ಕೊರೋನಾ ಬಳಿಕ ಎಲ್ಲಾ ಕ್ಷೇತ್ರಗಳು ಸಂಪೂರ್ಣ ಬಂದ್ ಆಗಿದ್ದು ಇದೀಗ ಮೊದಲಿನ ಸ್ಥಿತಿಗೆ ತಲುಪುತ್ತಿವೆ. ಇದರ ಬೆನ್ನಲ್ಲೇ ಚಿತ್ರಮಂದಿರದಲ್ಲಿ ಆಫರ್‌ಗಳನ್ನು ನೀಡಲಾಗುತ್ತಿದೆ.
ಬಳ್ಳಾರಿ (ಫೆ.13): ಚಿತ್ರಮಂದಿರದಿಂದ ದೂರ ಉಳಿದಿರುವ ಪ್ರೇಕ್ಷಕರನ್ನು ಸೆಳೆಯಲು ಬಳ್ಳಾರಿ ನಗರದ ಶಿವ ಹಾಗೂ ಗಂಗಾ ಚಿತ್ರಮಂದಿರಗಳು ಗ್ರಾಹಕರಿಗೆ ನೀಡಿರುವ ಆಫರ್ ಇದು.
ಯಾವುದೇ ಸಿನಿಮಾಕ್ಕೆ ಒಂದು ಟಿಕೆಟ್ ಕೊಂಡರೆ ಸಾಕು, ಇಬ್ಬರು ಸಿನಿಮಾ ನೋಡಬಹುದು. ಫೆ.12 ಶುಕ್ರವಾರದಿಂದ ಒಂದು ವಾರಗಳ ಕಾಲ ಪ್ರಯೋಗಿಕವಾಗಿ ‘ಒಂದು ಟಿಕೆಟ್ ಕೊಂಡರೆ ಇಬ್ಬರಿಗೆ ಪ್ರವೇಶ’ ಆಫರ್ ಶುರು ಮಾಡಿದ್ದು ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಬಂದಲ್ಲಿ ಮೂರು ತಿಂಗಳು ಮುಂದುವರಿಸಲು ಚಿತ್ರಮಂದಿರದ ವ್ಯವಸ್ಥಾಪಕರು ನಿರ್ಧರಿಸಿದ್ದಾರೆ.
ಭಜರಂಗಿ 2 ಚಿತ್ರದಲ್ಲಿದ್ದ ಭಯಂಕರ ಪಾತ್ರ; ಭಯ ಹುಟ್ಟಿಸುವ ಪಾತ್ರ ಮಾಡಿದ್ಯಾರು?
ಕೊರೋನಾ ವೈರಸ್ ದಾಳಿಯಿಂದ ಸ್ಥಗಿತಗೊಂಡ ಚಿತ್ರಮಂದಿರಗಳು 9 ತಿಂಗಳ ಬಳಿಕ ಮತ್ತೆ ಪ್ರದರ್ಶನ ಶುರು ಮಾಡಿವೆ. ಆದರೆ, ನಿರೀಕ್ಷೆಯಂತೆ ಪ್ರೇಕ್ಷಕರ ಆಗಮನವಾಗಿಲ್ಲ. ಹೀಗಾಗಿ ಪ್ರೇಕ್ಷಕರನ್ನು ಸೆಳೆಯಬೇಕು ಎಂಬ ಉದ್ದೇಶದಿಂದ ‘ಒಂದು ಟಿಕೆಟ್ ಕೊಂಡರೆ ಇಬ್ಬರಿಗೆ ಪ್ರವೇಶ’ದ ಆಫರ್ ನೀಡಿದ್ದಾರೆ. ಮಂಗಳೂರಲ್ಲಿ ಕೂಡ ಚಿತ್ರಮಂದಿರವೊಂದರಲ್ಲಿ ಒಬ್ಬ ವ್ಯಕ್ತಿ ನಿರ್ದಿಷ್ಟಹಣ ನೀಡಿ ಬುಕ್ ಮಾಡಿಕೊಂಡು ಕುಟುಂಬದವರು, ಸ್ನೇಹಿತರ ಜೊತೆ ಸಿನಿಮಾ ನೋಡವ ಆಫರ್ ನೀಡಲಾಗಿತ್ತು. ಆದರೆ, ಕೊರೋನಾ ನಿಯಮ ಪಾಲನೆ ಕಡ್ಡಾಯವಾಗಿತ್ತು.