ಬೆಂಗಳೂರಿನಲ್ಲಿ ಬೋರ್‌ವೆಲ್ ನೀರಿನ ಬಳಕೆಯಿಂದ ತಲೆ ಕೂದಲು ಉದುರುತ್ತಿದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳು ಹೆಚ್ಚುತ್ತಿದ್ದು, ಬೋರ್‌ವೆಲ್ ನೀರಿನಲ್ಲಿರುವ ಗಡಸುತನ ಕೂದಲು ಉದುರುವಿಕೆಗೆ ಕಾರಣ ಎಂಬ ವಾದವಿದೆ. ಕೆಲವರು ತಮಾಷೆಯಾಗಿ ಈ ವಿಚಾರವನ್ನು ಪ್ರಸ್ತುತಪಡಿಸಿದ್ದರೂ, ಬೆಂಗಳೂರಿನ ನೀರಿನ ಗುಣಮಟ್ಟದ ಬಗ್ಗೆ ಚಿಂತೆ ವ್ಯಕ್ತವಾಗುತ್ತಿದೆ.
ಇಂಥದ್ದೊಂದು ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿರುವ ಯುವಕರ ತಲೆ ಮೇಲೆ ಕೂದಲು ಕಾಣೆಯಾಗುತ್ತಿವೆ. ಹೆಚ್ಚಿನವರು ಇದಕ್ಕೆ ದೂರುವುದು ಬೆಂಗಳೂರಿನ ನೀರು. ಅದರಲ್ಲೂ ಬೋರ್‌ನ ಹಾರ್ಡ್‌ವಾಟರ್‌ನಿಂದ ತಲೆ ಕೂದಲು ಉದುರಿಹೋಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಕೇವಲ ಕಾವೇರಿ ನೀರಿನ ಸಂಪರ್ಕ ಮಾತ್ರ ಇರುವ ಕಡೆಗಳಲ್ಲಿ ಇಂಥ ಪರಿಸ್ಥಿತಿಯಿಲ್ಲ. ಬೋರ್‌ವೆಲ್ ವಾಟರ್ ಬಳಸುವ ಪ್ರತಿ ಮನೆಗಳಲ್ಲೂ ಇಂಥದ್ದೊಂದು ಸಮಸ್ಯೆ ಎದ್ದು ಕಾಣುತ್ತಿದೆ. ಈ ಕುರಿತಾಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕೂಡ ಬರಲು ಆರಂಭವಾಗಿದೆ. ಹರ್ಷ್ ಸಿಂಗ್ ಮೆಹ್ತಾ ಎನ್ನುವ ವ್ಯಕ್ತಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಅವರ ಈ ವಿಡಿಯೋವನ್ನು ಅಂದಾಜು 25 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಹೆಚ್ಚಿನವರು ಬೆಂಗಳೂರಿನ ಹಾರ್ಡ್ ವಾಟರ್‌ನಿಂದಲೇ ತಲೆಕೂದಲು ಉದುರಿಹೋಗುತ್ತಿವೆ ಎಂದು ಹೇಳಿದ್ದಾರೆ.
