ಸಚಿವನಾಗುವ ಸಂತಸದಲ್ಲಿ ಸ್ವತಃ ಅಡುಗೆ ತಯಾರಿಸಿದ ಅಂಗಾರ

Published : Jan 14, 2021, 02:52 PM ISTUpdated : Jan 14, 2021, 02:57 PM IST
ಸಚಿವನಾಗುವ ಸಂತಸದಲ್ಲಿ ಸ್ವತಃ ಅಡುಗೆ ತಯಾರಿಸಿದ ಅಂಗಾರ

ಸಾರಾಂಶ

ಬೆಂಗಳೂರಿನಲ್ಲಿ ಇದ್ದಾಗಲೂ ಅಂಗಾರ ಅವರು ಶಾಸಕರ ಭವನದಲ್ಲೇ ಉಳಿದುಕೊಂಡು ತನಗೆ ಅಡುಗೆ ಸ್ವತಃ ತಯಾರಿ ಮಾಡಿಕೊಳ್ಳುತ್ತಾರೆ| ಸರಳ, ಸಜ್ಜನಿಕೆ ಸ್ವಭಾವವೇ ಇವರಿಗೆ ಜನಪ್ರಿಯತೆ ತಂದುಕೊಟ್ಟಿದೆ.  

ಮಂಗಳೂರು(ಜ.14): ಸಚಿವನಾಗುವ ಸಂತಸದಲ್ಲಿ ಸುಳ್ಯ ಶಾಸಕ ಅಂಗಾರ ಅವರು ಬುಧವಾರ ಬೆಂಗಳೂರಿನಲ್ಲಿ ತನ್ನ ಬೆಂಬಲಿಗರಿಗೆ ತಾನೇ ಸ್ವತಃ ಅಡುಗೆ ಮಾಡಿ ಬಡಿಸಿದ್ದಾರೆ. ಅಂಗಾರ ಅವರು ಅಡುಗೆ ತಯಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲಿ ವೈರಲ್‌ ಆಗಿದೆ.

ಗುರುವಾರ ವಿಧಾನಸೌಧದಲ್ಲಿ ಎಸ್‌ಸಿ ಎಸ್‌ಟಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಅಂಗಾರ ಅವರು ಸಭೆ ನಡೆಸಲು ಮಂಗಳವಾರವೇ ಆಗಮಿಸಿದ್ದರು. ಅಂಗಾರ ಅವರು ಸಚಿವರಾಗುತ್ತಾರೆ ಎಂಬ ಸುದ್ದಿ ತಿಳಿದ ಅವರ ಬೆಂಬಲಿಗರು ಅಂದು ರಾತ್ರಿಯೇ ಬೆಂಗಳೂರಿಗೆ ಹೊರಟು ಬಂದಿದ್ದರು.

ಧರ್ಮಸ್ಥಳ ಕ್ಷೇತ್ರದಿಂದ ಶ್ರೀರಾಮ ಮಂದಿರಕ್ಕೆ 25 ಲಕ್ಷ ನಿಧಿ: ವೀರೇಂದ್ರ ಹೆಗ್ಗಡೆ

ಮರುದಿನ ಬುಧವಾರ ಬೆಳಗ್ಗೆ ಅಂಗಾರ ಸಚಿವರಾಗುವುದು ಖಚಿತವಾದ ಕೂಡಲೇ ಮತ್ತಷ್ಟುಬೆಂಬಲಿಗರು ಆಗಮಿಸಿದ್ದರು. ಇವರಿಗೆಲ್ಲ ಅಂಗಾರ ಅವರು ಬೆಂಗಳೂರಿನ ಶಾಸಕರ ಭವನದಲ್ಲಿ ಸ್ವತಃ ಅಡುಗೆ ತಯಾರಿಸಿ ಬಡಿಸಿದ್ದಾರೆ.
 

PREV
click me!

Recommended Stories

ವಿಜಯಪುರ-ಯಶವಂತಪುರ ರೈಲಿನ ಇಂಜಿನ್ ವೈಫಲ್ಯ; ಬಸವ ಎಕ್ಸ್‌ಪ್ರೆಸ್ ತಡೆದು ಕಲ್ಲು ತೂರಾಟ
ಆರ್‌ಸಿಬಿ ಫ್ಯಾನ್ಸ್‌ಗೆ ಬಿಗ್‌ ಅಪ್ಡೇಟ್‌; ಹೊಸತನ ಬಂದರೂ, ಹಳೆಯ ಗುರುತು ಬಿಟ್ಟುಕೊಡದ ಬಿರ್ಲಾ!