ಟ್ರಾಫಿಕ್‌ನಲ್ಲಿ ಸಿಲುಕಿದ ಬೆಂಗಳೂರು ವ್ಯಕ್ತಿಗೆ 'ಸಹಾಯ ಬೇಕೇ...?' ಎಂದು ಉಬರ್‌ ನೋಟಿಫಿಕೇಷನ್‌: ಪೋಸ್ಟ್‌ ವೈರಲ್‌

By BK Ashwin  |  First Published Aug 20, 2023, 7:40 PM IST

ನಗರದಲ್ಲಿ ಉಬರ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು. ಇದಕ್ಕೆ ಅವರಿಗೆ ಕ್ಯಾಬ್ ಸೇವೆಯಿಂದ "ಸಹಾಯ ಬೇಕೇ? ಎಂಬ ನೋಟಿಫಿಕೇಷನ್‌ ಬಂದಿದೆ. ಈ ಪೋಸ್ಟ್‌ ವೈರಲ್‌ ಆಗಿದೆ. 


ಬೆಂಗಳೂರು (ಆಗಸ್ಟ್‌ 20, 2023): ಬೆಂಗಳೂರು ಟ್ರಾಫಿಕ್‌ ಬಗ್ಗೆ ಜಗತ್ತಿಗೇ ಗೊತ್ತಿದೆ. ಕೆಲವೇ ಕಿಲೋಮೀಟರ್‌ ದೂರ ಹೋಗಲು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕೋದು ವಾಹನ ಸವಾರರಿಗೆ ಹಾಗೂ ಪ್ರಯಾಣಿಕರಿಗೆ ಸಾಮಾನ್ಯವಾಗಿಬಿಟ್ಟಿದೆ. ಇನ್ನು, ನಗರದಲ್ಲಿ ಕ್ಯಾಬ್‌ಗಳನ್ನು ಬಳಸಿ ಒಂದು ಸ್ಥಳದಿಂದ ಇನ್ನೊಂದು ಕಡೆಗೆ ಹೋಗುವಾಗ ನಿಯಮಿತವಾಗಿ ಅನೇಕ ವಿಭಿನ್ನ ಅನುಭವಗಳನ್ನು ಎದುರಿಸುತ್ತಾರೆ. ಈ ಪೈಕಿ ಹಲವು ಅನುಭವಗಳು ಪ್ರಯಾಣಿಕರನ್ನು ಗೊಂದಲಕ್ಕೀಡುಮಾಡುತ್ತವೆ.

ಇತ್ತೀಚೆಗೆ ನಗರದಲ್ಲಿ ಉಬರ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು. ಇದಕ್ಕೆ ಅವರಿಗೆ ಕ್ಯಾಬ್ ಸೇವೆಯಿಂದ "ಸಹಾಯ ಬೇಕೇ? ಎಂಬ ನೋಟಿಫಿಕೇಷನ್‌ ಬಂದಿದೆ. ನಿಮ್ಮ ವಾಹನವು ಸ್ವಲ್ಪ ಸಮಯದಿಂದ ನಿಂತಿದೆ. ಎಲ್ಲವೂ ಸರಿ ಇದ್ಯಾ ಅಂತ ದಯವಿಟ್ಟು ನಮಗೆ ತಿಳಿಸಿ" ಎಂಬ ಅಧಿಸೂಚನೆಯನ್ನು ಉಬರ್‌ ಕಳಿಸಿದೆ. ಈ ಬಗ್ಗೆ ಆ ಕ್ಯಾಬ್‌ ಪ್ರಯಾಣಿಕ ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ಸ್ಕ್ರೀನ್‌ಶಾಟ್‌ ಅನ್ನು ಹಂಚಿಕೊಂಡಿದ್ದಾರೆ. 

Tap to resize

Latest Videos

ಇದನ್ನು ಓದಿ: ಇನ್ಮುಂದೆ ನಾಲ್ಕೇ ಗಂಟೆಯಲ್ಲಿ ರೈಲಿನಲ್ಲಿ ಬೆಂಗಳೂರು - ಚೆನ್ನೈ ಆರಾಮವಾಗಿ ಪ್ರಯಾಣ ಮಾಡಿ!

