ಹೌದು, ರಂಗೋಲಿ ಕೆಡಿಸಿದ್ದು ನಾನೇ.. ಉತ್ತರ ಭಾರತೀಯರಿಗೆ ಬೆಂಗಳೂರು ಸೇಫ್‌ ಇಲ್ವಾ? ಎಂದು ಪ್ರಶ್ನಿಸಿದ ನೇಹಾ..!

By Sathish Kumar KH  |  First Published Apr 1, 2024, 12:46 PM IST

ಹೌದು, ಬೊಮ್ಮನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಮುಂದಿನ ರಂಗೋಲಿ ಕೆಡಿಸಿದ್ದು ನಾನೇ.. ಆದ್ರೆ ಇದಕ್ಕೆ ಕಾರಣವೂ ಇದೆ. ಕನ್ನಡಿಗರ ಮನೆಯವರ ಕಿರುಕುಳ ತಾಳಲಾಗುತ್ತಿಲ್ಲ. ಉತ್ತರ ಭಾರತೀಯರಿಗೆ ಬೆಂಗಳೂರು ಸೇಫ್ ಇಲ್ವಾ ಎಂದು ಯುವತಿ ನೇಹಾ ಪ್ರಶ್ನೆ ಮಾಡಿದ್ದಾಳೆ..


ಬೆಂಗಳೂರು (ಏ.01): ಬೆಂಗಳೂರಿನ ಬೊಮ್ಮನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಮನೆಯ ಮುಂದಿನ ರಂಗೋಲಿ ಕೆಡಿಸಿದ್ದು ನಾನೇ... ಆದ್ರೆ, ಅದಕ್ಕೆ ಕಾರಣವಾದರೂ ಏನು ಅಂತಾ ಕೇಳಬೇಕಲ್ಲವಾ..? ಉತ್ತರ ಭಾರತೀಯರಿಗೆ ಬೆಂಗಳೂರಲ್ಲಿ ಸುರಕ್ಷಿತವಾಗಿ, ನೆಮ್ಮದಿಯಾಗಿ ಬದುಕುವ ಹಕ್ಕಿಲ್ಲವೇ..? ಎಂದು ಯುವತಿ ನೇಹಾ ಅಳಲು ತೋಡಿಕೊಂಡಿದ್ದಾಳೆ.

ಬೊಮ್ಮನಹಳ್ಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಅಕ್ಕ-ಪಕ್ಕದ ಮನೆಯವರ ಜಗಳ ಬೀದಿ ರಂಪವಾಗಿದ್ದೂ ಅಲ್ಲದೇ, ಪೊಲೀಸ್‌ ಠಾಣೆ ಮೆಟ್ಟಿಲೇರಿ ಈಗ ಜಗಜ್ಜಾಹೀರಾಗಿದೆ. ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಕನ್ನಡಿಗರ ಕುಟುಂಬಕ್ಕೆ ಹಿಂದೂ ಸಂಪ್ರದಾಯದಂತೆ ಮನೆ ಮುಂದೆ ರಂಗೋಲಿ ಹಾಕುವುದು, ತುಳಸಿ ಗಿಡ ಇಡುವುದು, ಬಾಗಿಲಿಗೆ ಬಳ್ಳಿ ಹಬ್ಬಿಸುವುದು, ಮನೆಯ ಮುಂದೆ ಚಪ್ಪಲಿ ಸ್ಟ್ಯಾಂಡ್ ಮತ್ತು ಶೂ ರ್ಯಾಕ್ ಇಡುವುದು ಅಭ್ಯಾಸವಿದೆ. ಇದು ಅವರ ಸಂಪ್ರದಾಯವಂತೆ. ಆದರೆ, ಇವರ ಮನೆಯ ಪಕ್ಕದಲ್ಲಿದ್ದ ಫ್ಲ್ಯಾಟ್‌ ಅನ್ನು  ಉತ್ತರ ಭಾರತದಿಂದ ಬಂದ ನಾವು ಖರೀದಿಸಿ ವಾಸವಾಗಿದ್ದೇವೆ. ಆದರೆ, ಕನ್ನಡಿಗರ ಮನೆಯಿಂದ ಸಂಪ್ರದಾಯದಿಂದ ನಮಗೆ ಇನ್ನಿಲ್ಲದ ಕಿರಿಕಿರಿ ಆಗಿದೆ ಎಂದು ಯುವತಿ ನೇಹಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ.

Tap to resize

Latest Videos

undefined

ಬೆಂಗಳೂರು: ಎದುರುಮನೆ ಹುಡುಗಿ ನೋಡೋಕೆ ಸುರಸುಂದರಾಂಗಿ, ಮನೆ ಮುಂದಿನ ರಂಗೋಲಿ ಕಂಡ್ರೆ ಉರಿದುಬೀಳ್ತಾಳೆ!

