11 ಲಕ್ಷ ರೂ. ಹಣ ಕೊಟ್ಟು ಲೀಸ್‌ಗಿದ್ದ ವೃದ್ಧ ದಂಪತಿಗೆ ಹಣ ವಾಪಸ್ ಕೊಡದೇ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಿರುಕುಳ ನೀಡುತ್ತಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.
ಬೆಂಗಳೂರು (ಜ.10): ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಒಂದರಲ್ಲಿ ಲೀಸ್‌ಗೆ ಇದ್ದ ವೃದ್ಧ ದಂಪತಿಯನ್ನು ಮನೆಯಿಂದ ಖಾಲಿ ಮಾಡಿಸಲು ಮನೆಯ ಕುಡಿಯುವ ನೀರಿನ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮನೆ ಮಾಲೀಕನೇ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ಕಂಡುಬಂದಿದೆ.
ಹೌದು, ಬೆಂಗಳೂರಿನ ಹೊರ ವಲಯ ನೆಲಮಂಗಲದಲೊಂದು ಪೈಶಾಚಿಕ ಕೃತ್ಯ ನಡೆದಿದೆ. ಮನೆ ಖಾಲಿ ಮಾಡಿಸಲು ಕುಡಿಯುವ ನೀರು, ಹಾಗೂ ವಿದ್ಯುತ್ ಸಂಪರ್ಕ ಕಡಿತ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಮನೆಯ ಮಾಲೀಕರು ವೃದ್ಧ ದಂಪತಿಗಳಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಸರ್ಕಾರದಿಂದ ಉಚಿತ ವಿದ್ಯುತ್ ನಿಯಮ ಇದ್ರು ಮನೆಯ ಮೀಟರ್ ಬಳಿ ಪವರ್ ಕಟ್ ಮಾಡಿ ಪೈಶಾಚಿಕವಾಗಿ ವರ್ತಿಸುತ್ತಿದ್ದಾರೆ. ಮನೆಗೆ ಕುಡಿಯುವ ನೀರಿಲ್ಲ, ಅಡುಗೆ ಮಾಡಲು ನೀರಿಲ್ಲ, ಶೌಚಾಲಯಕ್ಕೂ ಹೊರಗಡೆಯಿಂದ ನೀರು ತಂದು ಜೀವನ ಮಾಡಬೇಕಾದ ಪರಿಸ್ಥಿತಿ ಬಂದಿದೆ.
undefined
ಬೆಂಗಳೂರಿನಲ್ಲಿ ನಡೆಯುತ್ತಿದೆ ವಿದೇಶಿ ಹುಡುಗಿಯರ ವೇಶ್ಯಾವಾಟಿಕೆ ದಂಧೆ!
ಇನ್ನು 4 ದಿನದಿಂದ ಕತ್ತಲಲ್ಲಿಯೇ ವೃದ್ಧ ದಂಪತಿ ಜೀವನ ಮಾಡುತ್ತಿದ್ದಾರೆ. ಈ ಘಟನೆ ನೆಲಮಂಗಲ ನಗರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಈ ಆಧುನಿಕ ಯುಗದಲ್ಲಿ ಪೈಶಾಚಿಕ ಕೃತ್ಯ ನಡೆದರೂ, ಪೊಲೀಸ್ ಮತ್ತು ಬೆಸ್ಕಾಂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಮಾನವೀಯತೆಗೂ ವೃದ್ಧ ದಂಪತಿಯ ಮನವಿಯನ್ನು ಆಲಿಸುತ್ತಿಲ್ಲ. ಅವರಿಗೆ ನ್ಯಾಯ ಕೊಡಿಸುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ. ಇದರಿಂದ ವೃದ್ಧ ದಂಪತಿ ಲಕ್ಷಾಂಯತರ ರೂ. ಹಣವನ್ನು ಕೊಟ್ಟರೂ ಮೂಲ ಸೌಕರ್ಯವಿಲ್ಲದ ಜೀವನ ಮಾಡಬೇಕಾಗಿದೆ.
