ಬೆಂಗಳೂರು ಅಪಾರ್ಟ್ಮೆಂಟ್ ಈಜುಕೊಳದಲ್ಲಿ ಬಾಲಕಿ ಸಾವು; 45 ದಿನದ ಬಳಿಕ ಸಿಕ್ಕ ಟ್ವಸ್ಟ್‌ನಿಂದ 7 ಮಂದಿ ಬಂಧನ!

By Sathish Kumar KHFirst Published Feb 10, 2024, 4:27 PM IST
Highlights

ಬೆಂಗಳೂರಿನ ಹೊರವಲಯ ವರ್ತೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಬಾಲಕಿ ಈಜುಕೊಳದಲ್ಲಿ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಒಂಧೂವರೆ ತಿಂಗಳ ಬಳಿಕ ಟ್ವಿಸ್ಟ್ ಸಿಕ್ಕಿದ್ದು, 7 ಮಂದಿಯ ಬಂಧನವಾಗಿದೆ.

ಬೆಂಗಳೂರು (ಫೆ.10): ಕಳೆದ ಒಂದೂವರೆ ತಿಂಗಳ ಹಿಂದೆ (ಡಿ,28) ವರ್ತೂರಿನ ಅಪಾರ್ಟ್‌ಮೆಂಟ್‌ನ ಸ್ವಿಮ್ಮಿಂಗ್‌ಪೂಲ್‌ಗೆ ಬಿದ್ದು ಬಾಲಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ತಿಂಗಳ ಬಳಿಕ ರೋಚಕ ಟ್ವಿಸ್ಟ್‌ ಲಭ್ಯವಾಗಿದೆ. ಬಾಲಕಿ ಸಾವಿಗೆ ಕಾರಣವಾದ 7 ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹೌದು, ಡಿಸೆಂಬರ್ 28ನೇ ತಾರೀಖು ರಾತ್ರಿ ವೇಳೆ ಬಾಲಕಿಯೊಬ್ಬಳು ಸ್ವಿಮ್ಮಿಂಗ್‌ಪೋಲ್‌ಗೆ ಬಿದ್ದು ಸಾವನ್ನಪ್ಪಿದ್ದಳು. ಇನ್ನು ಬಾಲಕಿಗೆ ಈಜು ಬರುತ್ತಿದ್ದರೂ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿ ಸತ್ತಿತ್ತು ಹೇಗೆ ಎಂಬ ಅನುಮಾನ ಅವರ ತಂದೆಗೆ ಕಾಡುತ್ತಿತ್ತು. ಜೊತೆಗೆ, ಬಾಲಕಿ ರಾತ್ರಿ ಹೊತ್ತಿನಲ್ಲಿ ಈಜಲು ಹೋಗುವ ಅವಶ್ಯಕತೆಯೂ ಇರಲಿಲ್ಲ. ಆದರೂ, ತಮ್ಮ ಮಗಳು ಸ್ವಿಮ್ಮಿಂಗ್‌ಪೂಲ್‌ಗೆ ಬಿದ್ದು ಸಾವನ್ನಪ್ಪಿದ್ದಕ್ಕೆ ತೀವ್ರ ನೊಂದುಕೊಂಡಿದ್ದ ಅವರ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಿಗ್ ಬಾಸ್ ಫೈನಲಿಸ್ಟ್ ಸ್ಪರ್ಧಿಗೆ ಸನ್ಮಾನಿಸಿದ ಪಿಎಸ್‌ಐಗೆ ವರ್ಗಾವಣೆ ಶಿಕ್ಷೆ ಕೊಟ್ಟ ಪೊಲೀಸ್ ಇಲಾಖೆ