ಈ ಕಂಟೆಂಟ್‌ನಲ್ಲಿ ಇಬ್ಬರು ಸ್ನೇಹಿತರು ಮುಖಾಮುಖಿಯಾಗುತ್ತಾರೆ. ಕುಶಲೋಪರಿ ಕೇಳಿದ ಬಳಿಕ ಮೊದಲ ವ್ಯಕ್ತಿ, ಹೌದು ನೀನು ಬೆಂಗಳೂರಿನಿಂದ ಯಾವಾಗ ಬಂದೆ ಎಂದು ಕೇಳುತ್ತಾನೆ. ಇನ್ನೊಬ್ಬ ವ್ಯಕ್ತಿ, ನಾನು ಬೆಂಗಳೂರಿನಲ್ಲಿದ್ದೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ನಿನಗೆ ಹೇಗೆ ಗೊತ್ತಾಯಿತು ಎಂದು ಕೇಳುತ್ತಾನೆ. ಲಾಂಗ್ ಶಾಟ್‌ನಲ್ಲಿ ಆತನ ಬೋಳು ತಲೆಯನ್ನು ತೋರಿಸಲಾಗಿದೆ' ಈ ವಿಡಿಯೋವನ್ನು ತಮಾಷೆಗಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಹೆಚ್ಚಿನವರು ಕಾಮೆಂಟ್ ಮಾಡಿದ್ದು, ಹಾರ್ಡ್ ವಾಟರ್‌ನಿಂದ ಈ ಸಮಸ್ಯೆ ಎಂದಿದ್ದಾರೆ. ಓಲ್ಡ್ ಬೆಂಗಳೂರಿನಲ್ಲಿ ಈ ರೀತಿಯ ಸಮಸ್ಯೆ ಇಲ್ಲ, ಹೊಸದಾಗಿ ಬೆಳೆದ ಬೆಂಗಳೂರಿನ ಪ್ರದೇಶಗಳಲ್ಲಿ ಈ ಸಮಸ್ಯೆ ಇದೆ ಎಂದಿದ್ದಾರೆ. ಇನ್ನು ಕಾವೇರಿ ನೀರಿನ ಸಂಪರ್ಕ ಮಾತ್ರವೇ ಇರುವ ಮನೆಗಳಲ್ಲಿ ಈ ಸಮಸ್ಯೆ ಇಲ್ಲ. ಬೋರ್ ವಾಟರ್, ಬೋರ್ ವಾಟರ್ ಹಾಗೂ ಕಾವೇರಿ ನೀರು ಎರಡೂ ಸಂಪರ್ಕ ಇರುವ ಮನೆಗಳಲ್ಲಿ ಇಂಥ ಸಮಸ್ಯೆಗಳಿವೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಬೋರ್ ವಾಟರ್ ಹಾಗೂ ಕಾವೇರಿ ನೀರು ಒಂದೇ ಸಂಪ್‌ಗೆ ಬೀಳೋದರಿಂದ ಈ ಸಮಸ್ಯೆ ಆಗುತ್ತಿದೆಯಂತೆ. ಇದೇ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ಸಂಪರ್ಕ ಇರುವ ಮನೆಗಳ ಬಾಡಿಗೆಯೂ ಜಾಸ್ತಿ ಎಂದಿದ್ದಾರೆ.
undefined
ಬೆಂಗಳೂರಿಗಿದ್ದ ಸಿಲಿಕಾನ್ ಸಿಟಿ ಹೆಸರನ್ನು ಗಟ್ಟಿಗೊಳಿಸಿದ ರತನ್ ಟಾಟಾ!
ನಿಮಗೆ ಇಂಥ ಸಮಸ್ಯೆ ಆಗುತ್ತಿದ್ದರೆ, ಖಂಡಿತಾ ಬೆಂಗಳೂರಿಗೆ ಬರಬೇಡಿ. ನೀವು ಪ್ರಕೃತಿ ಮಾತ್ರವಲ್ಲ ಇಲ್ಲಿನ ಸಂಸ್ಕೃತಿಯನ್ನೂ ಹಾಳು ಮಾಡುತ್ತಿದ್ದೀರಿ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 'ನಾನು ಬೆಂಗಳೂರನ್ನು ತೊರೆಯಲು ಇದೂ ಕೂಡ ಒಂದು ಕಾರಣ' ಎಂದು ಪೋಸ್ಟ್ ಮಾಡಿದ್ದಾರೆ.
ರಸ್ತೆ ಕೆಳ ಸೇತುವೆ ಕಾಮಗಾರಿ, ಈ ಭಾಗದ ಹಲವು ರೈಲುಗಳು ರದ್ದು, ಭಾಗಶಃ ರದ್ದು!
ಇನ್ನೂ ಕೆಲವರು ಬೋರ್ ವಾಟರ್ ಬಳಕೆ ಮಾಡುತ್ತಿರುವ ನಮ್ಮ ಕೂದಲು ಬೇಗನೆ ಬಿಳಿಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. 'ದಯವಿಟ್ಟು ಬರಬೇಡಿ. ಹಣ ಸಂಪಾದಿಸಲು ಇಲ್ಲಿಗೆ ಬಂದು ನಮ್ಮ ಸ್ಥಳವನ್ನು ಯಾರೂ ಗೇಲಿ ಮಾಡುವುದು ನಮಗೆ ಇಷ್ಟವಿಲ್ಲ. ಬರಬೇಡಿ. ನಿಮ್ಮಿಂದಲೇ ಗಡಸು ನೀರಿನ ಸಮಸ್ಯೆ ಶುರುವಾಗಿದೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.