ಕಾಫಿನಾಡು ಚಿಕ್ಕಮಗಳೂರಿನಲ್ಲಿ ದಲಿತ ವರ್ಸಸ್ ಗೊಲ್ಲರ ನಡುವಿನ ಕಾಂಟ್ರವರ್ಸಿ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ತೀವ್ರ ಪಡೆಯುತ್ತಿರುವ ಪ್ರಕರಣ ಇಂದು ಮತ್ತಷ್ಟು ಕಾವೇರಿದೆ. ಗ್ರಾಮದ ಗೊಲ್ಲರಹಟ್ಟಿ ದೇವಾಲಯಕ್ಕೆ ದಲಿತರು ಪ್ರವೇಶ ಮಾಡೇ ಮಾಡ್ತೀವಿ ಅಂತ ಪಣತೊಟ್ಟಿದ್ದು ಸಂಘಟನೆ ಮುಖಂಡರು ದೇವಾಲಯ ಪ್ರವೇಶ ಮಾಡಿ,ಪೂಜೆಯನ್ನು ಮಾಡಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಜ.9): ಕಾಫಿನಾಡು ಚಿಕ್ಕಮಗಳೂರಿನಲ್ಲಿ ದಲಿತ ವರ್ಸಸ್ ಗೊಲ್ಲರ ನಡುವಿನ ಕಾಂಟ್ರವರ್ಸಿ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ತೀವ್ರ ಪಡೆಯುತ್ತಿರುವ ಪ್ರಕರಣ ಇಂದು ಮತ್ತಷ್ಟು ಕಾವೇರಿದೆ. ಗ್ರಾಮದ ಗೊಲ್ಲರಹಟ್ಟಿ ದೇವಾಲಯಕ್ಕೆ ದಲಿತರು ಪ್ರವೇಶ ಮಾಡೇ ಮಾಡ್ತೀವಿ ಅಂತ ಪಣತೊಟ್ಟಿದ್ದು ಸಂಘಟನೆ ಮುಖಂಡರು ದೇವಾಲಯ ಪ್ರವೇಶ ಮಾಡಿ,ಪೂಜೆಯನ್ನು ಮಾಡಿದರು.
undefined
ದೇವಾಲಯ ಬಾಗಿಲು ಹೊಡೆದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ ತಾಲೂಕು ಆಡಳಿತ
ಚಿಕ್ಕಮಗಳೂರು ಜಿಲ್ಲಯ ತರೀಕೆರೆ ತಾಲ್ಲೂಕಿನ ಗೊಲ್ಲರಹಟ್ಟಿ ಪ್ರವೇಶ ಮಾಡಿದ್ದ ದಲಿತ ಯುವಕನಿಗೆ ಹಲ್ಲೇ ಪ್ರಕರಣ ಇದೀಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ತರೀಕೆರೆ ತಾಲೂಕಿನ ಗೇರು ಮರಡಿ ಗ್ರಾಮ ದಲಿತ ವರ್ಸಸ್ ಗೊಲ್ಲರ ಸಮುದಾಯದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಜನವರಿ 1 ರಂದು ಗ್ರಾಮದ ಗೊಲ್ಲರ ಹಟ್ಟಿಯಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದ ದಲಿತ ಯುವಕ ಮಾರುತಿಗೆ ಹಲ್ಲೇ ನಡೆಸಿದ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ದಲಿತ ಸಂಘಟನೆಗಳ ಮುಖಂಡರು ತರೀಕೆರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ. ಗೇರು ಮರಡಿ ಗ್ರಾಮಕ್ಕೆ ಬಂದು ಗೊಲ್ಲರಹಟ್ಟಿಯ ರಂಗನಾಥ ದೇವಸ್ಥಾನ ಪ್ರವೇಶಕ್ಕೆ ಪಟ್ಟು ಹಿಡಿದ್ರು. ದಲಿತರು ಏಕೆ ? ದೇವಸ್ಥಾನ ಪ್ರವೇಶ ಮಾಡಬಾರದು..!. ನಾವು ಮನುಷ್ಯರೇ ದೇವರಿಗೆ ಎಲ್ಲರೂ ಒಂದೇ ಅಂತಾ ಮೌಢ್ಯತೆ ವಿರುದ್ಧ ಕಠಿಣ ಕ್ರಮ ಆಗಲೇಬೇಕೆಂದು ಅಂತೂ ಇಂತೂ ದಲಿತ ಮುಖಂಡರ ಯೋಜನೆಯಂತೆ ಗ್ರಾಮದ ಗೊಲ್ಲರ ಆರಾಧ್ಯ ದೈವ ರಂಗನಾಥ ಸ್ವಾಮಿ ದೇವಾಲಯಕ್ಕೆ ಪ್ರವೇಶ ಮಾಡಿಯೇ ಬಿಟ್ರು. ಗೊಲ್ಲರ ಹಟ್ಟಿ ಮುಖಂಡನ ಮನವೊಲಿಸಲು ಪ್ರಯತ್ನ ಮಾಡಿದ್ರು ದೇವಾಲಯದ ಬಾಗಿಲ ಕೀ ನೀಡದೆ ಇದ್ದಾಗ ತರೀಕೆರೆ ತಾಲೂಕು ಆಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯದ ಬಾಗಿಲು ಹೊಡೆದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ರು.ಇನ್ನೂ ಹಲ್ಲೆಗೊಳಗಾಗಿದ್ದ ಮಾರುತಿ ದೇವರಿಗೆ ಪೂಜೆ ಸಲ್ಲಿಸಿ ಅಸ್ಪೃಶ್ಯತೆ ಬಗ್ಗೆ ಆಕ್ರೋಶ ಹೊರ ಹಾಕಿದ್ರು.
