Bengaluru: 7 ವರ್ಷದ ಬಳಿಕ ಕೊನೆಗೂ ಉದ್ಘಾಟನೆಗೆ ಸಿದ್ದಗೊಂಡ ಕಲಾಸಿಪಾಳ್ಯ ಬಸ್ ನಿಲ್ದಾಣ!

By Gowthami K  |  First Published Feb 21, 2023, 5:55 PM IST

ಬೆಂಗಳೂರಿನ ಹೃದಯ ಭಾಗದ ಕಲಾಸಿಪಾಳ್ಯ ಬಸ್ ಟರ್ಮಿನಲ್ 7 ವರ್ಷದ ಬಳಿಕ ಕಾಮಗಾರಿ ಪೂರ್ಣಗೊಂಡು ಈಗ ಉದ್ಘಾಟನೆಗೆ ಸಜ್ಜಾಗಿದೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ ಹೈಟೆಕ್ ನಿಲ್ದಾಣ ಇದೇ ಫೆಬ್ರವರಿ 24 ರಂದು ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ.


ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು( ಫೆ.21); ಒಂದು ಬಸ್ ಟರ್ಮಿನಲ್ ಕಾಮಗಾರಿ ಆರಂಭಗೊಂಡು ಮುಗಿಯಲು ಅಬ್ಬಬ್ಬಾ ಅಂದರೆ ಮೂರ್ನಾಲ್ಕು ವರ್ಷ ತೆಗೆದುಕೊಳ್ಳಬಹುದು. ಆದ್ರೆ ನಗರ ಹೃದಯ ಭಾಗದ ಕಲಾಸಿಪಾಳ್ಯ ಬಸ್ ಟರ್ಮಿನಲ್ 7 ವರ್ಷದ ಬಳಿಕ ಕಾಮಗಾರಿ ಪೂರ್ಣಗೊಂಡು ಈಗ ಉದ್ಘಾಟನೆಗೆ ಸಜ್ಜಾಗಿದೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ ಹೈಟೆಕ್ ನಿಲ್ದಾಣ ಇದೇ ಫೆಬ್ರವರಿ 24 ರಂದು ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಸಿಲಿಕಾನ್ ಸಿಟಿಯ ಹೃದಯ ಭಾಗ ಅಂದರೆ ಅದು ಮೆಜೆಸ್ಟಿಕ್, ಮಾರುಕಟ್ಟೆ ಮತ್ತೆ ಕಲಾಸಿಪಾಳ್ಯ. ವ್ಯಾಪಾರ ವಹಿವಾಟಿಗೆ ಜನ ಇಲ್ಲಿಗೆ ಬೇರೆ ಬೇರೆ ಜಿಲ್ಲೆ ಹಾಗೂ ಅನ್ಯ ರಾಜ್ಯಗಳಿಂದ ಬರ್ತಾರೆ. ಕಲಾಸಿಪಾಳ್ಯ ಅಂತೂ ಯಾವಾಗಲೂ ಜನದಟ್ಟಣೆ. ಇಲ್ಲಿ ಸುವ್ಯವಸ್ಥಿತ ಬಸ್ ನಿಲ್ದಾಣ ಇಲ್ಲದೆ ಜನ ಸಮಸ್ಯೆ ಅನುಭವಿಸುತ್ತಿದ್ರು. ಆದ್ರೆ ಇದೀಗ ಹೈಟೆಕ್ ನಿಲ್ದಾಣ ನಿರ್ಮಾಣವಾಗಿದ್ದು , ಇದೇ ತಿಂಗಳ 24ರಂದು ಉದ್ಘಾಟನೆ ಆಗಲಿದೆ. ಈ ನಿಲ್ದಾಣ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ನಗರಗಳು,ರಾಜ್ಯಗಳಿಗೂ ಇಲ್ಲಿಂದಲೂ ಬಸ್ ಗಳು ತೆರಳುತ್ತವೆ. ಒಟ್ಟು 60 ಕೋಟಿ ವೆಚ್ಚದಲ್ಲಿ, 4.13 ಎಕರೆ ಜಾಗದಲ್ಲಿ ಟರ್ಮಿನಲ್ ನಿರ್ಮಾಣಗೊಂಡಿದೆ.

Latest Videos

undefined

ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಕ್ಕೆ ಜಾಗವೇ ಸಿಗುತ್ತಿಲ್ಲ!

2016 ರ ಆಸುಪಾಸಿನಲ್ಲಿ ಆರಂಭವಾದ ಟರ್ಮಿನಲ್ ಯೋಜನೆ 2018 ರಲ್ಲೇ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಆಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಸುಮಾರು ನಾಲ್ಕು ವರ್ಷದ ನಂತರ ತಡವಾಗಿ ಉದ್ಘಾಟನೆ ಆಗ್ತಿದೆ. ಇದುವರೆಗೆ ಕಲಾಸಿಪಾಳ್ಯ ದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಅಂತರ್ ರಾಜ್ಯ ಖಾಸಗಿ ಬಸ್ ಗಳು ರಸ್ತೆಯಲ್ಲೇ ನಿಂತು ತೊಂದರೆ ಆಗುತ್ತಿತ್ತು. ಇದೀಗ ಬಸ್ ನಿಲ್ದಾಣ ಉದ್ಘಾಟನೆಗೊಂಡರೆ ಕಿರಿಕಿರಿ  ನಿವಾರಣೆ ಆಗಲಿದೆ. ಕಲಾಸಿಪಾಳ್ಯ ಸುತ್ತಮುತ್ತ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಬೀಳಲಿದೆ.

ಕಲಾಸಿಪಾಳ್ಯದಲ್ಲಿ ಜನ ದಟ್ಟಣೆ ತಡೆಗೆ ಮಾರುಕಟ್ಟೆ ಸ್ಥಳಾಂತರ

click me!