ಬೆಂಗಳೂರು ತಡರಾತ್ರಿ ಹೋಟೆಲ್ ಮುಚ್ಚಿಸಲು ಬಂದ ಪಿಎಸ್‌ಐ ಮೇಲೆ 50,000 ರೂ. ಲಂಚದ ಕೇಸ್ ಹಾಕ್ತೀನೆಂದ ಮಾಲೀಕ

By Sathish Kumar KH  |  First Published Dec 3, 2023, 7:06 PM IST

ತಡರಾತ್ರಿಯಾಗಿದೆ ಹೋಟೆಲ್ ಮುಚ್ಚಿ ಎಂದು ಹೇಳಿದ ಪಿಎಸ್‌ಐ ಮೇಲೆ 50 ಸಾವಿರ ರೂ. ಲಂಚ ಕೇಳಿದ್ದಾಗು ದೂರು ಕೊಡ್ತೀನೆಂದು ಬೆದರಿಕೆ ಹಾಕಿದ ಬೆಂಗಳೂರು ಹೋಟೆಲ್ ಮಾಲೀಕನ ಸ್ಥಿತಿ ಈಗ ಏನಾಗಿದೆ ಗೊತ್ತಾ..?


ಬೆಂಗಳೂರು (ಡಿ.03): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ವೇಳೆ ಹೋಟೆಲ್ ಸೇವೆಗೆ ಅವಕಾಶವಿಲ್ಲ. ನಿಮ್ಮ ಹೋಟೆಲ್ ಮುಚ್ಚಿ ಎಂದು ಹೇಳಿದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಪಿಎಸ್‌ಐ) ಮೇಲೆಯೇ ಹೋಟೆಲ್ ಮಾಲೀಕ 50 ಸಾವಿರ ರೂ. ಲಂಚ ಕೇಳಿದ್ದಾಗಿ ದೂರು ಕೊಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಕೋಪಗೊಂಡ ಪಿಎಸ್‌ಐ ದೂರು ದಾಖಲಿಸಿಕೊಂಡು ಹೋಟೆಲ್ ಮಾಲೀಕನನ್ನು ಜೈಲಿಗಟ್ಟಿದ್ದಾರೆ.

ಬೆಂಗಳೂರಿನಲ್ಲಿ ರಾತ್ರಿ ಡ್ಯೂಟಿ ಮಾಡುವ ವೇಳೆ ಮಧ್ಯರಾತ್ರಿಯಾಗಿದ್ದರೂ ಹೋಟೆಲ್ ತೆರೆದು ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದ ಅಶ್ವ ಹೋಟೆಲ್ ಮಾಲೀಕರಿಗೆ ಹೋಟೆಲ್ ಮುಚ್ಚುವಂತೆ ಅನ್ನಪೂರ್ಣೇಶ್ವರಿ ನಗರದ ಪಿಎಸ್‌ಐ ಪ್ರತಿಮಾ ಅವರೊಂದಿಗೆ ಹೋಟೆಲ್ ಮಾಲೀಕ ಅನುಚಿತವಾಗಿ ನಡೆದುಕೊಂಡಿದ್ದಾರೆ. ಮಧ್ಯರಾತ್ರಿ 1.30 ಸಮಯ ಆಗಿದೆ, ಈಗ ಹೋಟೆಲ್ ನಡೆಸುವಂತಿಲ್ಲ ಮುಚ್ಚಬೇಕು ಎಂದು ಸೂಚನೆ ನೀಡಿದ್ದಕ್ಕೆ, ನಾನು ಹೋಟೆಲ್ ಮುಚ್ಚುವುದಿಲ್ಲ. ಒಂದು ವೇಳೆ ದಬ್ಬಾಳಿಕೆ ಮಾಡಿ ಹೋಟೆಲ್ ಮುಚ್ಚಿಸಲು ಮುಂದಾದರೆ ನಿಮ್ಮ ವಿರುದ್ಧವೇ 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗೆ ಬೆದರಿಕೆ ಹಾಕಿದ ಅಶ್ವ ಹೋಟೇಲ್ ಮಾಲೀಕ ಸಂಜೀವ್ ಗೌಡ ಅವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

