ಅಟೋ ಹೆಚ್ಚು ಚಾರ್ಜ್ ಮಾಡುತ್ತಿದೆಯಾ? ಬೆಂಗ್ಳೂರು ಟೆಕ್ಕಿಗಳ ಮೀಟರ್ ಹಾಕಿ ಆ್ಯಪ್‌ನಲ್ಲಿ ಚೆಕ್ ಮಾಡಿ

Published : Aug 17, 2025, 10:00 PM IST
Bengauru auto fare hike

ಸಾರಾಂಶ

ಆ್ಯಪ್ ಆಧಾರಿತ ಆಟೋ ರಿಕ್ಷಾ ಸೇವೆ ಪಡೆಯುವಾಗ ಹೆಚ್ಚುವರಿ ಚಾರ್ಜ್ ಮಾಡಿದ ಅನುಮಾನ ಕಾಡುತ್ತಿದೆಯಾ? ಸರ್ಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಬೇಕಾಗಿ ಬಂದಿದೆಯಾ? ಇದೀಗ ಬೆಂಗಳೂರಿನ ಟೆಕ್ಕಿಗಳಿಬ್ಬರು ಮೀಟರ್ ಹಾಕಿ ಸಾಫ್ಟ್‌ವೇರ್ ಅಭಿವದ್ಧಿಪಡಿಸಿದ್ದಾರೆ. ಇದು ನಿಖರ ದರ ತಿಳಿಸುತ್ತದೆ.

ಬೆಂಗಳೂರು (ಆ.17) ನಗರದಲ್ಲಿ ಆಟೋ ಸೇರಿದಂತೆ ಕ್ಯಾಬ್ ಸೇವೆಯನ್ನು ಬಹುತೇಕರು ಬಳಸುತ್ತಾರೆ. ಚೌಕಾಸಿ ಮಾಡುವ ಪ್ರಮೇಯವಿಲ್ಲ. ಕುಳಿತಲ್ಲೇ ಬುಕ್ ಮಾಡಿ ಪ್ರಯಾಣ ಮಾಡಲು ಸಾಧ್ಯವಿದೆ. ಆ್ಯಪ್ ಆಧಾರಿತ ಆಟೋ ಸೇರಿದಂತೆ ಕ್ಯಾಬ್ ಸೇವೆಗಳು ಸರ್ಕಾರ ನಿಗಧಿಪಡಿಸಿದಷ್ಟೇ ಚಾರ್ಜ್ ಮಾಡುತ್ತಿದೆಯಾ? ಸರ್ಕಾರ ನಿಗಧಿಪಡಿಸಿದ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತ ಪಡೆಯುತ್ತಿದ್ದಾರೆ ಅನ್ನೋ ಆರೋಪಗಳು ಗಂಭೀರವಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಟೆಕ್ಕಿಗಳಾದ ಅನ್ಮೋಲ್ ಶರ್ಮಾ ಹಾಗೂ ಯಶ್ ಗಾರ್ಗ್ ಕಳ್ಳಾಟ ಪತ್ತೆ ಹಚ್ಚಲು ಮೀಟರ್ ಹಾಕಿ ಸಾಫ್ಟ್‌ವೇರ್ ಅಭಿವದ್ಧಿಪಡಿಸಿದ್ದಾರೆ. ಮೀಟರ್ ಹಾಕಿ.ಕಾಂನಲ್ಲಿ ಈ ಕ್ಯಾಲ್ಕುಲೇಟರ್ ಲಭ್ಯವಿದೆ. ಇಲ್ಲಿ ನೀವು ಪ್ರಯಾಣ ಮಾಡುವ ಉದ್ದೇಶಿತ ಸ್ಥಳ, ಅದರ ದೂರ ಎಲ್ಲಾ ಸೇರಿಸಿ ಸರ್ಕಾರದ ನಿಗಧಿಪಡಿಸಿದ ಬೆಲೆ ಎಷ್ಟು ಅನ್ನೋ ಸ್ಪಷ್ಟ ಮಾಹಿತಿ ನೀಡುತ್ತದೆ. ಈ ಮೂಲಕ ನೀವು ಹೆಚ್ಚುವರಿ ಪಾವತಿ ಮಾಡುತ್ತಿದ್ದೀರಾ? ಅನ್ನೋದು ಸ್ಪಷ್ಟವಾಗಲಿದೆ.

