ಬೆಂಗಳೂರಿಗರಿಗೆ ಸಂಕ್ರಾಂತಿ ಗಿಫ್ಟ್..  ನಮ್ಮ ಮೆಟ್ರೋ ಮತ್ತೆ ಎಲ್ಲೆಲ್ಲಿ ವಿಸ್ತರಣೆ?

By Suvarna NewsFirst Published Jan 14, 2021, 6:16 PM IST
Highlights

ನಮ್ಮ ಮೆಟ್ರೋ ಈಗ ಮತ್ತಷ್ಟು ವಿಸ್ತರಣೆ/ ಯಲಚೇನಹಳ್ಳಿಯಿಂದ-ರೇಷ್ಮೆ ಸಂಸ್ಥೆ/ ಆರು ಕಿಮೀ ಹೊಸ ಪ್ರಯಾಣ/ ಬೆಂಗಳೂರು ನಾಗರಿಕರಿಗೆ ಮತ್ತಷ್ಟು ಅನುಕೂಲ

ಬೆಂಗಳೂರು ( ಜ. 14)  ನಾನು ಮೂವರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸುವೆ. ಮೊದಲು ಮೋದಿ ಜೀ, ಬಿಎಸ್ವೈ, ಅಜಯ್ ಸೇಠ್ ಹಾಗೂ ತಂಡಕ್ಕೆ ಶುಭ ಹಾರೈಸುವೆ. 2011 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಮೆಟ್ರೋ ಕಾಮಗಾರಿಗೆ ಚಾಲನೆ ನೀಡಿದ್ದೆ. ಮೊದಲ ಹಂತದ ಕಾಮಗಾರಿ ಗೆ ನಾನೇ ಚಾಲನೆ ಕೊಟ್ಟಿದ್ದೆ. 30 ಲಕ್ಷ ಮಂದಿ ಮೆಟ್ರೋದಲ್ಲಿ ಸಂಚಾರ ಮಾಡ್ತಾರೆ. ದೆಹಲಿಯಲ್ಲಿ ಮಾಲಿನ್ಯ ಕಡಿಮೆ ಆಗಲು ಇದೇ ಕಾರಣ ಎಂದು  ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗೂ ಹಸಿರು ಮಾರ್ಗದ ಮೆಟ್ರೋ ರೈಲಿಗೆ ಸಿಎಂ ಬಿಎಸ್​ವೈ  ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿ, ಸಬ್ ಅರ್ಬನ್ ಮೆಟ್ರೋಗಾಗಿಯೂ ಬಿಎಸ್ವೈ ದುಡಿದಿದ್ದಾರೆ.  ಬಿಎಂಆರ್ ಸಿಎಲ್ ಉತ್ತಮ ರೀತಿ ಯಲ್ಲಿ ಕೆಲಸ ಮಾಡ್ತಿದೆ. ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆಗೆ ಸುಮಾರು 6 ಕಿ.ಮೀ ಸಂಚಾರ ಆರಂಭವಾಗುತ್ತಿದೆ.  ಹೆಬ್ಬಾಳಕ್ಕೂ ಕೂಡ ಮೆಟ್ರೋ ವಿಸ್ತರಣೆ ಆಗಲಿದೆ. ಇದಕ್ಕೆ ಡಿಪಿಆರ್ ಕೂಡ ಸಿದ್ಧವಾಗಿದೆ. ನಾಗಸಂದ್ರ - ಬೆಂಗಳೂರು ಅಂತಾರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್, ಬೈಯ್ಯಪ್ಪನಹಳ್ಳಿ - ವೈಟ್ ಫೀಲ್ಡ್ ಮಾರ್ಗ ..ಇನ್ನೂ ಅನೇಕ ಕಡೆ ಮೆಟ್ರೋ ಮಾರ್ಗ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

ಕೋಣನಕುಂಟೆ - ರೇಷ್ಮೆ ಸಂಸ್ಥೆ ವರೆಗೂ ಈಗಾಗಲೇ ಸಂಚಾರ ವಿಸ್ತರಿಸಲಾಗಿದೆ.  ಮೈಸೂರು ರಸ್ತೆ - ಕೆಂಗೇರಿ, ಆರ್ ವಿ ರಸ್ತೆ ಯಿಂದ ಬೊಮ್ಮಸಂದ್ರ, ಪುಟ್ಟೆನಹಳ್ಳಿ ಯಿಂದ ಅಂಜನಾಪುರದ ವರೆಗೂ ಮೆಟ್ರೋ ಸಂಚಾರ ವಿಸ್ತರಣೆಯಾಗಲಿದ್ದು ಅನುಕೂಲ ಸಿಗಲಿದೆ.

ನಿಲ್ದಾಣಕ್ಕೆ ಸಿಲ್ಕ್ ಹೆಸರಿಡಲು ಕಾರಣವೇನು?

ಇದೇ ವೇಳೆ ನಾಗಸಂದ್ರದ ಬಳಿ ಪಾದಚಾರಿಗಳ ಮೇಲ್ಸೇತುವೆ ಮತ್ತು ಮಹಾತ್ಮ ಗಾಂಧಿ ರಸ್ತೆಯ ಪಾದಚಾರಿಗಳ ಮೇಲ್ಸೇತುವೆ ಗೆ ಸಿಎಂ ರಿಂದ ಎಲೆಕ್ಟ್ರಿಕ್ ಚಾಲನೆ ನೀಡಿದರು.

ಸಂಕ್ರಾಂತಿ ಶುಭಾಶಯ ತಿಳಿಸಿ ಮಾತು ಆರಂಭಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಇನ್ನು ಒಂದು ವರ್ಷದಲ್ಲಿ ಬೆಂಗಳೂರಿನ ಚಿತ್ರಣ ಬದಲಾಗಲಿದೆ . ಬೆಂಗಳೂರನ್ನ ಮಾದರಿ ಬೆಂಗಳೂರಾಗಿ ಮಾಡಲು ನಾವು,  ಸಚಿವರು ನಿರ್ಧರಿಸಿದ್ದೆವೆ. ಮೆಟ್ರೋ  ಎರಡನೇ ಹಂತದ ಆರು ಕಿ ಲೋ ಮೀಟರ್ ಉದ್ಘಾಟನೆ ಖುಷಿ ತಂದಿದೆ. ಬೆಂಗಳೂರು ಶೇ. 38 ಐಟಿ ಬಿಟಿ ಹೊಂದಿದೆ. ಮೆಟ್ರೋ ಅತ್ಯುತ್ತಮ ಸೇವೆ ಒದಗಿಸುತ್ತಿದೆ 75 ನೇ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ 75 ಕಿಲೋ ಮೀಟರ್ ಮೆಟ್ರೊ ಮಾರ್ಗ ರೆಡಿಯಾಗಲಿದೆ ಎಂದು ತಿಳಿಸಿದರು.

 

click me!