ವೃದ್ಧ ದಂಪತಿಗೆ 11 ಲಕ್ಷ ರೂ. ಪಂಗನಾಮ ಹಾಕಲು ಸ್ಕೆಚ್: ಇನ್ನು ವೃದ್ಧ ದಂಪತಿ ಲಿಂಗಪ್ಪ ಹಾಗೂ ವಸಂತ ಅವರು ನೆಲಮಂಗಲದ ಅಪಾರ್ಟ್‌ಮೆಂಟ್ ಒಂದರಲ್ಲಿ ಫ್ಲ್ಯಾಟ್ ಅನ್ನು 11 ಲಕ್ಷ ರೂ. ಹಣವನ್ನು ಕೊಟ್ಟು ಲೀಸ್‌ಗೆ ಪಡೆದಿದ್ದರು. ಆದರೆ, ವಂಚಕ ಮನೆಯ ಮಾಲೀಕ ಮಾಲೀಕ ವಿಶ್ವನಾಥ್ ವೃದ್ಧ ದಂಪತಿಗೆ ಗೊತ್ತಿಲ್ಲದೇ ತನ್ನ ಪ್ಲ್ಯಾಟ್ ಮಾರಾಟ ಮಾಡಿ ನಾಪತ್ತೆಯಾಗಿದ್ದಾನೆ. ಆದರೆ, ಪೂರ್ವಾಪರ ವಿಚಾರ ಮಾಡದೇ ಮನೆಯನ್ನು ಖರೀದಿ ಮಾಡಿರುವ ಮಾಲೀಕ ವಿಜಯ್ ರಾಯ್ ರಿಂದ ಅವರು ವೃದ್ಧ ದಂಪತಿ ಲೀಸ್‌ಗೆ ಕೊಟ್ಟಿರುವ ಹಣವನ್ನು ಕೊಡದೆ ಮನೆ ಖಾಲಿ ಮಾಡಿ ಎಂದಿದ್ದಾರೆ. ಈಗ ವಿದ್ಯುತ್, ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿ ಕಿರುಕುಳ ನೀಡಲಾರಂಭಿಸಿದ್ದಾರೆ.
ಗಂಡ ಹೆಂಡತಿ ಜಗಳಕ್ಕೆ ಹೆತ್ತ ಮಗುವನ್ನೇ ಕೊಂದ ತಾಯಿ? ಪತಿಗೆ ಕಂದಮ್ಮನ ಕೊಡಲು ಇಷ್ಟವಿಲ್ಲದೆ ಕೊಲೆ!
ಸುಮಾರು 40 ಮನೆ ಇರುವ ಅಪಾರ್ಟ್ಮೆಂಟ್ ನಲ್ಲಿ ಜನರು ಮಾನವೀಯತೆ ಮರೆತಿದ್ದಾರೆ. ಕಳೆದ 10 ದಿನಗಳ ಹಿಂದೆ ಮನೆಯ ನೀರು ಕಡಿತಗೊಳಿಸಲಾಗಿದೆ. ಈಗ ಕಳೆದ 4 ದಿನದ ಹಿಂದೆ ವಿದ್ಯತ್ ಸಂಪರ್ಕವನ್ನೂ ಕಡಿಮೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ನೆಲಮಂಗಲ ಟೌನ್ ಪೊಲೀಸರಿಗೆ, ಬೆಸ್ಕಾಂಗೆ ದೂರು ಕೊಟ್ರು ಯಾವುದೇ ಪ್ರಯೋಜನ ಇಲ್ಲ. ಆಧುನಿಕ ಕಾಲದಲ್ಲಿ ಸುಸಜ್ಜಿತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರೂ ಅವರನ್ನು ವಂಚನೆ ಮಾಡಿ ಮನೆಯಿಂದ ಹೊರದೂಡಲು ಇನ್ನಿಲ್ಲದ ಕಿರುಕುಳ ನೀಡಲಾಗುತ್ತಿದೆ. ಬಲಿಷ್ಠರನ್ನು ಎದುರು ಹಾಕಿಕೊಂಡು ಅವರಿಂದ ಹಣ ಪಡೆಯಲಾಗದೇ ವೃದ್ಧ ದಂಪತಿ ದಿನನಿತ್ಯ ಮೂಲ ಸೌಕರ್ಯವಿಲ್ಲದ ಮನೆಯಲ್ಲಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.