ಪರಿಷ್ಕೃತ ದರದ ಮೂಲಕ ನಿಖರ ಮಾಹಿತಿ

ಆಗಸ್ಟ್ 1 ರಿಂದ ಆಟೋದರಗಳು ಪರಿಷ್ಕತಗೊಂಡಿದೆ. ಮಿನಿಮಂ ಚಾರ್ಜ್ ಇದೀಗ 36 ರೂಪಾಯಿ ಆಗಿದೆ. ಆರಂಭಿಕ 2 ಕೀಲೋಮೀಟರ್ ವರೆಗೆ ಈ ದರ ಇರಲಿದೆ. ಈ ಮೊದಲು 30 ರೂಪಾಯಿ ಆಗಿತ್ತು. ಇನ್ನು ಹೆಚ್ಚುವರಿ ಕಿಲೋಮೀಟರ್‌ಗೆ 18 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಗೆ ವರೆಗೆ ಒಂದೂವರೆ ಪಟ್ಟು ಚಾರ್ಜ್ ಮಾಡಲಾಗುತ್ತದೆ. ಈ ಹೊಸ ದರದ ಅನ್ವಯ ಮೀಟರ್ ಹಾಕಿ.ಕಾಂ ಮೂಲಕ ಸ್ಪಷ್ಟ ದರ ಪರಿಶೀಲಿಸಿಬಹುದು.

ಮೀಟರ್ ಹಾಕಿ.ಕಾಂ ಮೂಲಕ ಚೆಕ್ ಮಾಡುವುದು ಹೇಗೆ?

ಮೀಟರ್ ಹಾಕಿ.ಕಾಂ ಮೂಲಕ ಸುಲಭವಾಗಿ ಆಟೋ ದರ ಪರಿಶೀಲಿಸಲು ಸಾಧ್ಯ. ನೀವು ಹೋಗಬೇಕಾದ ಸ್ಥಳದ ಒಟ್ಟು ದೂರ ಗೂಗಲ್ ಮ್ಯಾಪ್ ಮೂಲಕ ಚೆಕ್ ಮಾಡಿ. ಇನ್ನು ಆಟೋ ಪ್ರಯಾಣ ಆರಂಭಗೊಂಡಾಗ ಚಾಲಕ ಮೀಟರ್ ಹಾಕಿದ್ದಾನೆ ಅನ್ನೋದು ಖಚಿತಪಡಿಸಿಕೊಳ್ಳಿ. ಈ ಮೀಟರ್ ಮೂಲಕ ದೂರ, ವೈಟಿಂಗ್ ಸಮಯ ದಾಖಲಿಸಿಕೊಳ್ಳಿ. ಅಥವಾ ಆ್ಯಪ್‌ನಲ್ಲಾದರೆ ನೀವು ಕ್ರಮಿಸಬೇಕಾದ ದೂರ, ವೈಟಿಂಗ್ ಸಮಯ ಇದ್ದರೆ, ದಾಖಲಿಸಿ ಮೀಟರ್ ಹಾಕಿ .ಕಾಂನಲ್ಲಿ ಹಾಕಿ ಪರಿಶೀಲಿಸಿ. ತಕ್ಷಣವೇ ನಿಮ್ಮ ಪ್ರಯಾಣಕ್ಕೆ ಸರ್ಕಾರ ನಿಗಧಿಪಡಿಸಿದ ದರ ಎಷ್ಟು ಅನ್ನೋದು ಸ್ಪಷ್ಟವಾಗಲಿದೆ.

ಅಗ್ರೇಟರ್ ಆಟೋ ಆ್ಯಪ್‌ಗಳು ಇದೀಗ ದುಬಾರಿ ಮೊತ್ತ ಪ್ರಯಾಣಿಕರಿಂದ ಕಿತ್ತು ಕೊಳ್ಳುತ್ತಿದೆ. ಇನ್ನು ಆ್ಯಪ್ ಮೂಲಕ ಬುಕಿಂಗ್ ಮಾಡುವಾಗ ಟಿಪ್ಸ್ ಕೇಳುತ್ತದೆ. ನೀವು ನೀಡುವ ಟಿಪ್ಸ್ ಅನುಸರಿಸಿ ಬುಕಿಂಗ್ ಸಮಯ ಕಡಿಮೆಯಾಗುತ್ತದೆ. ನೀವು ಟಿಪ್ಸ್ ನೀಡದಿದ್ದರೆ ಬುಕಿಂಗ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಬುಕಿಂಗ್ ಆದರೂ ಆ್ಯಪ್ ಹಾಕುವ ಚಾರ್ಜ್ ದುಬಾರಿಯಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಇವೆಲ್ಲಾ ಮಾಹಿತಿಯನ್ನು ಮೀಟರ್ ಹಾಕಿ.ಕಾಂ ಸ್ಪಷ್ಟವಾಗಿ ನೀಡಲಿದೆ.

ಅನ್ಮೋಲ್ ಶರ್ಮಾ ಹಾಗೂ ಯಶ್ ಗಾರ್ಗ್ ಇದೀಗ ಮೀಟರ್ ಹಾಕಿ.ಕಾಂ ಸಾಫ್ಟ್‌ವೇರ್ ಜೊತೆಗೆ ಆ್ಯಪ್ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