ಶಾಸಕನಲ್ಲ, ಆದ್ರೂ ಸರ್ಕಾರಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡ್ತಾರೆ! ಯಾರಿವರು?

By Web DeskFirst Published Jan 31, 2019, 1:21 PM IST
Highlights

ಶಿಷ್ಟಾಚಾರದ ಪ್ರಕಾರ ಸರ್ಕಾರಿ ಕಾಮಗಾರಿಗಳಿಗೆ ಜನಪ್ರತಿನಿಧಿಗಳು ಶಂಕುಸ್ಥಾಪನೆ ಅಥವಾ ಉದ್ಘಾಟನೆ ಮಾಡುತ್ತಾರೆ. ಶಾಸಕರು ಇಲ್ಲದ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಅಥವಾ ಗ್ರಾಮ ಪಂಚಾಯತ್ ಅಧ್ಯಕ್ಷರು ಅದನ್ನು ನೆರವೇರಿಸುತ್ತಾರೆ. ಆದರೆ ಪ್ರಭಾವಿ ಶಾಸಕರೊಬ್ಬರು ಅದನ್ನೆಲ್ಲಾ ಬದಿಗಿಟ್ಟು ತನ್ನ ಮಗನಿಂದ ಗುದ್ದಲಿ ಪೂಜೆ ಮಾಡಿಸಿದ್ದಾರೆ.!

ಬೆಳಗಾವಿ: ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸರ್ಕಾರಿ ಕಾರು ದುರ್ಬಳಕೆ ಮಾಡಿರುವ ಬೆನ್ನಲ್ಲೇ, ಶಾಸಕರೊಬ್ಬರ ‘ಪುತ್ರವ್ಯಾಮೋಹ’ದ  ಘಟನೆ ಬೆಳಗಾವಿಯಿಂದ ವರದಿಯಾಗಿದೆ. 

ಶಿಷ್ಟಾಚಾರದ ಪ್ರಕಾರ ಸರ್ಕಾರಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ, ಗುದ್ದಲಿಪೂಜೆ ಅಥವಾ ಯೋಜನೆಗಳ ಉದ್ಘಾಟನೆ ಮಾಡಬೇಕಾದವರು ಜನಪ್ರತಿನಿಧಿಗಳು. ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ  ಲಕ್ಷ್ಮಿ ಹೆಬ್ಬಾಳ್ಕರ್, ಶಿಷ್ಟಾಚಾರ ಉಲ್ಲಂಘಿಸಿ ತನ್ನ ಮಗನಿಂದ ಕಾಮಗಾರಿಯ ಗುದ್ದಲಿ ಪೂಜೆ ಮಾಡಿಸಿದ್ದಾರೆ.

ಇದನ್ನೂ ಓದಿ: ಗಾಂಧಿ ಫೊಟೋಗೆ ಗುಂಡಿಟ್ಟ ಹಿಂದೂ ಮಾಹಸಾಭಾ ನಾಯಕಿ: ವಿಡಿಯೋ!

ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ಕಾಮಗಾರಿಯೊಂದಕ್ಕೆ ಮಗನಿಂದ ಗುದ್ದಲಿ ಪೂಜೆ ಮಾಡಿಸಿದ ಶಾಸಕಿ, ಅದನ್ನು ಸೊಶಿಯಲ್ ಮಿಡಿಯಾದಲ್ಲಿ ಬೇರೆ ಹಾಕಿಕೊಂಡಿದ್ದಾರೆ!

ಶಾಸಕರು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ಸಾಮಾನ್ಯವಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷ ಅಥವಾ ತಾ.ಪಂ ಅಧ್ಯಕ್ಷರು ಅದನ್ನು ನೆರವೇರಿಸುತ್ತಾರೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿರುವ ಆನಂದ್ ಸಿಂಗ್ ಜೊತೆ ಜಮೀರ್ ಸೀಕ್ರೆಟ್ ಚರ್ಚೆ

ಕಳೆದ ಮಂಗಳವಾರ, ಸಚಿವ ರೇವಣ್ಣ ಪುತ್ರ ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರಿ ಕಾರು ಬಳಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.  
 

click me!