Corona Active Cases: ದೇಶಕ್ಕೇ ಬೆಂಗ್ಳೂರು ನಂ.1..!

By Girish Goudar  |  First Published Mar 12, 2022, 4:38 AM IST

*  ದಿನದಿಂದ ದಿನಕ್ಕೆ ಕೋವಿಡ್‌ ಸೋಂಕಿತರ ಸಂಖ್ಯೆ ಕಡಿಮೆ 
*  ಕೋವಿಡ್‌ ಮತ್ತಷ್ಟು ಇಳಿಕೆ: 4194 ಕೇಸು, 255 ಸಾವು
*  80 ಸಾವಿರ ಜನರಿಗೆ ಕೋವಿಡ್‌ ಲಸಿಕೆ 


ಬೆಂಗಳೂರು(ಮಾ.12):  ದೇಶದ ಮಹಾನಗರಗಳಲ್ಲಿ ಬೆಂಗಳೂರಲ್ಲಿ(Bengaluru) ಮಾತ್ರ ಸಾವಿರಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಮುಂಚೂಣಿಯಲ್ಲಿದೆ. ದಿನದಿಂದ ದಿನಕ್ಕೆ ಕೋವಿಡ್‌ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದರೂ ನಗರದಲ್ಲಿ  ಇನ್ನೂ 2,228 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನವದೆಹಲಿಯಲ್ಲಿ 937, ಚೆನ್ನೈ(Chennai( 499, ಮುಂಬೈ(Mumbai) 405 ಮತ್ತು ಕೋಲ್ಕತ್ತಾದಲ್ಲಿ(Kolkata) 272 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ನಗರದಲ್ಲಿ ಶುಕ್ರವಾರ 122 ಮಂದಿಯಲ್ಲಿ ಕೋವಿಡ್‌-19(Covid-19) ದೃಢಪಟ್ಟಿದ್ದು, ಇಬ್ಬರು ಮೃತರಾಗಿದ್ದಾರೆ(Death). 164 ಮಂದಿ ಚೇತರಿಸಿಕೊಂಡಿದ್ದಾರೆ. 73 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಈವರೆಗೆ 17.80 ಲಕ್ಷ ಮಂದಿಗೆ ಕೋವಿಡ್‌ ಬಂದಿರುವುದು ಖಾತ್ರಿಯಾಗಿದ್ದು, 17.6 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 4 ಸಕ್ರಿಯ ಕಂಟೈನ್ಮೆಂಟ್‌ ವಲಯಗಳಿವೆ. ಬೊಮ್ಮನಹಳ್ಳಿ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ ಮತ್ತು ಯಲಹಂಕದಲ್ಲಿ ತಲಾ ಒಂದು ಕಂಟೈನ್ಮೆಂಟ್‌ ವಲಯ ಇದೆ. ಇನ್ನು ಶುಕ್ರವಾರ 19,615 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

Tap to resize

Latest Videos

undefined

Covid lockdown ಮತ್ತೆ ಕೊರೋನಾ ಸ್ಫೋಟ, ಚೀನಾದಲ್ಲಿ ಕಠಿಣ ಲಾಕ್‌ಡೌನ್ ಜಾರಿ, ಭಾರತಕ್ಕೂ ಆತಂಕ!

ನಿನ್ನೆ 181 ಕೋವಿಡ್‌ ಕೇಸು, 3 ಸಾವು

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 181 ಮಂದಿಯಲ್ಲಿ ಕೋವಿಡ್‌-19 ಪತ್ತೆಯಾಗಿದೆ. ಮೂವರು ಮೃತರಾಗಿದ್ದಾರೆ. 260 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣ ಸಂಖ್ಯೆ 2,764ಕ್ಕೆ ಇಳಿಕೆಯಾಗಿದೆ. 43,925 ಕೋವಿಡ್‌ ಪರೀಕ್ಷೆ(Covid Test) ನಡೆದಿದ್ದು ಶೇ. 0.41ರ ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ.

ಬೆಂಗಳೂರು ನಗರದಲ್ಲಿ 122 ಮತ್ತು ಮೈಸೂರು ಹಾಗೂ ಶಿವಮೊಗ್ಗದಲ್ಲಿ ತಲಾ 11 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ವಿಜಯಪುರ, ಉಡುಪಿ, ರಾಯಚೂರು, ಕೊಪ್ಪಳ, ಕೊಡಗು, ಹಾವೇರಿ, ದಾವಣಗೆರೆ, ಬೀದರ್‌ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಪ್ರಕರಣ ವರದಿಯಾಗಿದೆ.

ಬೆಂಗಳೂರು ನಗರದಲ್ಲಿ ಇಬ್ಬರು ಮತ್ತು ರಾಯಚೂರಿನಲ್ಲಿ(Raichur) ಒಬ್ಬರು ಸೋಂಕು ಉಲ್ಬಣಿಸಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ 39.43 ಲಕ್ಷ ಮಂದಿಗೆ ಕೋವಿಡ್‌ ಬಂದಿರುವುದು ಖಚಿತವಾಗಿದ್ದು ಈ ಪೈಕಿ 39 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,016 ಮಂದಿ ಮರಣವನ್ನಪ್ಪಿದ್ದಾರೆ.

80 ಸಾವಿರ ಜನರಿಗೆ ಕೋವಿಡ್‌ ಲಸಿಕೆ:

ರಾಜ್ಯದಲ್ಲಿ ಶುಕ್ರವಾರ 79,926 ಮಂದಿ ಕೋವಿಡ್‌ ಲಸಿಕೆ(Covid Vaccine) ಪಡೆದಿದ್ದಾರೆ. 4,243 ಮಂದಿ ಮೊದಲ ಡೋಸ್‌, 70,442 ಮಂದಿ ಎರಡನೇ ಡೋಸ್‌ ಮತ್ತು 5,241 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 10.18 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

Covid Crisis: ಕೋವಿಡ್‌ ನಿರ್ಬಂಧ ಸಡಿಲಕ್ಕೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಕೋವಿಡ್‌ ಮತ್ತಷ್ಟು ಇಳಿಕೆ: 4194 ಕೇಸು, 255 ಸಾವು

ನವದೆಹಲಿ: ದೇಶದಲ್ಲಿ(India) ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾಗುವ 24 ಗಂಟೆಗಳ ಅವಧಿಯಲ್ಲಿ ಕೇವಲ 4,194 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 255 ಸೋಂಕಿತರು ಸಾವಿಗೀಡಾಗಿದ್ದಾರೆ. 

ಸಕ್ರಿಯ ಕೇಸುಗಳ(Active Cases) ಸಂಖ್ಯೆಯೂ 42,219ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.52ಕ್ಕೆ ಇಳಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.55ರಷ್ಟಿದೆ. ದೇಶದಲ್ಲಿ ಕೋವಿಡ್‌ ಸೋಂಕಿತರ ಚೇತರಿಕೆಯ ದರವು ಶೇ. 98.70ಗೆ ಏರಿಕೆಯಾಗಿದೆ. ಈವರೆಗೆ ದೇಶದಲ್ಲಿ 179.72 ಕೋಟಿ ಡೋಸು ಲಸಿಕೆಯನ್ನು ವಿತರಿಸಲಾಗಿದೆ.
 

click me!