ಬೆಂಗಳೂರು ಹಸಿರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್
ಬೆಂಗಳೂರು [ನ.02]: ನಮ್ಮ ಮೆಟ್ರೋ ರೈಲು ನಿಗಮದ ಹಸಿರು ಮಾರ್ಗ (ನಾಗಸಂದ್ರ- ಯಲಚೇನಹಳ್ಳಿ)ದಲ್ಲಿ ಇಂದಿನಿಂದ (ಡಿ.2) ಆರು ಬೋಗಿಗಳ ಎರಡು ರೈಲುಗಳ ಸೇವೆ ಆರಂಭವಾಗಲಿದೆ.
ಒಟ್ಟಾರೆ ಆರು ಬೋಗಿಗಳ ಎರಡು ರೈಲುಗಳು ಹಸಿರು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿವೆ. ಭಾನುವಾರ ಹೊರತುಪಡಿಸಿ ಉಳಿದ ದಿನಗಳು 53 ಸುತ್ತಿನ ಪ್ರಯಾಣ ಮಾಡಲಿವೆ. ಬೆಳಗ್ಗೆ ಮತ್ತು ಸಂಜೆ ಗರಿಷ್ಠ ಸಮಯದಲ್ಲಿ ಆರು ಬೋಗಿಗಳ ರೈಲುಗಳು ನಿಗದಿತ ಸಮಯದಲ್ಲಿ ಸಂಚರಿಸಲಿವೆ.
undefined
ನಾಗಸಂದ್ರ-ಪೀಣ್ಯದಿಂದ ಯಲಚೇನಹಳ್ಳಿ ಮಾರ್ಗ: ಬೆಳಗ್ಗೆ 7.50, 8.13, 8.23, 8.50, 9.19, 9.24, 9.52, 10.00, 10.28 ಮತ್ತು 10.34 ಸಮಯಕ್ಕೆ ಹೊರಡಲಿದೆ. ಅದೇ ರೀತಿ ಸಂಜೆ 4.05, 4.40, 4.50, 5.41, 5.46, 5.51, 5.56, 6.30, 6.36, 6.41, 6.46, 7.30, 7.35, 7.40, 8.21, 8.28 ಸಮಯಕ್ಕೆ ಸಂಚರಿಸಲಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಯಲಚೇನಹಳ್ಳಿಯಿಂದ ನಾಗಸಂದ್ರ-ಪೀಣ್ಯವರೆಗೆ: ಬೆಳಗ್ಗೆ 8.31, 8.36, 8.41, 9.03, 9.08, 9.14, 9.40, 9.45, 10.11, 10.16 ಹಾಗೂ ಸಂಜೆ 3.53, 4.48, 4.53, 4.58, 5.03, 5.36, 5.41, 5.46, 5.52, 6.36, 6.41, 6.46, 6.51, 7.27, 7.32, 7.37, 7.42, 8.21, 8.29 ಹಾಗೂ 8.37 ಗಂಟೆಗೆ ಹೊರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಪ್ರಕಟಣೆ ತಿಳಿಸಿದೆ.