ನೇಹಾ ಹೇಳಿದ್ದೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಹೌದು, ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪಕ್ಕದ ಮನೆಯವರು ಹಾಕಿದ ರಂಗೋಲಿಯನ್ನು ಹಾಳು ಮಾಡಿದ್ದು ನಾನೇ ಎಂದು ಹೇಳಿಕೊಂಡಿದ್ದಾಳೆ. ಇನ್ನು ನಾವು 2019ರಲ್ಲಿ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದೇವೆ. ಆಗ ತಾನೇ ಕೋವಿಡ್‌ ಆರಂಭವಾಗಿದ್ದು, ಅಂದಿನಿಂದಲೇ ಈ ಕನ್ನಡಿಗರ ಕುಟುಂಬದವರು ಕಿರುಕುಳ ನೀಡಲು ಶುರು ಮಾಡಿದ್ದರು. ಮನೆ ಮುಂದೆ ಕೇವಲ 5 ಮೀಟರ್ ಪ್ಯಾಸೇಜ್ ಇದೆ. ಅದರಲ್ಲಿ ಈ ಕುಟುಂಬದವರೇ 3 ಮೀಟರ್ ಪ್ಯಾಸೇಜ್ ಬ್ಲಾಕ್ ಮಾಡಿದ್ದಾರೆ. ಎಡಭಾಗದಲ್ಲಿ ಹೂವಿನ ಕುಂಡ, ಬಲಭಾಗದಲ್ಲಿ ಶೂ ರ್ಯಾಕ್ ಇಟ್ಟಿದ್ದಾರೆ. ಜೊತೆಗೆ, ನಾವು ಮನೆಯಿಂದ ಹೊರಗೆ ಬಂದು ಕಾಲಿಡಲು ಹಾಗೂ ಓಡಾಡಲೂ ಜಾಗವಿಲ್ಲದಂತೆ 1.5 ಅಡಿ ರಂಗೋಲಿ ಹಾಕುತ್ತಿದ್ದಾರೆ.

ಇನ್ನು ನಾವು ಮನೆಯ ಬಾಗಿಲ ಬಳಿ ಹಾಕಿಸಿದ್ದ ಸೇಫ್ಟಿ ಗ್ರೀಲ್ ಅನ್ನು ಕೂಡ ಹಾಕಿಸಲು ಬಿಡದೇ ಅಸೋಸಿಯೇಷನ್‌ಗೆ ಹೇಳಿ ಓಪನ್ ಮಾಡಿಸಿದ್ದಾರೆ. ನಾವು ಓಡಾಡುವ ಪ್ಯಾಸೇಜ್ ಸಂಪೂರ್ಣ ಬ್ಲಾಕ್ ಮಾಡಿದ್ದರು. ನಮಗೆ ಬರುವ ಡೆಲಿವರಿಗಳನ್ನು ಕೂಡ ರಿಸೀವ್ ಮಾಡಿಕೊಳ್ಳೋಕೆ ಆಗ್ತಿರಲಿಲ್ಲ. ನಮ್ಮ ಊರಿನಿಂದ ಅಪ್ಪ, ಅಮ್ಮ, ಯಾರೇ ಸಂಬಂಧಿಗಳು ಬಂದರೂ ಅವರು ಓಡಾಡಲೂ ಕೂಡ ಜಾಗ ಇಲ್ಲದಂತೆ ಮಾಡುತ್ತಿದ್ದರು. ಜೊತೆಗೆ, ನಮ್ಮ ಮನೆಯಲ್ಲಿ ಎರಡು ಸಾಕು ಪ್ರಾಣಿಗಳಿವೆ. ಅವುಗಳನ್ನ ವಾಕಿಂಗ್ ಕರೆದುಕೊಂಡು ಹೋಗಲು ಬಿಡ್ತಾ ಇಲ್ಲ‌ ಎಂದು ಅಳಲು ತೋಡಿಕೊಂಡಿದ್ದಾರೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು ಟು ತುಮಕೂರು ಮೆಟ್ರೋ ಕಾರ್ಯ ಚುರುಕು!

ಇನ್ನು ಪಕ್ಕದ ಮನೆಯ ಮಂಜುನಾಥ್ ಅವರು, ನಮ್ಮ ಮನೆಯವರು ಓಡಾಡುವಾಗ ಸ್ವಲ್ಪ ರಂಗೋಲಿ ಹಾಳಾದರೂ ಪದೇ ಪದೇ ನಮ್ಮನೆಯ ಕಾಲಿಂಗ್ ಬೆಲ್‌ ಮಾಡಿ ಹೊರಗಡೆ ಕರೆಯಿಸಿ ಅವಾಚ್ಚ ಶಬ್ದಗಳಿಂದ ನಿಂದಿಸುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದರೆ ಆಗಾಗ ದಮ್ಕಿ ಹಾಕುತ್ತಿದ್ದರು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಮನೆಯ ಬಾಗಿಲಿಗೆ ಪಾಟ್‌ನಿಂದ ಹೊಡೆದು ಕಿರುಕುಳ ಕೊಡುತ್ತಿದ್ದರು. ದಬ್ಬಾಳಿಕೆಯನ್ನು ಪ್ರಶ್ನೆ ಮಾಡಿದರೆ ನಾನು ರಾಜಕೀಯ ಪಕ್ಷದವನು ಅಂತಾ ಬೆದರಿಸುತ್ತಿದ್ದರು. ಯಾಕೆ, ಉತ್ತರ ಭಾರತೀಯರಿಗೆ ಕರ್ನಾಟಕ ಮತ್ತು ಬೆಂಗಳೂರು ಸೇಫ್ ಇಲ್ವಾ ಅಂತಾ ಯುವತಿ ನೇಹಾ ಪ್ರಶ್ನೆ ಮಾಡಿದ್ದಾಳೆ. 

click me!