ಮಹಾಮಳೆಯಿಂದ ರಸ್ತೆಗಳಲ್ಲಿ ಹೊಂಡ: ಗುದ್ದಲಿ, ಸಲಾಕೆ ಹಿಡಿದಿದ್ದಾರೆ ಸಂಚಾರಿ ಪೊಲೀಸರು

By Kannadaprabha NewsFirst Published Aug 25, 2019, 11:01 AM IST
Highlights

ಪೆನ್‌, ಪೇಪರ್ ಹಿಡಿದು ಫೈನ್ ಹಾಕುವ ಟ್ರಾಫಿಕ್ ಪೊಲೀಸರು ಗುದ್ದಲಿ, ಸಲಾಕೆ ಹಿಡಿದು ರಸ್ತೆಹೊಂಡಗಳನ್ನು ಮುಚ್ಚುತ್ತಿದ್ದಾರೆ. ಮಹಾಮಳೆಗೆ ಡಾಂಬರು ಕಿತ್ತುಬಂದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಸ್ತೆಹೊಂಡಗಳನ್ನು ಸ್ವತಃ ತಾವೇ ಮುಚ್ಚುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಬೆಳಗಾವಿ ಟ್ರಾಫಿಕ್ ಪೊಲೀಸರು.

ಬೆಳಗಾವಿ(ಆ.25): ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನಗರದ ರಸ್ತೆಗಳೆಲ್ಲವೂ ಹದಗೆಟ್ಟಿವೆ. ಸಂಚಾರಕ್ಕೆ ಅಯೋಗ್ಯವಾಗಿವೆ. ಇದೇ ರೀತಿ​ಯಾಗಿ ಕೆಎಲ್‌ಇ ರಸ್ತೆಯಲ್ಲಿ ಬಿದ್ದಿರುವ ತೆಗ್ಗುಗುಂಡಿಗಳನ್ನು ಸಂಚಾರಿ ಪೊಲೀಸರು ಸ್ವತಃ ಗುದ್ದಲಿ, ಸಲಕೆ ಹಿಡಿದು ಮುಚ್ಚಿದ್ದಾರೆ.

ಕೆಎಲ್‌ಇ ರಸ್ತೆಯಲ್ಲಿ ಬಿದ್ದಿ​ರುವ ತೆಗ್ಗುಗುಂಡಿ ಮುಚ್ಚಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸಾರ್ವ​ಜ​ನಿ​ಕರು ಸಾಕಷ್ಟುಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದ​ರಿಂದ ದೊಡ್ಡ ಕಂದಕಗಳು ಸೃಷ್ಟಿಯಾಗಿದ್ದವು.

ಸ್ಫೋಟಕ ಪತ್ತೆ​ದಾರಿ ನೈನಾ ಇನ್ನು ನೆನಪು ಮಾತ್ರ, ಭಾವುಕರಾದ ಸಿಬ್ಬಂದಿ

ಈ ಮಾರ್ಗದಲ್ಲಿ ಕರ್ತವ್ಯದ ಮೇಲಿದ್ದ ಸಂಚಾರಿ ಪೊಲೀಸರು ಈ ರಸ್ತೆ ಮೇಲೆ ವಾಹನ ಚಾಲಕರ ಸಂಕಷ್ಟಅರಿತು, ತಾವೇ ಟ್ರ್ಯಾಕ್ಟರ್‌ ಮೂಲಕ ಮಣ್ಣು ತರಿಸಿ, ಗುದ್ದಲಿ, ಸಲಕೆ ಹಿಡಿದು ತೆಗ್ಗುಗಳನ್ನು ಮುಚ್ಚಿದರು. ಇವರ ಕಾರ್ಯಕ್ಕೆ ನಗ​ರದ ಜನರು ಮೆಚ್ಚುಗೆ ವ್ಯಕ್ತ​ಪ​ಡಿ​ಸಿದ್ದಾರೆ.

ತ್ರಿವಳಿ ತಲಾಖ್‌ ನಿಷೇಧ ಬಳಿಕ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು

ಸಂಚಾರಕ್ಕೆ ಅಯೋಗ್ಯವಾದ ರಸ್ತೆಗಳಲ್ಲಿ ವಾಹನಗಳ ಅಪಘಾತಗಳು ಸಂಭವಿಸುತ್ತಲೇ ಇವೆ. ರಸ್ತೆಗಳನ್ನು ದುರಸ್ತಿ ಮಾಡುವು​ದನ್ನು ಬಿಡಿ ಕನಿಷ್ಠ ಮಟ್ಟರಸ್ತೆಗಳಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯವನ್ನೂ ಮಹಾನಗರ ಪಾಲಿಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಪಾಲಿಕೆ ಮಾಡಬೇಕಾದ ಕೆಲಸವನ್ನು ಸಂಚಾರಿ ಪೊಲೀಸರು ಮಾಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.

Belagavi Traffic Police fills potholes

click me!