ಅಲ್ಲದೆ, ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿರುವ ಅವರು, "ಸಹೋದರ, ಇದು ತುರ್ತು ಪರಿಸ್ಥಿತಿಯಲ್ಲ; ಇದು ಬೆಂಗಳೂರು ಟ್ರಾಫಿಕ್" ಎಂದು ಬರೆದಿದ್ದಾರೆ. ಆದರೆ, ಆ ವ್ಯಕ್ತಿ ತನ್ನ ಡೆಸ್ಟಿನೇಷನ್‌ ತಲುಪಲು ಆಟೋ ಅಥವಾ ಕಾರನ್ನು ಬುಕ್ ಮಾಡಿದ್ದಾನೆಯೇ ಎಂಬುದನ್ನು ಪೋಸ್ಟ್ ಬಹಿರಂಗಪಡಿಸಿಲ್ಲ.

ಬೆಂಗಳೂರು ಸಾರ್ವಜನಿಕರು ನಗರದಲ್ಲಿ ಕ್ಯಾಬ್‌ಗಳನ್ನು ಬುಕ್ ಮಾಡುವಾಗ ಅಥವಾ ಪ್ರಯಾಣಿಸುವಾಗ ಉಲ್ಲಾಸದ ಅನುಭವವನ್ನು ಎದುರಿಸಿದ ಇತ್ತೀಚಿನ ಅನೇಕ ಘಟನೆಗಳಲ್ಲಿ ಇದು ಒಂದು ಮಾತ್ರ. ಕೆಲವು ದಿನಗಳ ಹಿಂದೆ, ಮಹಿಳೆಯೊಬ್ಬರು ಉಬರ್ ಅನ್ನು ಬುಕ್ ಮಾಡುವಾಗ ತನ್ನ ಆಟೋ ದರ 46 ರೂ. ಇದ್ದಿದ್ದು 6 ರೂ. ಗೆ ಇಳಿಕೆಯಾದ ಬಗ್ಗೆ ಪೋಸ್ಟ್‌ ಮಾಡಿದ್ದರು. ಪ್ರೋಮೋ ಕೋಡ್‌ ಅಪ್ಲೈ ಆದ ಬಳಿಕ ಪ್ರಯಾಣದ ದರ ಕಡಿತವಾಗಿದ್ದು, ಅಪ್ಲಿಕೇಷನ್‌ನಲ್ಲಿ ದೋಷವಿದ್ಯಾ ಎಂದು ಆಶ್ಚರ್ಯ ಪಡುವಂತೆ ಮಾಡಿತು.

ಇದನ್ನೂ ಓದಿ: Bengaluru Traffic ಅವ್ಯವಸ್ಥೆಗೆ ವರ್ಷಕ್ಕೆ 20,000 ಕೋಟಿ ನಷ್ಟ: ಬಯಲಾಯ್ತು ಶಾಕಿಂಗ್ ಅಧ್ಯಯನ

ಹಾಗೂ, ಸಾರ್ವಜನಿಕರು ಇತರ ಪ್ರಯಾಣ ಅಪ್ಲಿಕೇಶನ್‌ಗಳನ್ನು ಬಳಸುವಾಗಲೂ ಇದೇ ರೀತಿಯ ಘಟನೆಗಳನ್ನು ಅನುಭವಿಸಿದ್ದಾರೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಇತ್ತೀಚೆಗೆ ರ‍್ಯಾಪಿಡೋ ರೈಡ್ ಅನ್ನು ಬುಕ್ ಮಾಡಿದ್ದು, ರೈಡರ್ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ ಮತ್ತು ಆತ ಎಂಜಿನಿಯರ್ ಆಗಿದ್ದು, ರೈಡಿಂಗ್ ಮಾಡುವ ಉತ್ಸಾಹಿಯಾಗಿದ್ದಾನೆ ಎಂದು ನಂತರ ತಿಳಿದುಬಂದಿದೆ.

click me!