ಉಡುಪಿಯ ಅಡ್ಕದಕಟ್ಟೆಯ ಬಳಿ ತ್ರಿಕೋನಾಕಾರದ ಶಾಸನ ಪತ್ತೆ!

By Suvarna News  |  First Published Feb 21, 2023, 5:18 PM IST

ಉಡುಪಿಯ ನಿಟ್ಟೂರಿನ ಪಂಚಧೂಮಾವತಿ ದೈವಸ್ಥಾನದ ಬಳಿ ರಸ್ತೆ ಕಾಮಗಾರಿ ವೇಳೆ ಶಾಸನವೊಂದು ವಾಹನ ತಿರುಗುವ ಜಾಗದ ಮಧ್ಯದಲ್ಲಿಯೇ ಹೊಂದಿಕೊಂಡು ತ್ರಿಕೋನಾಕೃತಿ ಹೊಂದಿದ ಶಾಸನವು ಮಣ್ಣಿನ ಅಡಿಯಲ್ಲಿ ಹೂತು ಹೋಗಿರುವುದು ಕಂಡುಬರುತ್ತದೆ.


ಉಡುಪಿ (ಫೆ.21): ನಿಟ್ಟೂರಿನ ಪಂಚಧೂಮಾವತಿ ದೈವಸ್ಥಾನದ ಬಳಿ ಅಗಲೀಕರಣವಾದ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣವಾದುದರಿಂದ  ಈ ಶಾಸನವೊಂದು ವಾಹನ ತಿರುಗುವ ಜಾಗದ ಮಧ್ಯದಲ್ಲಿಯೇ ಹೊಂದಿಕೊಂಡು ತ್ರಿಕೋನಾಕೃತಿ ಹೊಂದಿದ ಶಾಸನವು ಮಣ್ಣಿನ ಅಡಿಯಲ್ಲಿ ಹೂತು ಹೋಗಿರುವುದು ಕಂಡುಬರುತ್ತದೆ. ಅದನ್ನು ಸ್ವಚ್ಛಗೊಳಿಸಿದಾಗ ಅದರ ಮೇಲ್ಭಾಗದಲ್ಲಿ ಸೂರ್ಯ ಚಂದ್ರ. ದೊಡ್ಡ ಕಣ್ಣುಇರುವ ಮಾನವನ ದೇಹ, ಕೈಯಲ್ಲಿ ಆಯುಧಗಳು ಕಂಡು ಬಂದಿದೆ. ಅಲ್ಲಿನ ಸ್ಥಳೀಯ ನಿವಾಸಿ ಉಮೇಶ್ ಮೆಂಡನ್ ಅವರು ಹೇಳುವ ಪ್ರಕಾರ 1983 ಇಸವಿಯಲ್ಲಿ ಉಡುಪಿಗೆ ಬಹಳ ದೊಡ್ಡ ನೆರೆ ಬಂದಾಗ ಬನ್ನಂಜೆಯಿಂದ ನಾವು ಇಲ್ಲಿಗೆ ಬಂದು ನೆರೆ ಹಾವಳಿಯಿಂದ ನಿಟ್ಟೂರಿನಲ್ಲಿ ಸಿಕ್ಕಿರುವ ಜಾಗದಲ್ಲಿ ಮನೆ ಕಟ್ಟಿ ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಅವಾಗ ಈ ಪ್ರದೇಶ ಬೋಳು ಗುಡ್ಡೆಯಾಗಿತ್ತು ಇಲ್ಲಿಯ ಪರಿಸರ ನಮ್ಮ ಮನೆ ಪಕ್ಕದಲ್ಲಿಯೇ ಧೂಮಾವತಿ ದೈವಸ್ಥಾನ ಇದೆ. ದೈವವು ಸಂಚಾರ ಮಾಡುವಾಗ ಈ ಕಲ್ಲಿನ ಬಳಿಗೆ ಹೋಗಿ ಹಾಲನ್ನು ನಾವು ದೈವ ಸಂಚಾರದ ಸಮಯದಲ್ಲಿ ನೀಡುತ್ತೇವೆ. ಆಗಿಂದ ಈಗಿನವರೆಗೂ ಈ ಕಲ್ಲು ಹಾಗೆಯೇ ಇದೆ ಕೆಲವರು ಇದನ್ನು ನಿರುಪುಗಲ್ಲು ಅಂತ ಹೇಳುತ್ತಾರೆ. ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ಬೆಳೆದು ನಿಂತಿದೆ. ಫ್ಲ್ಯಾಟ್ ನಲ್ಲಿ ವಾಸಿಸುವ ಮಂದಿ ಕೆಲವರು ದೀಪ ಹಚ್ಚಿ ಕೈಮುಗಿಯುತ್ತಾರೆ ಎಂದು ಉಮೇಶ್ ಮಂಡನ್ ತಿಳಿಸಿದ್ದಾರೆ.

