತೂಕ ಮೀರಿದ ಲಗೇಜ್‌ಗಳಿಗೆ 30 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಆದರೆ ನಿಗದಿತ ತೂಕ ಎಷ್ಟು ಅನ್ನೋದು ಸ್ಪಷ್ಟವಿಲ್ಲ. ಲಗೇಜ್ ಇಡೋಕೆ ಮೆಟ್ರೋದಲ್ಲಿ ಪ್ರತ್ಯೇಕ ಜಾಗವೂ ಇಲ್ಲ.
ಇತ್ತೀಚೆಗೆ ಲಗೇಜ್ ನೀತಿಯ ಅಸ್ಪಷ್ಟತೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ಹೈದರಾಬಾದ್ ಮೆಟ್ರೋ 2022ರಲ್ಲಿ ತನ್ನ ಲಗೇಜ್ ನೀತಿಯನ್ನು ಪರಿಷ್ಕರಿಸಿತ್ತು. ಆದರೆ ಬೆಂಗಳೂರು ಮೆಟ್ರೋದಲ್ಲಿ ಲಗೇಜ್ ನೀತಿಯಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಲಗೇಜ್ ರ್ಯಾಕ್‌ಗಳನ್ನು ಅಳವಡಿಸಬೇಕು ಅಂತ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.
ನಮ್ಮ ಮೆಟ್ರೋದಲ್ಲಿ ಲಗೇಜ್ ಮಿತಿ ಲೆಕ್ಕಾಚಾರ:
ಒಬ್ಬ ವ್ಯಕ್ತಿಗೆ ಗರಿಷ್ಠ 60 cm x 45 cm x 25 cm (ಉದ್ದ x ಅಗಲ x ಎತ್ತರ) ಆಯಾಮದೊಂದಿಗೆ ಒಂದು ಲಗೇಜ್ ಅನ್ನು ಕೊಂಡೊಯ್ಯಲು ಮೆಟ್ರೋದಲ್ಲಿ ಅನುಮತಿಸಲಾಗಿದೆ. ಪ್ರಯಾಣಿಕರು ಹೆಚ್ಚುವರಿ ಲಗೇಜ್/ಹೆಚ್ಚುವರಿ ಸಾಮಾನು ಸರಂಜಾಮು ಮತ್ತು ದೊಡ್ಡ ಗಾತ್ರದ ಸಾಮಾನು ಸರಂಜಾಮುಗಳನ್ನು ಕೊಂಡೊಯ್ಯಲು ಅನುವು ಮಾಡಿಕೊಡಲು, ಪ್ರತಿ ಲಗೇಜ್ ಗೆ 30/- ರೂಪಾಯಿ ದರ ವಿಧಿಸಲಾಗುತ್ತದೆ. ಈ ಲಗೇಜ್ ಟಿಕೆಟ್ ಅನ್ನು ಕಸ್ಟಮರ್ ಕೇರ್ ಸೆಂಟರ್ (ಸಿಸಿಸಿ) ನಿಂದ ಖರೀದಿಸಬಹುದು. ಇನ್ನು ಹೆಚ್ಚುವರಿ ಬ್ಯಾಗೇಜ್ಗೆ ಟಿಕೆಟ್ ಖರೀದಿಸದಿದ್ದರೆ, ರೂ .250/- ದಂಡವನ್ನು ವಿಧಿಸಲಾಗುವುದು. ಯಾವುದೇ ವಿವಾದದ ಸಂದರ್ಭದಲ್ಲಿ, ಆ ಪ್ರಯಾಣಿಕರಿಗೆ ಪ್ರಯಾಣಕ್ಕಾಗಿ ಟಿಕೆಟ್ ಹೊಂದಿದ್ದರೂ, ಮೆಟ್ರೋ ರೈಲ್ವೆ ಆಡಳಿತದ ಯಾವುದೇ ಅಧಿಕೃತ ಮೆಟ್ರೊ ರೈಲ್ವೆ ಅಧಿಕಾರಿಗಳು ಅಥವಾ ಮಟ್ರೋ ರೈಲು ಅಧಿಕಾರಿಗಳ ನೆರವಿಗೆ ಪಡೆದ ಯಾವುದೆ ವ್ಯಕ್ತಿ ರೈಲಿನಿಂದ ಹೊರಹಾಕಬಹುದು.