ವರ್ತೂರಿನ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ಆಟವಾಡುವಾಗ ಬಾಲಕಿಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಬಾಲಕಿಯನ್ನು ನಂತರ ಅಪಾರ್ಟ್‌ಮೆಂಟ್‌ನ ಈಜುಕೊಳಕ್ಕೆ ಬೀಸಾಡಿ ಆಕಸ್ಮಿಕ ಸಾವು ಎಂಬಂತೆ ಬಿಂಬಿಸಿದ್ದರು ಎಂಬ ಅನುಮಾನ ವ್ಯಕ್ತವಾಗಿತ್ತು. ಪೊಲೀಸ್‌ ಇನ್ಸ್‌ಪೆಕ್ಟರ ಹಾಗೂ ಬೆಸ್ಕಾಂ ಅಧಿಕಾರಿಗಳು ಕೂಡ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದರು.ಈ ವೇಳೆ ಮೃತ ಬಾಲಕಿ ತಂದೆ ಅಪಅಪಾರ್ಟ್ಮೆಂಟ್ ಒಳಗಿನ ಸ್ವಿಮ್ಮಿಂಗ್ ಫೂಲ್ ಬಳಿ ವಿದ್ಯುತ್ ತಂತಿ ತಗುಲಿ ಬಾಲಕಿ ಸಾವನ್ನಪ್ಪಿದ ಆರೋಪ ಮಾಡಿದ್ದರು. ನಂತರ, ಮೃತ ಬಾಲಕಿ ಮಾನ್ಯಳ ಶವಪರೀಕ್ಷೆ ವರದಿಗೆ ಶವವನ್ನು ಕಳುಹಿಸಲಾಇತ್ತು. ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಪಟ್ಟವರಿಗೆ ನೋಟಿಸ್ ಕೊಡಲಿಕ್ಕೆ ಪೊಲೀಸರ ಸಿದ್ದತೆ ಮಾಡಿಕೊಂಡಿದ್ದರು.

ಇನ್ನು ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ಬಾಲಕಿ ಸಾವಿನ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಬಾಲಕಿ ಮಾನ್ಯ ಮೃತಪಟ್ಟ ಒಂದುವರೆ ತಿಂಗಳಾದರೂ ಅಪಾರ್ಟ್‌ಮೆಂಟ್‌ನ ಎಲೆಕ್ಟ್ರಿಕಲ್ ರಿಪೋರ್ಟ್ ಹಾಗೂ ಎಫ್‌ಎಸ್‌ಎಲ್‌ ವರದಿ ಬಂದಿಲ್ಲ. ಅಂದರೆ ಅಪಾರ್ಟ್‌ಮೆಂಟ್‌ನಲ್ಲಿ ಬಾಲಕಿಯ ಸಾವು ಅಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಗಿದ್ದರೂ, ಅದನ್ನು ಆಕಸ್ಮಿಕ ಸಾವೆಂದು ಮುಚ್ಚಿಹಾಕಲು ಯತ್ನ ನಡೆದಿದೆ ಎಂಬ ಅನುಮಾನ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮೃತ ಬಾಲಕಿಯ ತಂದೆಯ ದೂರನ್ನು ಆಧರಿಸಿ ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ನರೇಂದ್ರ ಮೋದಿ ಅಧಿಕಾರದಲ್ಲಿ ಒಂದಾದ್ರೂ ಡ್ಯಾಮ್ ಕಟ್ಟಿದ್ರೆ ಹೇಳಲಿ, ಅವರ ಗುಲಾಮನಾಗ್ತೀನಿ: ಶಾಸಕ ನರೇಂದ್ರಸ್ವಾಮಿ

ಅಪಾರ್ಟ್‌ಮೆಂಟ್‌ನ ಎಲೆಕ್ಟ್ರಿಕಲ್ ವಿಂಗ್ ಟೀಂ , ಸ್ವಿಮ್ಮಿಂಗ್ ಫೂಲ್ ಮೈಂಟೇನೆನ್ಸ್ ಸಿಬ್ಬಂದಿ ಹಾಗೂ ಪವರ್ ಸಪ್ಲೈ ಮೆಂಟೇನೆನ್ಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಐಪಿಸಿ 304 ಅಡಿಯಲ್ಲಿ ಕೇಸ್ ದಾಖಲಿಸಿ ಪ್ರೆಸ್ಟೀಜ್ ಹೋಮ್ ಓನರ್ ಅಸೋಸಿಯೇಷನ್ ಪ್ರೆಸಿಡೆಂಟ್ ದಬಾಶಿಶ್ವಸಿನ್ಹಾ, ಜಾವೇದ್ ಸಫೀಕ್, ಸಂತೋಷ್ ಮಹರಾನ, ಬಿಕಾಸ್ ಕುಮಾರ್, ಭಕ್ತ ಚರಣ್ ಪ್ರಧಾನ್, ಸುರೇಶ್ ಹಾಗೂ ಗೋವಿಂದ್ ಮಂಡಲ್ ಬಂಧಿತ ಆರೋಪಿಗಳಾಗಿದ್ದಾರೆ.

click me!