
ಚಾಮರಾಜನಗರ : ಕೃಷಿ ಜಮೀನಿನಲ್ಲಿ ಮೋಟರ್, ಕೇಬಲ್ ಕಳ್ಳತನ ನಡೆಯುವುದು ನೋಡಿದ್ದೆವು. ಕೇಳಿದ್ದೆವು. ಆದರೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ರೈತರೊಬ್ಬರು ಮಳೆ ಇಲ್ಲದೆ, ಬರದ ನಡುವೆ ಬೆಳದು ಕಟಾವಿಗೆ ಬಂದಿದ್ದ ಬೆಳ್ಳುಳ್ಳಿಯನ್ನೇ ಕಳವು ಮಾಡಿರುವ ಆಘಾತಕಾರಿ ಪ್ರಸಂಗವೊಂದು ಗುಂಡ್ಲುಪೇಟೆ ತಾಲೂಕಿನ ಭೀಮನಬೀಡುವಿನಲ್ಲಿ ನಡೆದಿದೆ.
ಕಟಾವಿಗೆ ಬಂದ ಬೆಳ್ಳುಳ್ಳಿಯನ್ನೇ ಕಳ್ಳತನ ಮಾಡಿದ ಪ್ರಸಂಗ ನಡೆದಿದೆ. ಗ್ರಾಮದ ರೈತ ಸಿದ್ದರಾಜುಗೆ ಸೇರಿದ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಟಾವಿಗೆ ಬಂದ ಬೆಳ್ಳುಳ್ಳಿ ಫಸಲನ್ನೇ ಭಾನುವಾರ ರಾತ್ರಿ ಐದಾರು ಕ್ವಿಂಟಲ್‌ನಷ್ಟು ಕದ್ದು ಪರಾರಿಯಾಗಿದ್ದಾರೆ.
ರೈತ ಸಿದ್ದರಾಜು ಕಷ್ಟ ಪಟ್ಟು ಬೆಳೆದು ಇನ್ನೇನೋ ಕಟಾವಿಗೆ ಬಂದು ರೈತನ ಕಿಸೆಗೆ ಹಣ ಸೇರುವ ಸಮಯದಲ್ಲಿ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ ಎಂದು ರೈತ ಅವಲತ್ತು ಕೊಂಡಿದ್ದಾನೆ. ರೈತ ಕಷ್ಟ ಪಟ್ಟು ಬೆಳೆದ ಫಸಲನ್ನು ರಾತ್ರೋ ರಾತ್ರಿ ಬೆಳ್ಳುಳ್ಳಿ ಫಸಲನ್ನು ಕಿತ್ತುಕೊಂಡು ಪರಾರಿಯಾಗಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಳ್ಳರ ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಂಡೀಪುರ ಸಫಾರಿ ದರ ಬಹುತೇಕ ಡಬಲ್! ಸೆಪ್ಟೆಂಬರ್ 1ರಿಂದ ಜಾರಿಗೆ: ಕ್ಯಾಮೆರಾಗೂ ಭಾರೀ ಶುಲ್ಕ, ಇಲ್ಲಿದೆ ಹೊಸ ದರಪಟ್ಟಿ!
ಇದನ್ನೂ ಓದಿ: ಸ್ವಾತಂತ್ರ್ಯ ನಂತರ ಗ್ರಾಮಕ್ಕೆ ಮೊದಲ ಬಸ್; ಮಿಣ್ಯಂ ಗ್ರಾಪಂನ ಕೊಪ್ಪಕ್ಕೆ ಬಂತು KSRTC