ಸ್ಥಳೀಯ ನಿವಾಸಿ ಉಪೇಂದ್ರ ಮೆಂಡನ್ ಅವರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು. ಹಾಗೂ ಜಯಶೆಟ್ಟಿ ಬನ್ನಂಜೆ ಕೂಡ ಜೊತೆಗಿದ್ದರು. ಎರಡು ವಾರದ ಹಿಂದೆ ಬನ್ನಂಜೆಯಲ್ಲಿ ವೀರಗಲ್ಲು ಪತ್ತೆಯಾಗಿರುವುದರಿಂದ ಹಿನ್ನೆಲೆಯಲ್ಲಿ ಅದೇ ದಾರಿಯಲ್ಲಿ ಮುಂದುವರಿದಾಗ ನಿಟ್ಟೂರಿಗೆ ಸಂಪರ್ಕಿಸುತ್ತದೆ. ಈ ಜಾಗದಲ್ಲಿ ಮತ್ತೊಂದು ಶಾಸನ ಹುದುಗಿ ಹೋಗಿರುವ ರೀತಿಯಲ್ಲಿ ಕಂಡು ಬರುವ ಶಾಸನವು ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಪ್ರೊ,ಟಿ, ಮುರುಗೇಶಿ ಅವರ ಬಳಿ ಮಾಹಿತಿ ನೀಡಿದಾಗ ಇದನ್ನು ಗರಡಿಕಲ್ಲು ಅವರು ಎಂದು ತಿಳಿಸಿದ್ದಾರೆ.

Tap to resize

Latest Videos

undefined

ಉಡುಪಿ: ಕುಂದಾಪುರದಲ್ಲಿ ಅಪರೂಪದ ಶಾಸನ ಪತ್ತೆ

ಈ ಶಾಸನ ಅರ್ಧ ಕಿಲೋಮೀಟರ್ ಅಂತರದಲ್ಲಿಯೇ ಚಲಿಸಿದಾಗ ಮೂಡ ನಿಡಂಬೂರು ಗರಡಿಯೂ ಇದೆ, ಒಟ್ಟಿನಲ್ಲಿ ಗರಡಿಯಲ್ಲಿ ಅಭ್ಯಾಸ ಮಾಡುವಾಗ. ಅಥವಾ ಯುದ್ಧ ಮಾಡುವಾಗ ಯಾರಾದರೂ ವೀರ ಮರಣ ಹೊಂದಿದರೆ. ಅಂಥವರಿಗೆ ಇಂತಹ ಕಲ್ಲುಗಳನ್ನು ಇಟ್ಟು ನೆನಪಿಸಿಕೊಳ್ಳುತ್ತಾರೆ. ಗತಿಸಿ ಹೋದ ಹಿಂದಿನ ಕಾಲದಲ್ಲಿ ಈ ಪದ್ಧತಿಯು ಅಂದು ಇರುತ್ತಿತ್ತು ಎಂದು ಪ್ರೊ, ಟಿ. ಮುರುಗೇಶೀ ತಿಳಿಸಿದ್ದಾರೆ.

ಉಡುಪಿ: ಬನ್ನಂಜೆಯಲ್ಲಿ ಅಪರೂಪದ ಐತಿಹಾಸಿಕ ಕಲ್ಲಿನ ರಚನೆ ಪತ್ತೆ!

ಈ ಭಾಗದಲ್ಲಿ ಮತ್ತೆ, ಮತ್ತೆ, ವೀರಗಲ್ಲು. ಗರಡಿಕಲ್ಲು ಕಾಣಸಿಗುತ್ತಿರುವುದು. ಮತ್ತು ಅವುಗಳನ್ನು ಸೂಕ್ತ ರೀತಿಯಲ್ಲಿ ಅಲ್ಲಿಯೇ ಅಕ್ಕ ಪಕ್ಕದಲ್ಲಿ ಸಂರಕ್ಷಣೆ ಮಾಡುವುದು. ಸ್ಥಳೀಯರೆಲ್ಲರ, ಸಹಕಾರವು ಅಗತ್ಯ  ಎಂದು ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

click me!