ಬನ್ನಿಕೋಡ ಪರ ನಟಿ ಜಯಮಾಲ ಮತಯಾಚನೆ| ಹಣ ಕೊಟ್ಟರೆ ಮತ ಬೀಳುತ್ತವೆ ಎಂದು ಬಿಜೆಪಿಯವರು ಭಾವಿಸಿದ್ದಾರೆ| ಜನತೆ ಮಾನವಂತರು, ಹೃದಯವಂತರು ಹಣಕ್ಕೆ ತಮ್ಮ ಮತ ಮಾರಿಕೊಳ್ಳುವುದಿಲ್ಲ ಎಂಬುದು ಫಲಿತಾಂಶ ಬಂದ ನಂತರ ತಿಳಿಯುತ್ತದೆ ಎಂದ ಜಯಮಾಲ|
ಹಿರೇಕೆರೂರು(ಡಿ.02): ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್. ಬನ್ನಿಕೋಡ ಪರವಾಗಿ ಪಟ್ಟಣದಲ್ಲಿ ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್, ಚಿತ್ರನಟಿ, ಮಾಜಿ ಸಚಿವೆ ಜಯಮಾಲ ಅವರು ರೋಡ್ ಶೋ ಮೂಲಕ ಮತಯಾಚಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಚಿವೆ ಜಯಮಾಲ, ರಾಜ್ಯದಲ್ಲಿ 15 ಅನರ್ಹರ ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಹಣ ಕೊಟ್ಟರೆ ಮತ ಬೀಳುತ್ತವೆ ಎಂದು ಬಿಜೆಪಿಯವರು ಭಾವಿಸಿದ್ದಾರೆ. ಜನತೆ ಮಾನವಂತರು, ಹೃದಯವಂತರು ಹಣಕ್ಕೆ ತಮ್ಮ ಮತ ಮಾರಿಕೊಳ್ಳುವುದಿಲ್ಲ ಎಂಬುದು ಫಲಿತಾಂಶ ಬಂದ ನಂತರ ತಿಳಿಯುತ್ತದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯದ ಮತದಾರರನ್ನು ದುಡ್ಡಿನಿಂದ ಕೊಂಡುಕೊಳ್ಳುವುದು ಸಾಧ್ಯವಿಲ್ಲ. ಪಕ್ಷ ತೊರೆದು, ಕಾನೂನು ಮೀರಿ ಹೋಗುವವರನ್ನು ಜನತೆ ಒಪ್ಪಿಕೊಳ್ಳುವುದಿಲ್ಲ, ಮುಂದಿನ ಪೀಳಿಗೆಗೆ ನಾವು ಒಳ್ಳೆಯ ಸಂದೇಶ ಕೊಡಬೇಕಿದೆ. ಅನರ್ಹರಿಗೆ ತಕ್ಕ ಪಾಠ ಕಲಿಸಬೇಕಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾಲೂಕಿಗೆ ಸಾಕಷ್ಟುಅನುದಾನ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್. ಬನ್ನಿಕೋಡ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಲೀಂ ಅಹ್ಮದ, ಬಿ.ಎಚ್. ಬನ್ನಿಕೋಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಪ್ರೇಮಾ ಪಾಟೀಲ, ಬಿ.ಎನ್. ಬಣಕಾರ, ಎಸ್.ಬಿ. ತಿಪ್ಪಣ್ಣನವರ, ನಿಸಾರ್ ಬಾಳಂಬೀಡ, ಎಚ್.ಎಸ್. ಕೋಣನವರ, ಐ.ಬಿ. ಗುಬ್ಬೇರ, ಕೆ.ಬಿ. ಕುರಿಯವರ, ದುರ್ಗಪ್ಪ ನೀರಲಗಿ, ವಿಜಯ ಮಡಿವಾಳರ, ಪ್ರಶಾಂತ ತಿರಕಪ್ಪನವರ, ವಿನಯ ಪಾಟೀಲ, ಆನಂದ ನಾಯ್ಕರ್ ಇತರರು ಹಾಜರಿದ್ದರು.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.