Tap to resize

Latest Videos

ಪಿಎಸ್‌ಐ ಪರೀಕ್ಷೆ ಮುಂದೂಡಿಕೆಗೆ ರಕ್ತದಲ್ಲಿ ಪತ್ರ ಬರೆದ ಅಭ್ಯರ್ಥಿಗಳು: ಮಸ್ಕಿ ಶಾಸಕರಿಂದಲೂ ಸಿಎಂಗೆ ಮನವಿ

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ. ತಡರಾತ್ರಿವರೆಗೂ ಹೊಟೇಲ್ ತೆಗೆದಿದ್ದ ಹಿನ್ನಲೆಯಲ್ಲಿ ಪಿಎಸ್‌ಐ ಪ್ರತಿಮಾ ಪ್ರಶ್ನಿಸಿದ್ದಾರೆ. ಈ ವೇಳೆ ಹೊಟೇಲ್ ಮಾಲೀಕ ಸಂಜೀವ್ ಗೌಡ  ಅನುಚಿತ ವರ್ತನೆ ತೋರಿದ್ದಾನೆ. ಜೊತೆಗೆ, ನೀವು 50,000 ರೂ. ಲಂಚ ತೆಗೆದುಕೊಂಡಿದ್ದೀರೆಂದು ಹೇಳಿ ವಿಡಿಯೋ ಮಾಡಿ ಹರಿಬಿಡೋದಾಗಿ ಬೆದರಿಕೆ ಹಾಕಿದ್ದನು. ಹೊಟೇಲ್ ಅಶ್ವ ವೆಜ್ ಆ್ಯಂಡ್ ನಾನ್ ವೆಜ್ ಹೊಟೇಲ್ ಮಾಲೀಕ ದರ್ಪದಿಂದಲೇ ನಡೆದುಕೊಂಡು, ಬೆಂಗಳೂರಿನಲ್ಲಿ 24 ಗಂಟೆ ಹೊಟೇಲ್ ನಡೆಸಲು ಅನುಮತಿ ಇದೆ ಎಂದು ಉಡಾಫೆಯಾಗಿ ವರ್ತಿಸಿದ್ದಾನೆ.

ಬೆಳಗಾವಿ ಸುವರ್ಣಸೌಧದಲ್ಲಿ ಸಾವರ್ಕರ್ ಆಯ್ತು, ಈಗ ನೆಹರು ಫೋಟೋ ಅಳವಡಿಕೆ: ಯುಟಿ ಖಾದರ್ ಮಾಹಿತಿ

ಇನ್ನು 24 ಗಂಟೆ ಹೋಟೆಲ್ ನಡೆಸಲು ಇರುವ ಅನುಮತಿ ಪತ್ರ ತೋರೊಸುವಂತೆ ಹೇಳಿದಾಗ ಮತ್ತಷ್ಟು ದರ್ಪ ತೋರಿದ್ದಾನೆ. ಮುಮದುವರೆದು ನಿಮಗೆ ಅನುಮತಿ ಪತ್ರ ಬೇಕಾದಲ್ಲಿ ಮಾಹಿತಿ ಹಕ್ಕು ಅಧಿನಿಯಮ (ಆರ್‌ಟಿಐ) ಮೂಲಕ ಅರ್ಜಿ ಹಾಕಿಕೊಂಡು ಮಾಹಿತಿ ಪಡೆದುಕೊಳ್ಳುವಂತೆ ಉಡಾಫೆ ಉತ್ತರವನ್ನು ನೀಡಿದ್ದಾನೆ.
ಇದರಿಂದ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಲು ಅಡ್ಡಿಪಡಿಸುತ್ತಾರೆಂಬ ಆರೋಪದಡಿ ಪಿಎಸ್‌ಐ ಪ್ರತಿಮಾ ಅವರು ಹೋಟೆಲ್ ಮಾಲೀಕ ಸಂಜಯ್‌ಗೌಡ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಹೋಟೆಲ್ ಮಾಲೀಕ ಸಂಜೀವ್ ಗೌಡ ಸೇರಿ ಮೂವರನ್ನ ಪೊಲೀಸರಿ ಬಂಧಿಸಿ ಜೈಲಿಗಟ್ಟಿದ್ದಾರೆ. ಹೋಟೇಲ್ ಮಾಲೀಕ ಸಂಜೀವ್ ಗೌಡ, ಕ್ಯಾಶಿಯರ್ ಸಂದೀಪ್ ಹಾಗೂ ಹೇಮಂತ ಎಂಬುವವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧನ ಮಾಡಿದ್ದಾರೆ. 

click me!