ಬೆಂಗಳೂರಿನ ಹೊರ ಹೊರವಲಯ ಹೊಸಕೋಟೆ ಕೆಆರ್ ಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿರುವ ದುರ್ಘಟನೆ ಶನಿವಾರ ನಡೆದಿದೆ.
ಬೆಂಗಳೂರು ಗ್ರಾಮಾಂತರ (ಫೆ.10): ಬೆಂಗಳೂರಿನ ಹೊರ ಹೊರವಲಯ ಹೊಸಕೋಟೆ ಕೆಆರ್ ಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿರುವ ದುರ್ಘಟನೆ ಶನಿವಾರ ನಡೆದಿದೆ.
ಹೊಸಕೋಟೆ ಕೆಆರ್ ಪುರಂ ರಾಷ್ಟ್ರೀಯ ಹೆದ್ದಾರಿಯ ಅವಲಹಳ್ಳಿ ಸಮೀಪ ಅವಲಹಳ್ಳಿ ಸಮೀಪದ ಎಲೆ ಮರಿಯಪ್ಪ ಶೆಟ್ಟಿ ಕೆರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರು ಮತ್ತು ಮೋಟಾರ್ ಬೈಕ್ ನಜ್ಜುಗುಜ್ಜಾಗಿವೆ. ಈ ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ. ಇನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂರ್ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ. ಹೊಸಕೋಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬೆಂಗಳೂರು ಅಪಾರ್ಟ್ಮೆಂಟ್ ಈಜುಕೊಳದಲ್ಲಿ ಬಾಲಕಿ ಸಾವು; 45 ದಿನದ ಬಳಿಕ ಸಿಕ್ಕ ಟ್ವಸ್ಟ್‌ನಿಂದ 7 ಮಂದಿ ಬಂಧನ!
ಹೊಸಕೋಟೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಮೃತ ದೇಹ ಬಳಿ ಹಾಗೂ ಅಪಘಾತ ಸ್ಥಳಕ್ಕೆ ಯಾರೊಬ್ಬರೂ ಹೋಗದಂತೆ ನಿರ್ಬಂಧಿಸಿದ್ದಾರೆ. ಇನ್ನು ಅಪಘಾತ ನೋಡಲು ವಾಹನ ನಿಲ್ಲಿಸುವವರ ಸಂಖಯೆ ಹೆಚ್ಚಾಗಿದ್ದು, ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸಪಡುತ್ತಿದ್ದಾರೆ.
ಕೆ.ಎಸ್.ಈಶ್ವರಪ್ಪ ನೀವು ಕೊಲ್ಲಲು ಸಿದ್ಧರಿದ್ದೀರಾ? ನಾನು ನಿಮ್ಮ ಮನೆಗೆ ಬರ್ತೇನೆ: ಸವಾಲೆಸೆದ ಸಂಸದ ಡಿ.ಕೆ. ಸುರೇಶ್!
ಮೊಬೈಲ್ ಹಿಡಿದುಕೊಂಡೇ ಬಿದ್ದ ಯುವಕ: ಇನ್ನು ಕಾರಿನಲ್ಲಿದ್ದ ಗಾಯಾಳುಗಳಿಗೆ ತೀವ್ರ ಪೆಟ್ಟಾಗಿದೆ. ಅಪಘಾತದ ನಂತರ ಸ್ಥಳೀಯರು ಸಹಾಯಕ್ಕಾಗಮಿಸಿ ಕಾರಿನಲ್ಲಿದ್ದ ಗಾಯಾಳುಗಳನ್ನು ರಕ್ಷಿಸಿ ಹೊರಗೆ ಕೂರಿಸಿದ್ದಾರೆ. ಆದರೆ, ಅದರಲ್ಲೊಬ್ಬ ಯುವಕ ತನ್ನ ಪ್ರಾಣ ಹೋಗುವಂತಹ ಪರಿಸ್ಥಿತಿಯಲ್ಲಿಯೂ ತನ್ನ ಮೊಬೈಲ್ ಅನ್ನು ಗಟ್ಟಿಯಾಗಿಯೇ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಇನ್ನು ಜನರು ಕೂಡ ನಿಮ್ ಮನೆಯವರಿಗೆ ಕರೆ ಮಾಡುತ್ತೇವೆ ಎಂದು ಕೇಳಿದರೂ ಕೊಡದೇ ಕೈಯಲ್ಲಿ ಹಿಡಿದುಕೊಂಡು ರಕ್ತಸ್ರಾವದ ಮಡುವಿನಲ್ಲಿ ಬಿದ್ದಿದ್ದಾನೆ.