ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ..! ಉಲ್ಟಾ ಹೊಡೆದ ಶಾಸಕ ಬೇಳೂರು ಗೋಪಾಲಕೃಷ್ಣ

Published : Aug 04, 2026, 11:50 AM IST
gopalakrishna beluru

ಸಾರಾಂಶ

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ರಾಜೀನಾಮೆ ಘೋಷಿಸಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಡಿಕೆ ಶಿವಕುಮಾರ್ ಅವರ ಮಾತಿಗೆ ಬೆಲೆಕೊಟ್ಟು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಶಿವಮೊಗ್ಗ: ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ, ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಇಂದು ಬೆಳಗ್ಗೆ 10 ಗಂಟೆಗೆ ರಾಜೀನಾಮೆ ನೀಡುವುದಾಗಿ ನಿನ್ನೆ ಘೋಷಿಸಿದ್ದರು. ಆದರೆ ಇದೀಗ ಬೇಳೂರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡುವುದರ ಜತೆಗೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಸಿದ್ದರಾಮಯ್ಯ ಅವರು ಈಗ ಖುಷಿ ಇದ್ದಾರಲ್ಲ. ಹಾಗೆ ನೂರು ವರ್ಷ ಖುಷಿಯಿಂದ ಇರಲಿ. ನನಗೆ ಕಣ್ಣೀರು ಬರ್ತಿದೆ. ಗ್ಲಾಸ್ ತೆಗೆದು ತೋರಿಸಲಾ ಎಂದು ಪರೋಕ್ಷವಾಗಿ ಮಾಜಿ ಸಿಎಂ ಮೇಲೆ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.

ರಾಜೀನಾಮೆ ಕೊಡೋದಿಲ್ಲ!

ರಾಜೀನಾಮೆ ನೀಡುವವರದ್ದನ್ನು ತಕ್ಷಣವೇ ಪರಿಗಣಿಸಿ ಎಂದಿದ್ದಕ್ಕೆ ನಾನೇನು ಭಯಪಟ್ಟಿಲ್ಲ. ನಾನು ಭಯಪಡುವ ಮನುಷ್ಯ ಅಲ್ಲ. ನಾನೇ ಸಿಎಂ, ಹಾಗಾಗಿ ನಿಮ್ಮ ಜತೆ ಇದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರಿಗಾಗಿ ನಾನು ರಾಜೀನಾಮೆ ನಿರ್ಣಯವನ್ನು ವಾಪಾಸ್ ಪಡೆದುಕೊಂಡಿದ್ದೇನೆ. ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ:

ಇನ್ನು ಮುಂದುವರೆದು, ಯಾದೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಇಂದು ಸಭೆಯಿದೆ. ಅಲ್ಲಿ ಯಾರೂ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತೇನೆ. ಈಗಾಗಲೇ ಸುರ್ಜೇವಾಲಾ ಅವರು ಮಾತನಾಡಿದ್ದಾರೆ. ಅದೇ ರೀತಿ ಯಶವಂತರಾಯ ಗೌಡರ ಜತೆಯೂ ಸಹ ಮಾತನಾಡಿದ್ದಾರೆ. ನಾನು ಕ್ಷೇತ್ರದ ಜನರ ಜತೆ ಮಾತನಾಡುತ್ತೇನೆ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಎಲ್ಲರಿಗೂ ರಾಜೀನಾಮೆ ವಾಪಾಸ್ ಪಡೆಯಲು ಹೇಳುತ್ತೇನೆ ಎಂದು ಬೇಳೂರು ಹೇಳಿದ್ದಾರೆ.

ನಿನ್ನೆ ಬೇಳೂರು ಗೋಪಾಲಕೃಷ್ಣ ಹೇಳಿದ್ದೇನು?

ಮಧು ಬಂಗಾರಪ್ಪ ಅವರಿಗೆ ಶಿವಮೊಗ್ಗ ಜಿಲ್ಲೆಯಿಂದ ಸಚಿವ ಸ್ಥಾನ ಸಿಕ್ಕಿದ ಬೆನ್ನಲ್ಲೇ ಆಕ್ರೋಶಗೊಂಡಿದ್ದ ಬೇಳೂರು ಗೋಪಾಲಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿ ಇಲ್ಲಿ ಪ್ರಭಾವಿ ಕುಟುಂಬಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ನಾನು ಕೂಡಾ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳ ಹಾಗೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಮಾತ್ರ ಸೂಕ್ತ ಸ್ಥಾನಮಾನ ನೀಡಲಾಗುತ್ತಿದೆ ಎಂದ ಆರೋಪಿಸಿದ್ದರು.

PREV
Read more Articles on
click me!

Recommended Stories

ಸಂಪುಟದಲ್ಲಿ ಮಧು ಬಂಗಾರಪ್ಪಗೆ ಮತ್ತೆ ಲಾಟರಿ..! ಮಧುಗೆ ಮತ್ತೆ ಸಚಿವ ಸ್ಥಾನ ಸಿಕ್ಕಿದ್ದು ಹೇಗೆ?
ಬರಗಾಲದಲ್ಲಿಯೂ ಕಷ್ಟಪಟ್ಟು ಬೆಳೆದಿದ್ದ ಒಂದೂವರೆ ಎಕರೆ ಬೆಳ್ಳುಳ್ಳಿ ಕದ್ದ ಕಳ್ಳರು; ರೈತ ಕಣ್ಣೀರು