
ಬೆಂಗಳೂರು (ಜು.22): ಬೆಂಗಳೂರಿನಲ್ಲಿ ಕಾರ್ ಡ್ರೈವಿಂಗ್ ಕಲಿಯಲು ಹೋದ 18 ವರ್ಷದ ಯುವತಿಯನ್ನು ಕಾರಿನೊಳಗೆ ಕೂರಿಸಿಕೊಂಡು ಜನನಿಬಿಡ ಪ್ರದೇಶದಲ್ಲಿ ಪ್ಯಾಂಟ್ ಜಿಪ್ ತೆಗೆದು ಹಸ್ತಮೈಥುನ ಮಾಡಿಕೊಂಡಿದ್ದಾರೆ. ಈ ಘಟನೆಯ ಮಾಹಿತಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ತಲುಪುತ್ತಿದ್ದಂತೆ ಡ್ರೈವಿಂಗ್ ಸ್ಕೂಲ್ ಹಾಗೂ ತರಬೇತುದಾರನ ಡ್ರೈವಿಂಗ್ ಲೇಸೆನ್ಸ್ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಹೌದು, ಕಳೆದ 15 ದಿನಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾರ್ ಡ್ರೈವಿಂಗ್ ಕಲಿಯಲು ಬಂದ 18 ವರ್ಷದ ಯುವತಿಯ ಮುಂದೆ ಡ್ರೈವಿಂಗ್ ಕಲಿಸುವ ತರಬೇತುದಾರ ಬೆಳ್ಳಂಬೆಳಗ್ಗೆ 6 ಗಂಟೆಗೆ ಡ್ರೈವಿಂಗ್ ಕಲಿಸುವುದಾಗಿ ಮೇಲ್ಸೇತುವೆಯ ಜನನಿಬಿಡ ಪ್ರದೇಶಕ್ಕೆ ಕರೆದೊಯ್ದು, ಪ್ಯಾಂಟ್ ಜಿಪ್ ತೆಗೆದು ಹಸ್ತಮೈಥುನ ಮಾಡಿಕೊಂಡಿದ್ದಾನೆ. ಇದನ್ನು ನೋಡಿದ ಯುವತಿ ಬೆಚ್ಚಿಬಿದ್ದು ಸಹಾಯಕ್ಕೆ ಕೂಗಿಕೊಂಡಿದ್ದಾಳೆ. ಆದರೆ, ಜನನಿಬಿಡ ಪ್ರದೇಶವಾಗಿದ್ದರಿಂದ ಸೀದಾ ಕಾರನ್ನು ಚಲಾಯಿಸಿಕೊಂಡು ಮನೆಗೆ ಬಂದಿದ್ದಾಳೆ. ನಂತರ, ಡ್ರೈವಿಂಗ್ ಕಲಿಸಲು ಬಂದ ತರಬೇತುದಾರ ಮಾಡಿದ ಅಶ್ಲೀಲದ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಮನೆಯವರು ಯುವತಿಯನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಕಾರು ತರಬೇತಿ ವೇಳೆ ಯುವತಿ ಎದುರೇ ಹಸ್ತಮೈಥುನ ಮಾಡಿಕೊಂಡ ಕಾಮುಕ ತರಬೇತುದಾರ!
ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ತರಬೇತುದಾರನ ವಿರುದ್ದ ದೂರು ದಾಖಲು ಆಗಿದೆ. ಯುವತಿಯ ದೂರಿನ ಮೇರೆಗೆ ಬಸವೇಶ್ವರನಗರ ಡ್ರೈವಿಂಗ್ ಸ್ಕೂಲ್ ನ ತರಬೇತುದಾರ ಅಣ್ಣಪ್ಪ ವಿರುದ್ಧ ಎಫ್ಐಆರ್ ದಾಖಲು ಆಗಿದೆ. ತರಬೇತಿದಾರರ ಅಣ್ಣಪ್ಪನ ಅಸಭ್ಯ ವರ್ತನೆಯ ಕನ್ನಡ ಪ್ರಭ ಪತ್ರಿಕೆ ಸೇರಿ ಹಲವು ಮಾಧ್ಯಮಗಳಲ್ಲಿ ವರದಿ ಬಿತ್ತರಿಸಲಾಗಿತ್ತು. ಮಾಧ್ಯಮಗಳ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು, ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್ ಪರವಾನಗಿ ಹಾಗೂ ತರಬೇತುದಾರ ಅಣ್ಣಪ್ಪನ ಚಾಲನಾ ಪರವಾನಗಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ, ಡ್ರೈವಿಂಗ್ ಸ್ಕೂಲ್‌ಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ನಿರ್ದೇಶನ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ನಟ ದರ್ಶನ್ ಜೈಲಲ್ಲಿ ಪ್ರತಿದಿನ ಬಿರಿಯಾನಿ ತಿನ್ನೋಕಾಗಲ್ಲ, ಬೇಧಿ ಆಗಿದ್ರೆ ಸಪ್ಪೆ ಊಟ ಕೊಡಿ; ಎಸ್‌ಪಿಪಿ ಪ್ರಸನ್ನಕುಮಾರ
ಘಟನೆ ವಿವರ ಇಲ್ಲಿದೆ ನೋಡಿ
* ಕಾರು ಡ್ರೈವಿಂಗ್ ತರಬೇತಿ ವೇಳೆ ಯುವತಿ ಎದುರೇ ತರಬೇತುದಾರ ಹಸ್ತಮೈಥುನ ಮಾಡಿಕೊಂಡಿದ್ದಾನೆ
* ಜುಲೈ 7ರ ಬೆಳಿಗ್ಗೆ 6 ಗಂಟೆಗೆ ಘಟನೆ ನಡೆದಿದೆ.
* ಬಸವೇಶ್ವರನಗರ ನ್ಯಾಷನಲ್ ಶಾಲೆ ಮೆಲ್ಸೇತುವೆ ಮೇಲೆ ಕಾರು ಚಾಲನೆ ಮಾಡುವ ಅಸಭ್ಯ ವರ್ತನೆ ತೋರಿದ್ದಾನೆ.
* ಅನುಚಿತ ವರ್ತನೆಯಿಂದ ಯುವತಿಗೆ ಮುಜುಗರ ಉಂಟು ಮಾಡಿದ್ದಾರೆ.
* ಯುವತಿ ತರಬೇತುದಾರನ ವಿರುದ್ದ ದೂರು ದಾಖಲಿಸಿದ್ದಾಳೆ.
* ಮಾಧ್ಯಮಗಳ ವರದಿಗೆ ಎಚ್ಚೆತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಡ್ರೈವಿಂಗ್ ಸ್ಕೂಲ್ ಲೈಸೆನ್ಸ್ ರದ್ದು ಮಾಡಿದ್ದಾರೆ.
* ಜೊತೆಗೆ, ಮಾರುತಿ ಡ್ರೈವಿಂಗ್ ಸ್ಕೂಲ್ ಚಾಲನಾ ತರಬೇತಿ ನೀಡುತ್ತಿದ್ದ ಅಣ್ಣಪ್ಪನ ಡ್ರವಿಂಗ್ ಲೈಸೆನ್ಸ್ ಕೂಡ ರದ್ದುಗೊಳಿಸಿದ್ದಾರೆ.