ಅಸಮಾನತೆ, ಜಾತೀಯತೆ ಜೀವಂತ ದೇಶದಲ್ಲಿ ದಲಿತರು ಬೌದ್ಧ ಧರ್ಮೀಯರಾಗಬೇಕು- ಪುರುಷೋತ್ತಮ
ಗ್ರಾಮದಲ್ಲಿ ಪೊಲೀಸ್ ಬಿಗಿಭದ್ರತೆ :
ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಗೇರುಮರಡಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಗ್ರಾಮದ ಮುಖ್ಯದ್ವಾರಕ್ಕೆ ಪೊಲೀಸರನ್ನು ನಿಯೋಜಿಸಲಾಗಿತ್ತು. ರಾಜ್ಯದ ಹಲವು ಭಾಗಗಳಿಂದ ಗ್ರಾಮಕ್ಕೆ ಆಗಮಿಸಿದ್ದ ಸುಮಾರು 200ಕ್ಕೂ ಹೆಚ್ಚು ದಲಿತ ಮುಖಂಡರು ಪೊಲೀಸ್ ಭದ್ರತೆಯಲ್ಲಿ ದೇವಸ್ಥಾನ ಪ್ರವೇಶಿಸಿ ದೇವರಿಗೆ ನಮನ ಸಲ್ಲಿಸಿದ್ರು. ಜೊತೆಗೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಇನ್ನುಳಿದ ಆರೋಪಿಗಳನ್ನು ಬಂಧಿಸುವಂತೆ ಪೋಲಿಸ್ ಇಲಾಖೆ ಹಾಗು ಜಿಲ್ಲಾ ಆಡಳಿತಕ್ಕೆ ಆಗ್ರಹಿಸಿದ್ರು. ಪ್ರಕರಣ ಸಂಬಂಧ 15 ಆರೋಪಿಗಳ ಪೈಕಿ ಕೇವಲ ನಾಲ್ವರನ್ನು ಬಂಧಿಸಿರೋ ಪೊಲೀಸ್ ಇಲಾಖೆ ಇನ್ನುಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕೆಂದು ಪಟ್ಟು ಹಿಡಿದಿದ್ದು. ದೇವಾಲಯದ ಒಳ ಪ್ರವೇಶ ಮಾಡಿ ಅಸ್ಪೃಶ್ಯತೆ ದೇಶದಿಂದ ತೊಡಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ರು.ಇನ್ನೂ ದೇವಾಲಯದ ಬಾಗಿಲು ಹೊಡೆದ ಹಿನ್ನೆಲೆ ದೇವಾಲಯವನ್ನ ತಾಲೂಕು ಆಡಳಿತದ ಸಿಬ್ಬಂದಿಗಳು ಸೀಲ್ ಮಾಡಿದ್ರು. ಒಟ್ಟಾರೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹಿರಿಯ ಅಧಿಕಾರಿಗಳ ಮಧ್ಯ ಸ್ಥಿತಿಕೆಯಲ್ಲಿ ಮೌಡ್ಯ ಹಾಗೂ ಮೂಡ ನಂಬಿಕೆಗಳ ವಿರುದ್ಧ ಎಷ್ಟೇ ಜಾಗೃತಿ ಮೂಡಿಸಿದ್ರು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದೀಗ ಕಾಫಿ ನಾಡಿನ ಈ ವಿವಾದ ಇನ್ನೂ ಎಲ್ಲಿಗೆ ಹೋಗಿ ಮುಟ್ಟುತ್ತೋ ಆ ದೇವರೇ ಬಲ್ಲ. ನಾವು ನಮ್ಮವರು ನಮಗಾಗಿ ಅಂತ ಭಾವಿಸಿದ್ರೆ ಈ ಜಾತಿ ನಿರ್ಮೂಲನೆ ಕಡಿವಾಣಕ್ಕೆ ಪ್ರಬಲ ಅಸ್ತ್ರ ಸಿಗೋದು ಗ್ಯಾರಂಟಿ..!
ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಜೀವಂತ! ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ ಬಹಿಷ್ಕಾರ!